ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಬ್ಬರು ನುರಿತ ಟೆಕ್ ಎಕ್ಸಿಕ್ಯೂಟಿವ್ಸ್ ರಾಜೀನಾಮೆ; ಆ್ಯಪಲ್​ಗೆ ಎದುರಾದ ಸಂಕಷ್ಟ

ಐಫೋನ್ ಮತ್ತು ಆ್ಯಪಲ್ ವಾಚ್ ಡಿಸೈನ್ ವಿಭಾಗದ ಮುಖ್ಯಸ್ಥ ಟ್ಯಾಂಗ್ ಟ್ಯಾನ್ ಅವರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
11:49 AM Dec 11, 2023 IST | Ramya Bolantoor

ಕ್ಯಾಲಿಫೋರ್ನಿಯಾ: ಐಫೋನ್ ಮತ್ತು ಆ್ಯಪಲ್ ವಾಚ್ ಡಿಸೈನ್ ವಿಭಾಗದ ಮುಖ್ಯಸ್ಥ ಟ್ಯಾಂಗ್ ಟ್ಯಾನ್ ಅವರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ವಾರ ಆ್ಯಪಲ್​ನ ಐಫೋನ್​ನಲ್ಲಿ ಬಯೋಮೆಟ್ರಿಕ್​ಗಳ ತಯಾರಿಕೆಯಲ್ಲಿ ಸ್ಟೀವ್ ಹೋಟೆಲಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಈಗ ಅವರು ಕೂಡಾ ರಾಜೀನಾಮೆ ನೀಡಿದ್ದಾರೆ. ಒಂದೇ ವಾರದಲ್ಲಿ ಇಬ್ಬರು ಎಕ್ಸಿಕ್ಯೂಟಿವ್​ಗಳು ಸಂಸ್ಥೆಗೆ ರಾಜೀನಾಮೆ ನೀಡಿರುವುದು ಆ್ಯಪಲ್ ಸಂಸ್ಥೆಯಲ್ಲಿ ಹೊಸ ತಲೆನೋವು ಶುರುವಾದ್ದಂತಿದ.

Advertisement

ಆ್ಯಪಲ್ ಸಂಸ್ಥೆಯ ವಿವಿಧ ಉತ್ಪನ್ನಗಳಿಗೆ ಟ್ಯಾಂಗ್ ಟ್ಯಾನ್ ಪ್ರಮುಖ ಡಿಸೈನರ್ ಆಗಿದ್ದವರು. ಐಫೋನ್, ಆ್ಯಪಲ್ ವಾಚ್​ಗಳ ವಿನ್ಯಾಸದಲ್ಲಿ ಪ್ರಮುಖ ಪಾತ್ರವಹಿಸಿದ್ದವರು. ಆ್ಯಪಲ್ ಕಂಪನಿಯ ಪ್ರಮುಖ ಎಂಜಿನಿಯರುಗಳಲ್ಲಿ ಅವರು ಕೂಡಾ ಒಬ್ಬರು. ಅವರ ಸ್ಥಾನವನ್ನು ತುಂಬಲು ಆ್ಯಪಲ್​ನೊಳಗೆ ತಯಾರಿ ನಡೆಯುತ್ತಿದೆ. ಟ್ಯಾಂಗ್ ನಿರ್ವಹಿಸುತ್ತಿದ್ದ ಹೊಣೆಗಾರಿಕೆಯನ್ನು ಬೇರೆ ಪ್ರಮುಖ ತಂತ್ರಜ್ಞರಿಗೆ ಹಂಚಿಕೆ ಮಾಡಲಾಗುತ್ತಿದೆ. ಹಾರ್ಡ್​ವೇರ್ ಎಂಜಿನಿಯರಿಂಗ್ ವಿಭಾಗದ ಕೆಲ ಮುಖ್ಯ ತಂತ್ರಜ್ಞರಿಗೆ ಜವಾಬ್ದಾರಿ ಕೊಡಲಾಗುತ್ತಿದೆ.

ಸ್ಟೀವ್ ಹೋಟೆಲಿಂಗ್ ನುರಿತ ತಂತ್ರಜ್ಞರಾಗಿದ್ದವರು. ನೂರಾರು ಆ್ಯಪಲ್ ಪೇಟೆಂಟ್​ಗಳ ಇಂದೆ ಇಂದ್ದವರು. ಐಫೋನ್, ಐಪ್ಯಾಡ್, ಆ್ಯಪಲ್ ವಾಚ್ ಉತ್ಪನ್ನಗಳ ತಯಾರಿಕೆಯಲ್ಲು ಪ್ರಮುಖ ವ್ಯಕಿ ಆಗಿದ್ದವರು. ಸದ್ಯ ಅವರ ಆ್ಯಪಲ್​ನ ವೈಸ್ ಪ್ರೆಸಿಡೆಂಟ್ ಆಗಿದ್ದರು. ಆದರೆ ಇವರ ನಂತರ ಆ ಸ್ಥಾನವನ್ನು ಯಾರು ತುಂಬಾಲಿದ್ದಾರೆ ಅನ್ನುವಂತಹದ್ದು ಪ್ರಶ್ನೆಯಾಗಿದೆ.

Advertisement

Advertisement
Tags :
LatestNewsNewsKannadaಕ್ಯಾಲಿಫೋರ್ನಿಯಾ
Advertisement
Next Article