For the best experience, open
https://m.newskannada.com
on your mobile browser.
Advertisement

ಯುವಕನನ್ನು ಬಾತ್​ರೂಮ್​ ಒಳಗಡೆ ಲಾಕ್​ ಮಾಡಿಕೊಂಡ ಮಂಗಳಮುಖಿ: ವಿಡಿಯೋ ವೈರಲ್

  ಕೆಲವು ಮಂಗಳಮುಖಿಯರು ರೈಲಿನಲ್ಲಿ ಬಂದು ಪ್ರಯಾಣಿಕರಿಂದ ಹಣ ಕೇಳುವುದು ಸಾಮಾನ್ಯವಾಗಿದೆ.‌ ಕೆಲವೊಮ್ಮೆ ಹಣ ಕೊಡದಿದ್ದರೆ ಅಸಭ್ಯವಾಗಿಯೂ ವರ್ತಿಸುತ್ತಾರೆ. ಆದರೆ ಇದೀಗ ಮಂಗಳಮುಖಿಯರ ಅತಿರೇಕದ ವರ್ತನೆಯ ವಿಡಿಯೋವೊಂದು ವೈರಲ್‌ ಆಗಿದೆ.
10:25 AM Apr 05, 2024 IST | Ashitha S
ಯುವಕನನ್ನು ಬಾತ್​ರೂಮ್​ ಒಳಗಡೆ ಲಾಕ್​ ಮಾಡಿಕೊಂಡ ಮಂಗಳಮುಖಿ  ವಿಡಿಯೋ ವೈರಲ್

ಮುಂಬೈ:  ಕೆಲವು ಮಂಗಳಮುಖಿಯರು ರೈಲಿನಲ್ಲಿ ಬಂದು ಪ್ರಯಾಣಿಕರಿಂದ ಹಣ ಕೇಳುವುದು ಸಾಮಾನ್ಯವಾಗಿದೆ.‌ ಕೆಲವೊಮ್ಮೆ ಹಣ ಕೊಡದಿದ್ದರೆ ಅಸಭ್ಯವಾಗಿಯೂ ವರ್ತಿಸುತ್ತಾರೆ. ಆದರೆ ಇದೀಗ ಮಂಗಳಮುಖಿಯರ ಅತಿರೇಕದ ವರ್ತನೆಯ ವಿಡಿಯೋವೊಂದು ವೈರಲ್‌ ಆಗಿದೆ.

Advertisement

ವಿಡಿಯೋದಲ್ಲಿ ರೈಲಿನ ಒಳಗೆ ಕೆಲವು ಯುವಕರು ಬಾತ್​ರೂಮ್​ ಬಾಗಿಲಿನ ಬಳಿ ನಿಂತಿದ್ದಾರೆ. ಅಲ್ಲಿ ಓರ್ವ ಮಂಗಳಮುಖಿ ಕೈ ಚಪ್ಪಾಳೆ ತಟ್ಟುತ್ತಾ ಯುವಕರ ಬಳಿಕ ಹಣ ಕೇಳುತ್ತಾಳೆ. ಆದರೆ, ಅಷ್ಟರಲ್ಲಿ ಬಾತ್​ರೂಂ ಪಕ್ಕದಲ್ಲೇ ನಿಂತಿದ್ದ ಹುಡುಗನನ್ನು ಬಲವಂತವಾಗಿ ಒಳಗಡೆ ಎಳೆದುಕೊಂಡು ಲಾಕ್ ಮಾಡಿಕೊಳ್ಳುತ್ತಾಳೆ. ಹೊರಗಡೆ ಇದ್ದ ಕೆಲವು ಯುವಕರು ಎಷ್ಟೇ ಹೊತ್ತು ಬಡಿದರೂ ಬಾಗಿಲು ತೆಗೆಯುವುದೇ ಇಲ್ಲ. ಸ್ವಲ್ಪ ಹೊತ್ತಿನ ನಂತರ ಪ್ಯಾಂಟ್​ ಸರಿಮಾಡಿಕೊಂಡು ಯುವಕ ಹೊರಬರುತ್ತಾನೆ. ಸ್ವಲ್ಪ ಸಮಯದ ಬಳಿಕ ಮಂಗಳಮುಖಿಯು ಹೊರಬಂದು ಮತ್ತೊಂದು ಬೋಗಿಗೆ ಹೋಗುತ್ತಾಳೆ.

ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ನೆಟ್ಟಿಗರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ರೈಲುಗಳಲ್ಲಿ ಭದ್ರತೆಯ ಕೊರತೆ ಇದೆ. ಮಂಗಳಮುಖಿಯರು ಮಿತಿ ಮೀರಿ ವರ್ತಿಸುತ್ತಿದ್ದಾರೆ ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ.

Advertisement

Advertisement
Tags :
Advertisement