ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹೈಕೋರ್ಟ್​ನ ದ್ವಿಸದಸ್ಯ ಪೀಠದಿಂದ ಡಿಕೆಶಿಗೆ ರಿಲೀಫ್

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್​ಗೆ ಹೈಕೋರ್ಟ್​ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ತನಿಖೆಗೆ ತಡೆ ಕೋರಿ ಡಿ.ಕೆ ಶಿ ಏಕಸದಸ್ಯ ಪೀಠದಲ್ಲಿ ಸಲ್ಲಿಸಿದ್ದ ಅರ್ಜಿ ಹಾಗೂ ವಿಭಾಗೀಯ ಪೀಠದಲ್ಲಿ ಸಲ್ಲಿಸಿದ್ದ ಅರ್ಜಿಯನ್ನ ಹಿಂದಕ್ಕೆ ಪಡೆಯಲು ಕೋರ್ಟ್ ಅನುಮತಿ ನೀಡಿದೆ.
03:14 PM Nov 29, 2023 IST | Ashika S

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್​ಗೆ ಹೈಕೋರ್ಟ್​ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ತನಿಖೆಗೆ ತಡೆ ಕೋರಿ ಡಿಕೆ ಶಿ ಏಕಸದಸ್ಯ ಪೀಠದಲ್ಲಿ ಸಲ್ಲಿಸಿದ್ದ ಅರ್ಜಿ ಹಾಗೂ ವಿಭಾಗೀಯ ಪೀಠದಲ್ಲಿ ಸಲ್ಲಿಸಿದ್ದ ಅರ್ಜಿಯನ್ನ ಹಿಂದಕ್ಕೆ ಪಡೆಯಲು ಕೋರ್ಟ್ ಅನುಮತಿ ನೀಡಿದೆ.

Advertisement

ರಾಜ್ಯ ಸರ್ಕಾರ 2019ರಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಈಗ ಹಿಂದಕ್ಕೆ ಪಡೆದಿದೆ. ಸರ್ಕಾರದ ಆದೇಶವನ್ನು ಇಲ್ಲಿ ಯಾರೂ ಚಾಲೆಂಜ್ ಮಾಡಿಲ್ಲ. ಡಿ.ಕೆ ಶಿವಕುಮಾರ್ ಪರ ವಕೀಲರು ತಮ್ಮ ಅರ್ಜಿಯನ್ನ ಹಾಗೂ ಮೇಲ್ಮನವಿಯನ್ನ ವಾಪಸ್ ಪಡೆದಿದ್ದಾರೆ. ಹೀಗಾಗಿ ಅರ್ಜಿ ಇತ್ಯರ್ಥಪಡಿಸಲಾಗಿದೆ ಅಂತ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

ಹೀಗಾಗಿ ಪ್ರಕರಣದಲ್ಲಿ ಕೇಸ್ ಹಿಂಪಡೆದಿರುವ ಕ್ರಮವನ್ನು ಚಾಲೆಂಜ್ ಮಾಡೋಕೆ ಇನ್ನೂ ಸಿಬಿಐಗೆ ಅವಕಾಶವಿದೆ. ಜೊತೆಗೆ ತನಿಖೆ ಮುಂದುವರೆಸೋಕೂ ಸಿಬಿಐಗೆ ಅವಕಾಶ ಇದೆ. ಇದೇ ಕಾರಣಕ್ಕೆ ಇವತ್ತಿನ ಕೋರ್ಟ್ ತೀರ್ಮಾನ ಡಿ.ಕೆ.ಶಿವಕುಮಾರ್​​ಗೆ ಕೇವಲ ತಾತ್ಕಾಲಿಕ ರಿಲೀಫ್ ಮಾತ್ರ.

Advertisement

ಡಿ.ಕೆ.ಶಿವಕುಮಾರ್ ಪರ ಕಾಂಗ್ರೆಸ್ ನಾಯಕರು ಮತ್ತು ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ಸಿಬಿಐ ಪರ ಪ್ರಸನ್ನ ಕುಮಾರ್ ಜೊತೆಗೆ ಡಿಕೆಎಸ್​ ಪರ ಪರ ಸಿನಿಯರ್ ಕೌನ್ಸಿಲ್ ಉದಯ ಹೊಳ್ಳ ಕೂಡ ವಿಚಾರಣೆ ವೇಳೆ ಹಾಜರಿದ್ದರು.

Advertisement
Tags :
LatetsNewsNewsKannadaಅಕ್ರಮ ಆಸ್ತಿಅರ್ಜಿಕೋರ್ಟ್ಡಿಸಿಎಂ ಡಿ.ಕೆ ಶಿವಕುಮಾರ್ತಡೆಪ್ರಕರಣಹೈಕೋರ್ಟ್‌
Advertisement
Next Article