ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಬ್ಬರು ಮಕ್ಕಳ ಹತ್ಯೆ ಪ್ರಕರಣ: ಆರೋಪಿಯ ಸಹೋದರ ಜಾವೇದ್ ಬಂಧನ

ಬದೌನ್‌ನಲ್ಲಿ ಇಬ್ಬರು ಮಕ್ಕಳನ್ನು ಭೀಕರವಾಗಿ ಹತ್ಯೆಗೈದ ಸಾಜಿದ್‌ನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ್ದು, ಅದರ ಬೆನ್ನಲ್ಲೇ ಸಾಜಿದ್‌ನ  ಸಹೋದರ ಮೊಹಮ್ಮದ್ ಜಾವೇದ್‌ನನ್ನು‌ ಕೂಡ ಪೊಲೀಸರು ಬಂಧಿಸಿದ್ದಾರೆ.
04:33 PM Mar 21, 2024 IST | Ashika S

ಲಖನೌ: ಬದೌನ್‌ನಲ್ಲಿ ಇಬ್ಬರು ಮಕ್ಕಳನ್ನು ಭೀಕರವಾಗಿ ಹತ್ಯೆಗೈದ ಸಾಜಿದ್‌ನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ್ದು, ಅದರ ಬೆನ್ನಲ್ಲೇ ಸಾಜಿದ್‌ನ  ಸಹೋದರ ಮೊಹಮ್ಮದ್ ಜಾವೇದ್‌ನನ್ನು‌ ಕೂಡ ಪೊಲೀಸರು ಬಂಧಿಸಿದ್ದಾರೆ.

Advertisement

11 ವರ್ಷದ ಆಯುಷ್‌ ಹಾಗೂ 6 ವರ್ಷದ ಅಹಾನ್‌ನನ್ನು ಕೊಂದ ಸಾಜಿದ್‌ನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ ಬಳಿಕ ಮೊಹಮ್ಮದ್‌ ಜಾವೇದ್‌ ತಲೆಮರೆಸಿಕೊಂಡಿದ್ದ. ಆದರೆ, ನಿನ್ನನ್ನು ಎನ್‌ಕೌಂಟರ್‌ ಮಾಡುವುದಿಲ್ಲ, ಶರಣಾಗು ಎಂದು ಪೊಲೀಸರು ಮನವಿ ಮಾಡಿದ್ದರು. ಅದರಂತೆ, ಆರೋಪಿ ಮೊಹಮ್ಮದ್‌ ಜಾವೇದ್ ಬರೇಲಿಯ ಬರದಾರಿಯಲ್ಲಿರುವ ಸ್ಯಾಟಲೈಟ್‌ ಪೊಲೀಸ್‌ ಠಾಣೆಯಲ್ಲಿ ಶರಣಾಗಿದ್ದಾನೆ.

ಭೀಕರ ಕೃತ್ಯ ಎಸಗಲು ಕಾರಣವೇನು ಎಂಬುದನ್ನು ತಿಳಿಯಲು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Advertisement

ಘಟನೆ ಏನು ?:  ಕೊಲೆಗಾರ ಸಾಜಿದ್, ಸಂತ್ರಸ್ತರ ಮನೆಯ ಎದುರು ಕ್ಷೌರದ ಅಂಗಡಿಯನ್ನು ನಡೆಸುತ್ತಿದ್ದ. ಮಕ್ಕಳ ತಂದೆ ವಿನೋದ್ ಅವರಿಗೆ ಆತನ ಪರಿಚಯವಿತ್ತು. ಮಂಗಳವಾರ (ಮಾರ್ಚ್‌ 19) ಸಂಜೆ ಸಾಜಿದ್, ವಿನೋದ್‌ ಮನೆಗೆ ಭೇಟಿ ನೀಡಿದ್ದ. ಆಗ ವಿನೋದ್ ಮನೆಯಲ್ಲಿ ಇರಲಿಲ್ಲ. ವಿನೋದ್ ಅವರ ಪತ್ನಿ ಸಂಗೀತಾ ಅವರಿಗೆ, ತನ್ನ ಗರ್ಭಿಣಿ ಪತ್ನಿ ಆಸ್ಪತ್ರೆಯಲ್ಲಿದ್ದು, ಆಕೆಯ ಚಿಕಿತ್ಸೆಗೆ ₹5,000 ಅಗತ್ಯವಿದೆ ಎಂದು ಸಾಜಿದ್‌ ಹೇಳಿದ್ದಾನೆ. ಸಂಗೀತಾ ಪತಿ ವಿನೋದ್‌ಗೆ ಫೋನ್ ಮಾಡಿದ್ದಾಳೆ. ಹಣ ಕೊಡುವಂತೆ ವಿನೋದ್‌ ಪತ್ನಿಗೆ ಸೂಚಿಸಿದ್ದಾರೆ.

ಸಂಗೀತಾ ಹಣವನ್ನು ಸಾಜಿದ್‌ಗೆ ಕೊಟ್ಟು, ಆತನಿಗೆ ಚಹಾ ಮಾಡಲೆಂದು ಕಿಚನ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಆತ ಮೂವರು ಮಕ್ಕಳ ಮೇಲೆ ದಾಳಿ ನಡೆಸಿದ್ದ. ಮೊದಲು ಸಾಜಿದ್, ವಿನೋದ್‌ನ ಹಿರಿಯ ಮಗ 11 ವರ್ಷದ ಆಯುಷ್‌ಗೆ ಮೇಲಿನ ಮಹಡಿಯಲ್ಲಿರುವ ಆತನ ತಾಯಿಯ ಬ್ಯೂಟಿ ಸಲೂನ್ ಅನ್ನು ತೋರಿಸಲು ಕೇಳಿದ್ದಾನೆ. ಹುಡುಗ ಅವನನ್ನು ಎರಡನೇ ಮಹಡಿಗೆ ಕರೆದೊಯಿದ್ದ. ಎರಡನೇ ಮಹಡಿಯಲ್ಲಿ ಸಾಜಿದ್ ಲೈಟ್ ಆಫ್ ಮಾಡಿ ಆಯುಷ್ ಕುತ್ತಿಗೆಯನ್ನು ಚಾಕುವಿನಿಂದ ಸೀಳಿದ್ದಾನೆ.

ಅಷ್ಟರಲ್ಲಿ ಆಯುಷ್‌ನ ಕಿರಿಯ ಸಹೋದರ ಅಹಾನ್ (6) ಒಳಗೆ ಬಂದಿದ್ದು, ಅಹಾನ್‌ನನ್ನು ಕೂಡ ಸಾಜಿದ್ ಹಿಡಿದು ಅದೇ ರೀತಿಯಲ್ಲಿ ಕೊಂದಿದ್ದಾನೆ. ಅದನ್ನು ಇನ್ನೊಬ್ಬ ಸಹೋದರ ಪಿಯೂಷ್ ನೋಡಿದ್ದಾನೆ. ಪಿಯೂಷ್‌ ಮೇಲೆ ಸಾಜಿದ್‌ ದಾಳಿ ಮಾಡುವಷ್ಟರಲ್ಲಿ ಏಳು ವರ್ಷದ ಆ ಮಗು ಓಡಿಹೋಗಿ ಅಡಗಿಕೊಂಡಿದ್ದಾನೆ. ಆಯುಷ್ ಮತ್ತು ಅಹಾನ್ ಸಾವನ್ನಪ್ಪಿದ್ದಾರೆ. ಪಿಯೂಷ್ ಸಣ್ಣ ಗಾಯಗಳಾಗಿವೆ.

ಕೊಲೆಯ ನಂತರ ಹೊರಗೆ ಬೈಕ್‌ನೊಂದಿಗೆ ಕಾಯುತ್ತಿದ್ದ ತನ್ನ ಸಹೋದರ ಜಾವೇದ್‌ನೊಂದಿಗೆ ಸಾಜಿದ್ ಪರಾರಿಯಾಗಿದ್ದ. ಸಾಜಿದ್ ಮತ್ತು ಜಾವೇದ್ ಇಬ್ಬರೂ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಪೊಲೀಸರು ಸಾಜಿದ್‌ನ ಬೆನ್ನು ಹತ್ತಿದ್ದು, ಆತ ಸಿಕ್ಕಿಬಿದ್ದಾಗ ಪೊಲೀಸರ ಗನ್‌ ಕಸಿದುಕೊಂಡು ಅವರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದ. ಪೊಲೀಸರು ಗುಂಡು ಹಾರಿಸಿ ಆತನನ್ನು ಕೊಂದುಹಾಕಿದ್ದಾರೆ.

Advertisement
Tags :
ATUTTARPRADESHLatestNewsMURDERNewsKarnataka
Advertisement
Next Article