For the best experience, open
https://m.newskannada.com
on your mobile browser.
Advertisement

ಕಾರು-ಸ್ಕೂಟರ್ ನಡುವೆ ಅಪಘಾತ: ಇಬ್ಬರು ಸಾವು, ಆರು ಮಂದಿಗೆ ಗಾಯ

ಕಾರು ಮತ್ತು ಸ್ಕೂಟರ್ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಆರು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಪೆರಿಯ ಸಮೀಪ ಮಂಗಳವಾರ ಬೆಳಿಗ್ಗೆ ನಡೆದಿದೆ.
08:04 PM Jan 09, 2024 IST | Gayathri SG
ಕಾರು ಸ್ಕೂಟರ್ ನಡುವೆ ಅಪಘಾತ  ಇಬ್ಬರು ಸಾವು  ಆರು ಮಂದಿಗೆ ಗಾಯ

ಕಾಸರಗೋಡು: ಕಾರು ಮತ್ತು ಸ್ಕೂಟರ್ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಆರು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಪೆರಿಯ ಸಮೀಪ ಮಂಗಳವಾರ ಬೆಳಿಗ್ಗೆ ನಡೆದಿದೆ.

Advertisement

ಸ್ಕೂಟರ್ ಸವಾರರಾದ ಚಟ್ಟಂಚಾಲ್ ನ ಗೋಪಾಲ ಕೃಷ್ಣ (55) ಮತ್ತು ಪರವ ನಡ್ಕದ ನಾರಾಯಣನ್ (62) ಮೃತಪಟ್ಟವರು. ಕಾರಿನಲ್ಲಿದ್ದ ಬದಿಯಡ್ಕದ ಶಾಹೀನ್ ( 36), ಪತ್ನಿ ಸಹಲಾ, ಸಂಬಧಿಕರಾದ ಸಹೀನ್ , ಶಮ್ನಾಸ್ , ಫಾತಿಮಾ, ಹನಾ ಫಾತಿಮಾ ಗಾಯಗೊಂಡಿದ್ದು, ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸಂದರ್ಭದಲ್ಲಿ ಪಾದಚಾರಿಯೋರ್ವರು ಗಾಯಗೊಂಡಿದ್ದು, ಗಂಭೀರ ಗಾಯಗೊಂಡ ಹಂಝ (65)ರವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾಸ್ ಪೋರ್ಟ್ ಸಂಬಂಧ ಕೆಲಸಕ್ಕಾಗಿ ಬದಿಯಡ್ಕ ನಿವಾಸಿಗಳು ಪಯ್ಯನ್ನೂರಿಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಪರಿಸರ ವಾಸಿಗಳು ಗಾಯಾಳುಗಳನ್ನು ಆಸ್ಪತ್ರೆಗಗಳಿಗೆ ತಲುಪಿಸಿದರು. ಅಪಘಾತದ ರಭಸಕ್ಕೆ ಸ್ಕೂಟರ್ ಸ್ಕೂಟರ್ ಸಂಪೂರ್ಣ ನಜ್ಜಗುಜ್ಜಾಗಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಕಾಮಗಾರಿಗಾಗಿ ತೋಡಲಾಗಿದ್ದ ಹೊಂಡಕ್ಕೆ ಬಿದ್ದಿದೆ. ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು.

Advertisement

Advertisement
Tags :
Advertisement