ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

50ನೇ ವಯಸ್ಸಿನಲ್ಲಿ ಪದವಿ ಪಡೆದ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ

ನಟ ಅಕ್ಷಯ್ ಕುಮಾರ್  ಅವರ ಪತ್ನಿ ಟ್ವಿಂಕಲ್ ಖನ್ನಾ ತಮ್ಮ 50ನೇ ವಯಸ್ಸಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಅಕ್ಷಯ್ ಕುಮಾರ್ ತಮ್ಮ ಪತ್ನಿ ಜೊತೆಗಿರುವ ಫೋಟೋ ಪೋಸ್ಟ್ ಮಾಡಿ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ. 
03:09 PM Jan 17, 2024 IST | Ashika S

ಮುಂಬೈ: ನಟ ಅಕ್ಷಯ್ ಕುಮಾರ್  ಅವರ ಪತ್ನಿ ಟ್ವಿಂಕಲ್ ಖನ್ನಾ ತಮ್ಮ 50ನೇ ವಯಸ್ಸಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಅಕ್ಷಯ್ ಕುಮಾರ್ ತಮ್ಮ ಪತ್ನಿ ಜೊತೆಗಿರುವ ಫೋಟೋ ಪೋಸ್ಟ್ ಮಾಡಿ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ.

Advertisement

ಪತ್ನಿ ಓದುತ್ತೇನೆ ಎಂದಾಗ ಅಕ್ಷಯ್ ಕುಮಾರ್ ಬೆಂಬಲ ನೀಡಿದರು. ಈ ಬೆಂಬಲದಿಂದ ಟ್ವಿಂಕಲ್ ಅವರು ಪದವಿ ಪೂರ್ಣಗೊಳಿಸಿದ್ದಾರೆ. ಈ ಸಂತೋಷದ ಕ್ಷಣವನ್ನು ಅಕ್ಷಯ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

‘ಎರಡು ವರ್ಷಗಳ ಹಿಂದೆ ನೀನು ಮತ್ತೆ ಓದಬೇಕು ಎಂದು ಹೇಳಿದಾಗ ನನಗೆ ತುಂಬಾ ಆಶ್ಚರ್ಯವಾಯಿತು. ಆದರೆ ನೀನು ಅದಕ್ಕಾಗಿ ಶ್ರಮಿಸುತ್ತಿರುವುದನ್ನು ನೋಡಿದಾಗ ನಾನು ಸೂಪರ್ ವುಮನ್ ಮದುವೆಯಾಗಿದ್ದೇನೆ ಎಂಬುದು ಗೊತ್ತಾಯಿತು. ಮನೆ, ವೃತ್ತಿ ಬದುಕು, ಮಕ್ಕಳ ಪಾಲನೆ ಜೊತೆ ವಿದ್ಯಾರ್ಥಿ ಜೀವನವನ್ನು ನೀನು ಚೆನ್ನಾಗಿ ನಿರ್ವಹಿಸಿದ್ದೀಯ. ನಾನು ಸ್ವಲ್ಪ ಹೆಚ್ಚು ಅಧ್ಯಯನ ಮಾಡಿದ್ದರೆ ನಿನ್ನ ಬಗ್ಗೆ ಎಷ್ಟು ಹೆಮ್ಮೆಪಡುತ್ತೇನೆ ಎಂದು ಹೇಳಲು ಸಾಕಷ್ಟು ಪದಗಳು ಸಿಗುತ್ತಿದ್ದವು ಎಂದು ನನಗೆ ಅನಿಸುತ್ತಿದೆ. ಟೀನಾ.. ಆಲ್ ದಿ ಬೆಸ್ಟ್ ಮತ್ತು ಐ ಲವ್ ಯೂ’ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

Advertisement

ಈ ಪೋಸ್ಟ್‌ಗೆ ಟ್ವಿಂಕಲ್ ಕೂಡ ಕಾಮೆಂಟ್ ಮಾಡಿದ್ದು. ‘ನನಗೆ ಎತ್ತರಕ್ಕೆ ಹಾರಲು ಪ್ರೋತ್ಸಾಹಿಸುವ ನಿನ್ನಂತ ಸಂಗಾತಿ ಸಿಕ್ಕಿರುವುದು ನನ್ನ ಅದೃಷ್ಟ. ನಾನು ಬಿದ್ದಾಗ ನನ್ನನ್ನು ಎತ್ತಿಕೊಳ್ಳಲು ನೀನು ಯಾವಾಗಲೂ ಸಿದ್ಧನಾಗಿರುತ್ತೀಯಾ. ನಮ್ಮ ದಾಂಪತ್ಯಕ್ಕೆ 23 ವರ್ಷಗಳು’ ಎಂದು ಬರೆದುಕೊಂಡಿದ್ದಾರೆ.

ನಟಿಯಾಗಿ ಈ ಮೊದಲು ಗುರುತಿಸಿಕೊಂಡರು. ನಂತರ ಅವರು ನಟನೆ ತೊರೆದರು. ಆ ಬಳಿಕ ಅಂಕಣಕಾರ್ತಿಯಾಗಿ, ಇಂಟೀರಿಯರ್ ಡಿಸೈನರ್ ಆಗಿ ಗುರುತಿಸಿಕೊಂಡು  ಈಗ ಟ್ವಿಂಕಲ್ ಪದವಿ ಕ್ಯಾಪ್ ಧರಿಸಿ ಮಿಂಚಿದ್ದಾರೆ.

ಟ್ವಿಂಕಲ್ ಲಂಡನ್ ವಿಶ್ವವಿದ್ಯಾಲಯದ ಗೋಲ್ಡ್ ಸ್ಮಿತ್ಸ್‌ನಲ್ಲಿ ಫಿಕ್ಷನ್ ಬರವಣಿಗೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

Advertisement
Tags :
LatestNewsNewsKannadaಅಕ್ಷಯ್ ಕುಮಾರ್ಟ್ವಿಂಕಲ್ ಖನ್ನಾಪತ್ನಿಪದವಿಫೋಟೋ
Advertisement
Next Article