For the best experience, open
https://m.newskannada.com
on your mobile browser.
Advertisement

ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ಮಿಂಚಿದ ಕನ್ನಡತಿಯ ದುರಂತ ಅಂತ್ಯ

ತೆಲುಗು ಸಿನಿಮಾ ಹಾಗೂ ಕಿರುತೆರೆಯಲ್ಲಿ ಅಭಿನಯಿಸಿದ ಬಹಳಷ್ಟು ಕನ್ನಡಿಗರು ಸಕ್ಸಸ್ ಕಂಡಿದ್ದಾರೆ. ತೆಲುಗು ಕಿರುತೆರೆಯಲ್ಲಿ ಕರ್ನಾಟಕದ ಕಲಾವಿದರಿಗೆ ಸಾಕಷ್ಟು ಬೇಡಿಕೆಯೂ ಇದೆ. ಕನ್ನಡಿಗರು ಅಭಿನಯಿಸಿದ ಧಾರಾವಾಹಿಗಳು ತೆಲುಗು ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಾರೆ. ಹೀಗೆ ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ಮಿಂಚಿದ ಕನ್ನಡತಿ ಪವಿತ್ರ ಜಯರಾಂ ಇವತ್ತು ದುರಂತದಲ್ಲಿ ಅಂತ್ಯವಾಗಿದ್ದಾರೆ.
01:36 PM May 12, 2024 IST | Ashitha S
ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ಮಿಂಚಿದ ಕನ್ನಡತಿಯ ದುರಂತ ಅಂತ್ಯ

ಬೆಂಗಳೂರು: ತೆಲುಗು ಸಿನಿಮಾ ಹಾಗೂ ಕಿರುತೆರೆಯಲ್ಲಿ ಅಭಿನಯಿಸಿದ ಬಹಳಷ್ಟು ಕನ್ನಡಿಗರು ಸಕ್ಸಸ್ ಕಂಡಿದ್ದಾರೆ. ತೆಲುಗು ಕಿರುತೆರೆಯಲ್ಲಿ ಕರ್ನಾಟಕದ ಕಲಾವಿದರಿಗೆ ಸಾಕಷ್ಟು ಬೇಡಿಕೆಯೂ ಇದೆ. ಕನ್ನಡಿಗರು ಅಭಿನಯಿಸಿದ ಧಾರಾವಾಹಿಗಳು ತೆಲುಗು ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಾರೆ. ಹೀಗೆ ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ಮಿಂಚಿದ ಕನ್ನಡತಿ ಪವಿತ್ರ ಜಯರಾಂ ಇವತ್ತು ದುರಂತದಲ್ಲಿ ಅಂತ್ಯವಾಗಿದ್ದಾರೆ.

Advertisement

ಪವಿತ್ರ ಜಯರಾಂ ಅವರು ತೆಲುಗಿನ ತ್ರಿನಯನಿ ಸೀರಿಯಲ್‌ ಮೂಲಕ ತೆಲುಗು ಕಿರುತೆರೆ ವೀಕ್ಷಕರ ಮನೆ ಮಾತಾಗಿದ್ದರು. ಕನ್ನಡತಿ ಪವಿತ್ರ ಜಯರಾಂ ಅವರು ಇಂದು ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಪವಿತ್ರ ಜಯರಾಂ ಸಾವಿನ ಸುದ್ದಿ ತಿಳಿದ ತೆಲುಗು ಕಿರುತೆರೆಯ ಅನೇಕ ಕಲಾವಿದರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

ಪವಿತ್ರ ಜಯರಾಂ ಅವರು ಮೂಲತಃ ಮಂಡ್ಯ ಜಿಲ್ಲೆಯವರು. ಕನ್ನಡದ ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾ ರಮಣ ಧಾರವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದ ಪವಿತ್ರ ಜಯರಾಂ ಅವರು ನಂತರ ತೆಲುಗು ಕಿರುತೆರೆಯಲ್ಲಿ ಅಭಿನಯಿಸಿದ್ದರು. ಅಲ್ಲದೇ ಇವರು ಗ್ರಂಥಾಲಯದಲ್ಲಿ ಹಾಗೂ ಸೇಲ್ಸ್​ ಗರ್ಲ್​ ಆಗಿ ಕೂಡ ಕೆಲಸ ಮಾಡಿದ್ದರಂತೆ. ಜೀವನದಲ್ಲಿ ಹಂತ ಹಂತವಾಗಿ ಮುಂಬರುತ್ತಿರುವವರು ಇವರಾಗಿದ್ದರು. ತಮ್ಮ ವೃತ್ತಿಜೀವನದುದ್ದಕ್ಕೂ, ಪವಿತ್ರಾ ಅವರು ಕಾಸ್ಟಿಂಗ್ ಕೌಚ್‌ನಂತಹ ಉದ್ಯಮದ ಕರಾಳ ಮುಖವನ್ನು ಕಂಡಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

Advertisement

ಇವರು ತಮ್ಮದೇ ಆದ ಯುಟ್ಯೂಬ್ ಚಾನೆಲ್ ತೆರೆದು ಆ ಮೂಲಕವೂ ಹೆಚ್ಚಿನ ಜನರನ್ನು ತಲುಪಿದ್ದರು. ನಾನು ಹೆಚ್ಚಿನ ಶಿಕ್ಷಣ ಪಡೆದಿರಲಿಲ್ಲ. ಕೆಲಸಕ್ಕೆ ಸೇರುವಾಗ ಹಣ ಸಂಪಾಧನೆ ಮಾಡುವಾಗ ತಾನು ತುಂಬಾ ಕಷ್ಟಪಟ್ಟಿದ್ದೆ ಎಂದು ಅವರು ಹೇಳಿಕೊಂಡಿದ್ದರು. ಈ ರೀತಿ ಕಷ್ಟಪಟ್ಟು ಅವರು ಸೀರಿಯಲ್ ಕ್ಷೇತ್ರದಲ್ಲಿ ನಂತರ ತುಂಬಾ ಉತ್ತಮ ಹೆಸರು ಗಳಿಸಿದ್ದರು.

ಹೈದರಾಬಾದ್ ಸಮೀಪದ ಮೆಹಬೂಬ್ ನಗರದಲ್ಲಿ ಇಂದು ಬೆಳಗ್ಗೆ ಪವಿತ್ರ ಜಯರಾಂ ಅವರು ಪ್ರಯಾಣಿಸುತ್ತಿದ್ದ ಕಾರು, ಬಸ್‌ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ. ಭೀಕರ ಅಪಘಾತದಲ್ಲಿ ನಟಿ ಪವಿತ್ರ ಜಯರಾಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಳೆ ಪವಿತ್ರಾ ಜಯರಾಂ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ರವಾನೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ನಟಿ ಪವಿತ್ರಾ ಜಯರಾಂ ಸಾವಿಗೆ ಕನ್ನಡ ಹಾಗೂ ತೆಲುಗಿನ ಕಿರುತೆರೆ ಲೋಕ ದುಃಖಿತವಾಗಿದೆ. ಇನ್ನೂ ಹೆಚ್ಚಿನ ಕಾಲ ಬದುಕಿ ಬಾಳಬೇಕಿತ್ತು ಎಂದು ಆಶಿಸುತ್ತಿದ್ದಾರೆ.

Advertisement
Tags :
Advertisement