For the best experience, open
https://m.newskannada.com
on your mobile browser.
Advertisement

ಐಇಡಿ ಸ್ಫೋಟಗೊಂಡು ವಿಶೇಷ ಕಾರ್ಯ ಪಡೆಯ ಇಬ್ಬರು ಸಿಬ್ಬಂದಿಗೆ ಗಾಯ

ಸುಧಾರಿತ ಸ್ಫೋಟಕ ಸಾಧನ  ಸ್ಫೋಟಗೊಂಡು ವಿಶೇಷ ಕಾರ್ಯ ಪಡೆಯ  ಇಬ್ಬರು ಸಿಬ್ಬಂದಿಗೆ ಗಾಯಗಳಾಗಿರುವ ಘಟನೆ ಛತ್ತೀಸಗಢದ ಬಿಜಾಪುರ ಜಿಲ್ಲೆಯ ಇಟ್ವಾರ್ ಗ್ರಾಮದಲ್ಲಿ ಇಂದು  ನಸುಕಿನ ಜಾವ ನಡೆದಿದೆ ಎಂದು ಪೊಲೀಸರು  ತಿಳಿಸಿದ್ದಾರೆ.
03:24 PM Apr 10, 2024 IST | Chaitra Kulal
ಐಇಡಿ ಸ್ಫೋಟಗೊಂಡು ವಿಶೇಷ ಕಾರ್ಯ ಪಡೆಯ ಇಬ್ಬರು ಸಿಬ್ಬಂದಿಗೆ ಗಾಯ

ಬಿಜಾಪುರ: ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡು ವಿಶೇಷ ಕಾರ್ಯ ಪಡೆಯ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿರುವ ಘಟನೆ ಛತ್ತೀಸಗಢದ ಬಿಜಾಪುರ ಜಿಲ್ಲೆಯ ಇಟ್ವಾರ್ ಗ್ರಾಮದಲ್ಲಿ ಇಂದು  ನಸುಕಿನ ಜಾವ ನಡೆದಿದೆ ಎಂದು ಪೊಲೀಸರು  ತಿಳಿಸಿದ್ದಾರೆ.

Advertisement

ಭದ್ರತಾ ಕಾರ್ಯಾಚರಣೆ ಸಂಬಂಧ ಸಿಬ್ಬಂದಿಯು ಆ ಸ್ಥಳಕ್ಕೆ ತೆರಳಿದ್ದ ವೇಳೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಾಯಗೊಂಡವರನ್ನು ಶಿವಲಾಲ್ ಮಾಂಡವಿ ಮತ್ತು ಮಿಥ್ಲೇಶ್ ಮಾರ್ಕಮ್ ಎಂದು ಗುರುತಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ, ಈ ಸ್ಫೋಟಕವನ್ನು ನಕ್ಸಲರು ಇರಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Advertisement

Advertisement
Tags :
Advertisement