For the best experience, open
https://m.newskannada.com
on your mobile browser.
Advertisement

ಟ್ರುತ್ & ಡೇರ್‌ ಗೇಮ್‌ನಲ್ಲಿ ಬಾಲಕಿಯ ನಗ್ನ ಫೋಟೋಗಳನ್ನು ಕೇಳಿ ಬ್ಲ್ಯಾಕ್‌ಮೇಲ್‌

ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯಂತೆ ನಟಿಸಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಜೊತೆ ಸ್ನೇಹ ಬೆಳೆಸಿದ ಭೂಪನೊಬ್ಬ ನಂತರ ಆಕೆಯ ನಗ್ನ ಚಿತ್ರಗಳನ್ನು ಕೇಳಿ ಬ್ಲಾಕ್ ಮೇಲ್ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
03:42 PM Mar 01, 2024 IST | Ashitha S
ಟ್ರುತ್   ಡೇರ್‌ ಗೇಮ್‌ನಲ್ಲಿ ಬಾಲಕಿಯ ನಗ್ನ ಫೋಟೋಗಳನ್ನು ಕೇಳಿ ಬ್ಲ್ಯಾಕ್‌ಮೇಲ್‌

ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯಂತೆ ನಟಿಸಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಜೊತೆ ಸ್ನೇಹ ಬೆಳೆಸಿದ ಭೂಪನೊಬ್ಬ ನಂತರ ಆಕೆಯ ನಗ್ನ ಚಿತ್ರಗಳನ್ನು ಕೇಳಿ ಬ್ಲಾಕ್ ಮೇಲ್ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

Advertisement

ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಕ್ಕಾಗಿ ಬ್ಲಾಕ್ ಮೇಲ್ ಮಾಡಿದ ಆರೋಪದ ಮೇಲೆ ಉತ್ತರಾಖಂಡದ 27 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯನ್ನು ಸುಭಾನ್ ಅಲಿ ಎಂದು ಗುರುತಿಸಲಾಗಿದ್ದು, ಈತ ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ್ದ. ಹುಡುಗಿಯರಿಗೆ ರಿಕ್ವೆಸ್ಟ್‌ ಕಳುಹಿಸುತ್ತಿದ್ದ ಆತ ಬಾಲಕಿ ಜೊತೆ ಸ್ನೇಹ ಸಂಪಾದಿಸಿದ್ದಾನೆ. ತನ್ನ ಜೊತೆ ಹುಡುಗಿಯೇ ಚಾಟ್ ಮಾಡುತ್ತಿರುವುದು ಎಂದು ನಂಬಿದ ಬಾಲಕಿ ಆತನ ಜೊತೆ ಕ್ಲೋಸ್ ಆಗಿದ್ದಾಳೆ.

Advertisement

ನಂತರ ಒಂದು ದಿನ ಇಬ್ಬರೂ ಸಾಮಾಜಿಕ ಜಾಲತಾಣದಲ್ಲೇ ಟ್ರುತ್ ಆಂಡ್ ಡೇರ್ ಆಟ ಆಡಿದ್ದು, ಈ ವೇಳೆ ಆತ ಬಾಲಕಿಯ ನಗ್ನ ಫೋಟೋ ಕಳುಹಿಸಲು ಡೇರ್ ನೀಡಿದ್ದಾನೆ. ಆಕೆ ಒಪ್ಪದೇ ಇದ್ದಾಗ ಒತ್ತಡ ಹಾಕಿ ಫೋಟೋ ತರಿಸಿಕೊಂಡಿದ್ದಾನೆ. ಅಷ್ಟು ಮಾತ್ರವಲ್ಲದೇ ಆಕೆಯ ಫೋಟೋ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ನಂತರ, ಸಂತ್ರಸ್ತ ಬಾಲಕಿಯ ತಾಯಿ ತನ್ನ ಫೋನ್‌ನಲ್ಲಿ ಮಗಳ ಖಾಸಗಿ ಫೋಟೋಗಳು ಮತ್ತು ವೀಡಿಯೊಗಳನ್ನು ನೋಡಿ ಅವಳನ್ನು ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ನಂತರ ಸಂತ್ರಸ್ತೆಯ ತಂದೆ ನೈಋತ್ಯ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Advertisement
Tags :
Advertisement