For the best experience, open
https://m.newskannada.com
on your mobile browser.
Advertisement

ಮನೆಗೆ ಬಂದಿದ್ದ ಪಾರ್ಸೆಲ್ ಸ್ಫೋಟಗೊಂಡು ಇಬ್ಬರು ಸಾವು

ಮನೆಗೆ ಬಂದಿದ್ದ ಪಾರ್ಸೆಲ್ ಸ್ಫೋಟಗೊಂಡು ತಂದೆ ಹಾಗೂ ಮಗಳು ಸಾವನ್ನಪ್ಪಿದ್ದ ಘಟನೆ ಗುಜರಾತ್‍ನ ವಡಾಲಿಯಲ್ಲಿ ಗುರುವಾರ ನಡೆದಿದೆ.
04:18 PM May 03, 2024 IST | Ashika S
ಮನೆಗೆ ಬಂದಿದ್ದ ಪಾರ್ಸೆಲ್ ಸ್ಫೋಟಗೊಂಡು ಇಬ್ಬರು ಸಾವು

ಗಾಂಧಿನಗರ:  ಮನೆಗೆ ಬಂದಿದ್ದ ಪಾರ್ಸೆಲ್ ಸ್ಫೋಟಗೊಂಡು ತಂದೆ ಹಾಗೂ ಮಗಳು ಸಾವನ್ನಪ್ಪಿದ್ದ ಘಟನೆ ಗುಜರಾತ್‍ನ ವಡಾಲಿಯಲ್ಲಿ ಗುರುವಾರ ನಡೆದಿದೆ.

Advertisement

ಜೀತುಭಾಯಿ ವಂಜಾರಾ (32) ಹಾಗೂ ಅವರ ಮಗಳು ಭೂಮಿಕಾ (12) ಸಾವಿಗೀಡಾಗಿದವರು.

ಗುರುವಾರ ಮಧ್ಯಾಹ್ನ ಜೀತುಭಾಯಿ ಹೀರಾಭಾಯಿ ವಂಜಾರಾ ಎಂಬವರ ಮನೆಗೆ ಪಾರ್ಸೆಲ್‍ನಲ್ಲಿ ಟೇಪ್ ರೆಕಾರ್ಡರ್ ಬಂದಿತ್ತು. ಈ ವೇಳೆ ಅದನ್ನು ತೆಗೆದು ವಿದ್ಯುತ್ ಸಂಪರ್ಕ ಮಾಡುತ್ತಿದ್ದಂತೆ ಅದು ಸ್ಫೋಟಗೊಂಡಿತ್ತು. ಈ ವೇಳೆ  ಅಲ್ಲದೇ ಇನ್ನಿಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದರು.

Advertisement

ಸಿಸಿಟಿವಿಗಳಲ್ಲಿ ದಾಖಲಾದ ವೀಡಿಯೋ ಆಧಾರದ ಮೇಲೆ ಪಾರ್ಸೆಲ್ ತಲುಪಿಸಿದ್ದ ಆಟೋ ಚಾಲಕನನ್ನು ಪತ್ತೆ ಹಚ್ಚಿದ ಪೊಲೀಸರು,  ಬಳಿಕ ಆಟೋ ಚಾಲಕನನ್ನು ವಿಚಾರಿಸಿದಾಗ, ಜಯಂತಿಭಾಯಿ ಬಾಲುಸಿಂಗ್ ವಂಜಾರ (31) ಎಂಬಾತ ಜೀತುಭಾಯಿ ಅವರ ಮನೆಗೆ ಪಾರ್ಸೆಲ್ ಕಳುಹಿಸಿದ್ದು ಎಂದು ತಿಳಿದು ಬಂದಿದೆ.

ಜೀತುಭಾಯಿ ತನ್ನ ಮಾಜಿ ಪ್ರೇಯಸಿ ಮದುವೆಯಾಗಿದ್ದಕ್ಕೆ ಆರೋಪಿ ಈ ಕೃತ್ಯ ಎಸಗಿದ್ದಾನೆ. ಆತ ಸ್ಫೋಟಕ ತಯಾರಿಸಲು ರಾಜಸ್ಥಾನದಿಂದ ಜೆಲೆಟಿನ್ ಕಡ್ಡಿಗಳನ್ನು ತಂದಿದ್ದ. ಅಲ್ಲದೇ ಅದನ್ನು ಟೇಪ್ ರೆಕಾರ್ಡ್‍ರ್‍ನಲ್ಲಿ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿದ ತಕ್ಷಣ ಸ್ಫೋಟಗೊಳ್ಳುವಂತೆ ಮಾಡಿದ್ದ ಎಂದು ತಿಳಿದು ಬಂದಿದೆ.

Advertisement
Tags :
Advertisement