For the best experience, open
https://m.newskannada.com
on your mobile browser.
Advertisement

ಟಿ.ವಿ. ಪತ್ರಕರ್ತೆ ಸೌಮ್ಯಾ ತಂದೆ ವಿಶ್ವನಾಥನ್ ನಿಧನ

ದೆಹಲಿಯಲ್ಲಿ 2008ರಲ್ಲಿ ನಡೆದಿದ್ದ ಟಿ.ವಿ. ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ ಎರಡು ವಾರಗಳ ನಂತರ ಸೌಮ್ಯಾ ತಂದೆ ವಿಶ್ವನಾಥನ್‌ ಮೃತಪಟ್ಟಿದ್ದಾರೆ.
12:36 PM Dec 10, 2023 IST | Ashitha S
ಟಿ ವಿ  ಪತ್ರಕರ್ತೆ ಸೌಮ್ಯಾ ತಂದೆ ವಿಶ್ವನಾಥನ್ ನಿಧನ

ಚೆನ್ನೈ: ದೆಹಲಿಯಲ್ಲಿ 2008ರಲ್ಲಿ ನಡೆದಿದ್ದ ಟಿ.ವಿ. ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ ಎರಡು ವಾರಗಳ ನಂತರ ಸೌಮ್ಯಾ ತಂದೆ ವಿಶ್ವನಾಥನ್‌ ಮೃತಪಟ್ಟಿದ್ದಾರೆ.

Advertisement

ವಿಶ್ವನಾಥನ್‌ ಅವರಿಗೆ 82 ವರ್ಷ ವಯಸ್ಸಾಗಿತ್ತು. ತಮ್ಮ ಮಗಳ 41ನೇ ಹುಟ್ಟುಹಬ್ಬದ ಒಂದು ದಿನದ ನಂತರ ಅವರು ನಿಧನರಾಗಿದ್ದಾರೆ. ಅಪರಾಧಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜೀತ್ ಮಲಿಕ್ ಮತ್ತು ಅಜಯ್ ಕುಮಾರ್‌ಗೆ ಎಂಬುವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಪತ್ರಕರ್ತೆ ಸೌಮ್ಯ ಅವರು, 2008ರ ಸೆ.30ರಂದು ಮುಂಜಾನೆ 3.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ತನ್ನ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ದರೋಡೆ ಮಾಡುವ ಉದ್ದೇಶದಿಂದ ವಸಂತ ವಿಹಾರ್‌ ಬಳಿ ಕಾರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಅವರ ತಲೆಗೆ ಗುಂಡು ಹಾರಿಸಿ ಹತ್ಯೆಗೈದಿದ್ದರು. ಈ ಕೃತ್ಯ ರಾಷ್ಟ್ರದಾದ್ಯಂತ ಸುದ್ದಿಯಾಗಿತ್ತು. ಈ ಪ್ರಕರಣದ ಆರೋಪಿಗಳಿಗೆ ಇತ್ತೀಚೆಯಷ್ಟೇ ಶಿಕ್ಷೆ ಪ್ರಕಟಗೊಂಡಿತ್ತು.

Advertisement

Advertisement
Tags :
Advertisement