ʼಯುಐʼ ಸಿನಿಮಾದ ನ್ಯೂ ಸಾಂಗ್ ರಿಲೀಸ್: ಇದು ಪಕ್ಕಾ ಟ್ರೋಲ್ ಆಗುತ್ತೆ
ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರೋ ‘ಯುಐ’ ಚಿತ್ರದ ಲೇಟೆಸ್ಟ್ ಸಾಂಗ್ ರಿಲೀಸ್ ಆಗಿದೆ. ಈ ಹಿಂದೆ ಚೀಪ್ ಚೀಪ್ ಅಂತೇಳಿ ಸೆನ್ಸೇಷನ್ ಸೃಷ್ಟಿಸಿದ್ದ ಉಪ್ಪಿ ಈಗ ಟ್ರೋಲ್ ಸಾಂಗ್ ಬಿಡುಗಡೆ ಮಾಡಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಇತ್ತೀಚಿನ ದಿನದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಪದಗಳನ್ನೇ ಹಾಡಿನ ಸಾಹಿತ್ಯ ರಚನೆ ಮಾಡಿರೋದು ಇದರ ಸ್ಪೆಷಲ್.
ರಿಲೀಸ್ ಆದ ಹೊಸ ಸಾಂಗ್ನಲ್ಲಿ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ಟ್ರೋಲ್ ಆಗಿದ್ದ ಪದಗಳನ್ನೇ ಬಳಸಿ ಹಾಡು ರಚಿಸಲಾಗಿದೆ. ಇನ್ನು ಕನ್ನಡ ವರ್ಷನ್ ಗೀತೆಗೆ ನರೇಶ್ ಕುಮಾರ್ ಎಂಬುವವರು ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಐಶ್ವರ್ಯ ರಂಗರಾಜನ್, ಹರ್ಷಿಕಾ ದೇವನಾಥ್, ಅನೂಪ್ ಭಂಡಾರಿ ಹಾಗೂ ಅಜನೀಶ್ ಹಾಡಿದ್ದಾರೆ.
ಹಾರ್ ಹೀರೋಗಳು, ಕರಿಮಣಿ ಮಾಲೀಕ, ಬೆಳ್ಳುಳ್ಳಿ ಕಬಾಬ್.. ಒನ್ ಮೋರ್ ಒನ್ ಮೋರ್, ಹೆಂಗ್ ಪುಂಗ್ಲಿ, ಆಲ್ರೈಟ್ ಮುಂದಕ್ಕೆ ಹೋಗೋಣ, ಜೋಡೆತ್ತು, ರಾಜ್ಯಕ್ಕೆ ಖುಷಿ ಕೊಡೋ ಸುದ್ದಿ, ಅಕ್ಕ ಏನಂತೀರಾ? ನಾ ಡ್ರೈವರ್ ತಗಡು, ಗುಮ್ಮಿಸಿಕೊಂಡು, ಕಂಜ್ರಾಜಲೇಷನ್ ಬ್ರದರ್, ಹೀರೋ ಎಲ್ಲಿದ್ದಿಯಪ್ಪಾ? ನಾನು ನಂದಿನಿ, ಗೂಸ್ಬಂಪ್ಸ್, ಡೋಲೋ 650.. ಬಿಸಿ ರಾಗಿ ಮುದ್ದೆ, ಬಡವರ ಮಕ್ಳು ಬೆಳಿಬೇಕು, ಸುಂದರನ ಸನ್ಯಾಸಿ, ಫ್ರೀ ಫ್ರೀ ಫ್ರೀ ಎಲ್ಲಾ ಫ್ರೀ ಚಂದ್ರು ಇನ್ನು ಹಲವು ಟ್ರೋಲ್ ಶಬ್ಧಗಳನ್ನೇ ಈ ಸಾಂಗ್ನಲ್ಲಿ ಬಳಸಲಾಗಿದೆ.