ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಂದು (ಮೇ ೦8) ವಿಶ್ವ ರೆಡ್ ಕ್ರಾಸ್ ದಿನಾಚರಣೆ

ವಿಶ್ವ ರೆಡ್ ಕ್ರಾಸ್ ದಿನವನ್ನು ವಿಶ್ವದಾದ್ಯಂತ ಮೇ 8ರಂದು ಆಚರಿಸಲಾಗುತ್ತದೆ. ಸ್ವಿಸ್ ಉದ್ಯಮಿ ಮತ್ತು ವಿಶ್ವದ ಅತಿದೊಡ್ಡ ಮಾನವೀಯ ನೆರವು ಸಂಸ್ಥೆಯಾದ ರೆಡ್ ಕ್ರಾಸ್ ನ ಸಂಸ್ಥಾಪಕ ಹೆನ್ರಿ ಡ್ಯುನಾಂಟ್ ಅವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುತ್ತದೆ.
01:23 PM May 08, 2024 IST | Chaitra Kulal

ವಿಶ್ವ ರೆಡ್ ಕ್ರಾಸ್ ದಿನವನ್ನು ವಿಶ್ವದಾದ್ಯಂತ ಮೇ 8ರಂದು ಆಚರಿಸಲಾಗುತ್ತದೆ. ಸ್ವಿಸ್ ಉದ್ಯಮಿ ಮತ್ತು ವಿಶ್ವದ ಅತಿದೊಡ್ಡ ಮಾನವೀಯ ನೆರವು ಸಂಸ್ಥೆಯಾದ ರೆಡ್ ಕ್ರಾಸ್ ನ ಸಂಸ್ಥಾಪಕ ಹೆನ್ರಿ ಡ್ಯುನಾಂಟ್ ಅವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುತ್ತದೆ.

Advertisement

1901ರಲ್ಲಿ ಮೊದಲ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದ ಅವರು, ರೆಡ್‌ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿಯ ಸ್ಥಾಪಕರಾಗಿದ್ದಾರೆ. ತುರ್ತು ಮತ್ತು ಸಂಘರ್ಷದ ಸಮಯದಲ್ಲಿ ಅಗತ್ಯವಿರುವವರಿಗೆ ಬೆಂಬಲ ನೀಡುವ ಸಲುವಾಗಿ ರೆಡ್ ಕ್ರಾಸ್ ಅನ್ನು ಸ್ಥಾಪಿಸಲಾಗಿದೆ.

ಇಟಲಿಯಲ್ಲಿನ ಸೋಲ್ಫೆರಿನೊ ಕದನದ ವೇಳೆ ಗಾಯಗೊಂಡ ಸೈನಿಕರು ಮತ್ತು ನಾಗರಿಕರಿಗೆ ಚಿಕಿತ್ಸೆ ನೀಡಲು ಕೊರತೆ ಉಂಟಾದ ಪರಿಣಾಮ ತೀವ್ರವಾಗಿ ಮನನೊಂದ ಸ್ವಿಸ್ ಉದ್ಯಮಿ ಹೆನ್ರಿ ಡ್ಯೂನಾಂಟ್ ಅವರು ಕೆಲವು ವರ್ಷಗಳ ಅನಂತರ 1863 ರಲ್ಲಿ ಡ್ಯುನಾಂಟ್ ಸ್ವಯಂಸೇವಕ-ಬೆಂಬಲಿತ ಪರಿಹಾರ ಸಂಘಗಳನ್ನು ಸಂಘಟಿಸಿದರು.

Advertisement

ಸ್ವಿಸ್ ರಾಷ್ಟ್ರೀಯ ಧ್ವಜದಿಂದ ಪ್ರೇರಿತವಾದ ಲಾಂಛನ ಪಡೆದ ಸಂಸ್ಥೆಯು ಶೀಘ್ರದಲ್ಲೇ ರೆಡ್ ಕ್ರಾಸ್ ಎಂದು ಜನಪ್ರಿಯವಾಯಿತು. ಮೊದಲನೇ ಮಹಾಯುದ್ಧ ಮತ್ತು ಎರಡನೇ ಮಹಾಯುದ್ಧದಲ್ಲಿ ಗಾಯಗೊಂಡ ನಾಗರಿಕರು ಮತ್ತು ಯುದ್ಧ ಕೈದಿಗಳಿಗೆ ಸಹಾಯ ಮಾಡುವಲ್ಲಿ ರೆಡ್ ಕ್ರಾಸ್ ಪ್ರಮುಖ ಪಾತ್ರ ವಹಿಸಿತು.

ಮಾನವ ಹಕ್ಕುಗಳ ಸಂರಕ್ಷಣೆಗೆ ರೆಡ್‌ಕ್ರಾಸ್‌ನ ಪ್ರಾಮುಖ್ಯತೆ ಅಗಾಧವಾಗಿದೆ. ಲಾಭರಹಿತ ಸಂಸ್ಥೆಯ ಮುಖ್ಯ ಧ್ಯೇಯ “ಪರ್ ಹ್ಯುಮಾನಿಟೇಟಮ್ ಆಡ್ ಪೇಸೆಮ್” ಅಂದರೆ “ಮಾನವೀಯತೆಯೊಂದಿಗೆ, ಶಾಂತಿಯ ಕಡೆಗೆ” ಎಂಬುದಾಗಿದೆ. ಇದು ವಿಶ್ವ ಶಾಂತಿಯ ಸಂದೇಶವನ್ನು ಪ್ರತಿಪಾದಿಸುತ್ತದೆ. ಸಂಘಟನೆಯು ಸಂಘರ್ಷ ವಲಯಗಳು ಅಥವಾ ನೈಸರ್ಗಿಕ ವಿಕೋಪಗಳ ಸ್ಥಳಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತದೆ.

2024ರ ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನದ ಥೀಮ್ “ನಾನು ಸಂತೋಷದಿಂದ ನೀಡುತ್ತೇನೆ ಮತ್ತು ನಾನು ನೀಡುವ ಸಂತೋಷವು ಬಹುಮಾನವಾಗಿದೆ”. ಇದು ದಾನ ಮತ್ತು ಸೇವೆಯ ಸಂತೋಷವನ್ನು ಪ್ರೋತ್ಸಾಹಿಸುತ್ತದೆ.

Advertisement
Tags :
Henry DunantLatestNewsNewsKarnatakaRed Cross
Advertisement
Next Article