For the best experience, open
https://m.newskannada.com
on your mobile browser.
Advertisement

19 ಕೋಟಿ ರೂಪಾಯಿ ದಂಡ ವಸೂಲಿ ಮಾಡಲು ಮುಂದಾದ ಟ್ರಾಫಿಕ್​ ಪೊಲೀಸರು

ಬೆಂಗಳೂರು ನಗರ ಸಂಚಾರಿ ಪೊಲೀಸರು ತಮ್ಮ ಇಲಾಖೆ​ಗೆ ಬರಬೇಕಿದ್ದ 19 ಕೋಟಿ ಹಣಕ್ಕಾಗಿ ಮೆಗಾ ಆಪರೇಷನ್ ಕೈಗೊಳ್ಳಲು ಮುಂದಾಗಿದ್ದಾರೆ. 
09:08 AM Apr 23, 2024 IST | Ashika S
19 ಕೋಟಿ ರೂಪಾಯಿ ದಂಡ ವಸೂಲಿ ಮಾಡಲು ಮುಂದಾದ ಟ್ರಾಫಿಕ್​ ಪೊಲೀಸರು

ಬೆಂಗಳೂರು: ಬೆಂಗಳೂರು ನಗರ ಸಂಚಾರಿ ಪೊಲೀಸರು ತಮ್ಮ ಇಲಾಖೆ​ಗೆ ಬರಬೇಕಿದ್ದ 19 ಕೋಟಿ ಹಣಕ್ಕಾಗಿ ಮೆಗಾ ಆಪರೇಷನ್ ಕೈಗೊಳ್ಳಲು ಮುಂದಾಗಿದ್ದಾರೆ.

Advertisement

ನಗರದಲ್ಲಿರುವ 3,71,516 ವಾಹನಗಳ‌ ಮೇಲೆ ಬರೋಬ್ಬರಿ 19,54,16,400 ರೂಪಾಯಿ ದಂಡ ಇದೆ. ಈ 19 ಕೋಟಿ ರೂಪಾಯಿ ದಂಡವನ್ನ ವಸೂಲಿ ಮಾಡಲು ಮುಂದಾಗಿರುವ ಸಂಚಾರಿ ಪೊಲೀಸರು 1 ಲಕ್ಷ ರೂಪಾಯಿಗೂ ಅಧಿಕ ದಂಡ ಇರುವ 123 ವಾಹನಗಳ ಪಟ್ಟಿ ತಯಾರಿಸಿ, ವಾಹನಗಳ ಮಾಲೀಕರಿಗೆ ನೋಟಿಸ್ ಕೊಟ್ಟು ದಂಡ ವಸೂಲಿ ಮಾಡಲು ಮುಂದಾಗಿದ್ದಾರೆ.

ಇದರ ಹೊರತಾಗಿಯೂ ದಂಡ ಕಟ್ಟದಿದ್ದರೆ, ಅಂತವರ ವಿರುದ್ಧ ಕೋರ್ಟ್​ನಲ್ಲಿ ಚಾರ್ಜ್​ ಶೀಟ್ ಹಾಕಲು ಸಿದ್ದವಾಗಿದ್ದಾರೆ.

Advertisement

ಯಾವ್ಯಾವ ವಾಹನದ ಮೇಲೆ ಎಷ್ಟು ದಂಡ?: 2742 ಬೈಕ್​ಗಳು ​3,61,294 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು, ಇದರ ಮೇಲೆ 18,76,34,300 ರೂ. ದಂಡ ಇದೆ. 100 ಕಾರುಗಳು 8603 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದರಿಂದ 69,00,900 ರೂ. ದಂಡ ಕಟ್ಟಬೇಕಾಗಿದೆ.

09 ವ್ಯಾನ್ 848 ಬಾರಿ ಟ್ರಾಫಿಕ್ಸ್​ ರೂಲ್ಸ್ ಬ್ರೇಕ್ ಮಾಡಿದ್ದರಿಂದ 4,67,500 ದಂಡ ಕಟ್ಟಬೇಕಾಗಿದೆ. 2 ಸ್ಕೂಲ್ ಬಸ್ ಗಳು 156 ಸಂಚಾರಿ ನಿಯಮ ಗಾಳಿಗೆ ತೂರಿದ್ದರಿಂದ 88,000, ರೂ. 01 ಮ್ಯಾಕ್ಸಿ ಕ್ಯಾಬ್ 82 ಬಾರಿ ಟ್ರಾಫಿಕ್ ರೂಲ್ಸ್​ ಬ್ರೇಕ್ ಮಾಡಿದ್ದರಿಂದ 56,000 ರೂ. ದಂಡ ಕಟ್ಟಬೇಕಾಗಿದೆ. ಅಲ್ಲದೆ ಇತರೆ 04 ವಾಹನಗಳು 433 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದು, 2,43,100 ರೂಪಾಯಿ ದಂಡ ಕಟ್ಟಬೇಕಿವೆ.

Advertisement
Tags :
Advertisement