ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಂದು ಆಧುನಿಕ ಮಂಗಳೂರು ನಗರ ನಿರ್ಮಾಪಕ ಉಳ್ಳಾಲ ಶ್ರೀನಿವಾಸ ಮಲ್ಯ ಜನ್ಮ ದಿನಾಚರಣೆ

ಮಂಗಳೂರು: ಇಂದು (ನ.21) ಸ್ವಾತಂತ್ರ್ಯ ಹೋರಾಟಗಾರ ದಕ್ಷಿಣ ಕನ್ನಡ- ಉಡುಪಿ ಜಿಲ್ಲಾ ಪ್ರದೇಶವನ್ನು ಭಾರತದ ಸಂಸತ್ತಿನಲ್ಲಿ ಮೊದಲ ಬಾರಿಗೆ ಪ್ರತಿನಿಧಿಸಿದ ಸಂಸದ ಮಂಗಳೂರು ಬಂದರು, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಮಾರ್ಗ, ರಾಷ್ಟ್ರೀಯ ತಾಂತ್ರಿಕ ವಿದ್ಯಾ ಸಂಸ್ಥೆ ಇತ್ಯಾದಿಗಳನ್ನು ಸ್ಥಾಪಿಸಿ, ಪ್ರದೇಶದ ಸರ್ವತೋಮುಖ ಅಭಿವೃದ್ಧಿಯ ಕಾರಣೀಕರ್ತ ಉಳ್ಳಾಲ ಶ್ರೀನಿವಾಸ ಮಲ್ಯ ಇವರ ಜನ್ಮ ದಿನ.
03:10 PM Nov 21, 2023 IST | Ashitha S

ಮಂಗಳೂರು: ಇಂದು (ನ.21) ಸ್ವಾತಂತ್ರ್ಯ ಹೋರಾಟಗಾರ ದಕ್ಷಿಣ ಕನ್ನಡ- ಉಡುಪಿ ಜಿಲ್ಲಾ ಪ್ರದೇಶವನ್ನು ಭಾರತದ ಸಂಸತ್ತಿನಲ್ಲಿ ಮೊದಲ ಬಾರಿಗೆ ಪ್ರತಿನಿಧಿಸಿದ ಸಂಸದ ಮಂಗಳೂರು ಬಂದರು, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಮಾರ್ಗ, ರಾಷ್ಟ್ರೀಯ ತಾಂತ್ರಿಕ ವಿದ್ಯಾ ಸಂಸ್ಥೆ ಇತ್ಯಾದಿಗಳನ್ನು ಸ್ಥಾಪಿಸಿ, ಪ್ರದೇಶದ ಸರ್ವತೋಮುಖ ಅಭಿವೃದ್ಧಿಯ ಕಾರಣೀಕರ್ತ ಉಳ್ಳಾಲ ಶ್ರೀನಿವಾಸ ಮಲ್ಯ ಇವರ ಜನ್ಮ ದಿನ.

Advertisement

ಈ ಪ್ರಯುಕ್ತ ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಪಡೀಲು ವೃತ್ತದಲ್ಲಿ ಸ್ಥಾಪಿಸಲ್ಪಟ್ಟಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜನ್ಮ ದಿನಾಚರಣೆ ಆಚರಿಸಲಾಯಿತು. ಟ್ರಸ್ಟಿ ಡಾ. ಮೋಹನ ಪೈ ಪ್ರಾಸ್ತಾವಿಕವಾಗಿ ಶ್ರೀನಿವಾಸ ಮಲ್ಯರ ಸರಳ ಜೀವನ ಅಗಾಧ ಸೇವೆಯ ವಿವರ ನೀಡಿದರು.

ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಹಿರಿಯ ಲೆಕ್ಕ ಪರಿಶೋಧಕ ನಂದಗೋಪಾಲ ಶೆಣೈ, ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜಾ, ಖಜಾಂಚಿ ಬಿ. ಆರ್ ಭಟ್, ಟ್ರಸ್ಟಿ ರಮೇಶ್ ಡಿ ನಾಯಕ್, ವಾಲ್ಟರ್ ಡಿಸೋಜಾ, ಕೆ ಸಿ ಸಿ ಐ ಅಧ್ಯಕ್ಷ ಅನಂತೇಶ್ ವಿ ಪ್ರಭು, ಗೌ. ಕಾರ್ಯದರ್ಶಿ ಅಶ್ವಿನ ಪೈ ಮಾರೂರು, ಸ್ಥಳೀಯ ಕಾರ್ಪೊರೇಟರ್ ರೂಪಾ ಶ್ರೀ, ಹಾಗೂ ಕಿಶೋರ್ ಕೊಟ್ಟಾರಿ, ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಸಿ.ಎ. ಜಗನ್ನಾಥ ಕಾಮತ, ಉಳ್ಳಾಲ ವಿನೋದ ಮಲ್ಯ ಹಾಗೂ ನವೀನ್ ನಾಯಕ್, ಗಣೇಶ್ ಭಟ್ ಹಾಗೂ ಡಾ ಬಿ. ದೇವದಾಸ್ ಪೈ ಇವರೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Advertisement
Tags :
indiaKARNATAKALatestNewsNewsKannadaಜನ್ಮ ದಿನಾಚರಣೆನಗರ ನಿರ್ಮಾಪಕಬೆಂಗಳೂರುಶ್ರೀನಿವಾಸ ಮಲ್ಯ
Advertisement
Next Article