ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಹುಭಾಷಾ ನಟ ಪ್ರಕಾಶ್ ರಾಜ್ ಗೆ ಇಂದು ಜನ್ಮದಿನದ ಸಂಭ್ರಮ

ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ನಟ ಪ್ರಕಾಶ್ ರಾಜ್ ಇಂದು 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1990ರಲ್ಲಿ 'ಮಿಥಿಲೆಯ ಸೀತೆಯರು' ಎಂಬ ಕನ್ನಡ ಚಿತ್ರದಲ್ಲಿ ವೈದ್ಯನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು.
12:54 PM Mar 26, 2024 IST | Ashitha S

ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ನಟ ಪ್ರಕಾಶ್ ರಾಜ್ ಇಂದು 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1990ರಲ್ಲಿ 'ಮಿಥಿಲೆಯ ಸೀತೆಯರು' ಎಂಬ ಕನ್ನಡ ಚಿತ್ರದಲ್ಲಿ ವೈದ್ಯನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು.

Advertisement

ಪ್ರಕಾಶ್ ದೂರದರ್ಶನದ ಬಿಸಿಲು ಕುದುರೆ (ಕನ್ನಡ) ಮತ್ತು ಗುಡ್ಡದ ಭೂತ ( ತುಳು ಮತ್ತು ಕನ್ನಡ) ಧಾರಾವಾಹಿಗಳೊಂದಿಗೆ ತಮ್ಮ ದೂರದರ್ಶನ ವೃತ್ತಿಜೀವನ ಆರಂಭಿಸಿದ ಅವರು, ನಂತರದ ದಿನಗಳಲ್ಲಿ ರಾಮಾಚಾರಿ , ರಣಧೀರ , ನಿಷ್ಕರ್ಷ ಮತ್ತು ಲಾಕಪ್ ಡೆತ್ ಮುಂತಾದ ಕನ್ನಡ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು.

ಪ್ರಕಾಶ್ ತುಂಬಾ ಪ್ರತಿಭಾವಂತ ನಟ ಮತ್ತು ಈ ಪ್ರತಿಭೆ ಅವರಿಗೆ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ ಸೂಪರ್‌ ಸ್ಟಾರ್‌. ಇನ್ನು ಪ್ರಕಾಶ್ ರಾಜ್ ಅವರ ನಿಜವಾದ ಹೆಸರು ಪ್ರಕಾಶ್ ರೈ. ನಟಿ ಲಲಿತಾ ಅವರನ್ನು 1994 ರಲ್ಲಿ ವಿವಾಹವಾದರು. ದಂಪತಿಗೆ 3 ಮಕ್ಕಳಿದ್ದರು. ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ. ಆದರೆ ಹುಟ್ಟಿದ 5 ವರ್ಷಕ್ಕೆ ಮಗನ ಸಾವಾಯಿತು.. ನಂತರ ಪತಿ-ಪತ್ನಿಯರ ಸಂಬಂಧವೂ ಹಳಸತೊಡಗಿ... 2009ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು.

Advertisement

1990ರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ಮುತ್ತಿನ ಹಾರ’ ಚಿತ್ರದಲ್ಲಿ ತೆರೆ ಹಂಚಿಕೊಂಡರು. 1996 ರಲ್ಲಿ ಕಲ್ಕಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟ ಪ್ರಕಾಶ್ ರೈ ಅವರ ಅದ್ಭುತ ಪಾತ್ರಕ್ಕೆ ತಮಿಳ್ ನಾಡು ಸ್ಟೇಟ್ ಫಿಲಂ ಅವಾರ್ಡ್ ಪ್ರಶಸ್ತಿ ದೊರಕಿತ್ತು.

ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಎಲ್ಲಾ ರೀತಿಯ ಪಾತ್ರಗಳಲ್ಲಿ ಅಭಿನಯಿಸಿರುವ ಇವರು ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ.

ಎಂತಹುದೇ ಪಾತ್ರ ಕೊಟ್ಟರೂ ಮಾಡಿ ತೋರಿಸುವ ನಟನಾ ಶೈಲಿ ಹೊಂದಿರುವ ನಟ ಪ್ರಕಾಶ್​​ ರೈ ಹಿಟ್ ಸಿನಿಮಾಗಳ ಜತೆ ಫ್ಲಾಪ್ ಸಿನಿಮಾಗಳನ್ನೂ ನೀಡಿದ್ದೂ ಇದೆ. ನಾಯಕ ನಟನಾಗಿ ಅಭಿನಯಿಸುವುದಕ್ಕಿಂತ ಹೆಚ್ಚಾಗಿ ಖಳನಾಯಕನಾಗಿ ಅಭಿನಯಿಸದ್ದೆ ಹೆಚ್ಚಾದರೂ ತಮ್ಮ ನಟನೆಯಿಂದ ಹೆಚ್ಚಿನ ಜನಪ್ರೀಯತೆಯನ್ನು ಗಳಿಸಿದರು.

ಇನ್ನು, ಕೆಲ ವರ್ಷಗಳಿಂದ ಚಿತ್ರರಂಗವಲ್ಲದೇ ರಾಜಕೀಯಕ್ಕೂ ಪ್ರವೇಶಿಸಿರುವ ಅವರು, ಓರ್ವ ಸಕ್ರೀಯ ರಾಜಕಾರಣಿ ಎಂದರೂ ತಪ್ಪಾಗಲಾರದು.

ಪ್ರಕಾಶ್ ರಾಜ್​ ತಮ್ಮ ಅದ್ಭುತ ನಟನೆಯ ಮೂಲಕವೇ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಕರ್ನಾಟಕ ಸ್ಟೇಟ್ ಫಿಲಂ ಅವಾರ್ಡ್ (ಅತ್ಯುತ್ತಮ್ಮ ನಾಯಕ ನಟ), ನ್ಯಾಷನಲ್ ಫಿಲಂ ಅವಾರ್ಡ್ (ಅತ್ಯುತ್ತಮ್ಮ ನಾಯಕ ನಟ), ಜುರಿ ಅವಾರ್ಡ್, 1998ರ ವರ್ಷದಲ್ಲಿ ಇರುವರ್ ಚಿತ್ರದಲ್ಲಿನ ಪೋಷಕ ಪಾತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಸರಿಸುಮಾರು 38ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

 

Advertisement
Tags :
GOVERNMENTHBDindiaKARNATAKALatestNewsNewsKannadaprakash rajಬೆಂಗಳೂರುಮಂಗಳೂರು
Advertisement
Next Article