For the best experience, open
https://m.newskannada.com
on your mobile browser.
Advertisement

ದ್ವಿಚಕ್ರ ವಾಹನಗಳಿಗೆ ಕಾರು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸಾವು

ಎರಡು ದ್ವಿಚಕ್ರ ವಾಹನಗಳಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಸಮೀಪದ ಭಾನುವಾರಸಂತೆ ಗ್ರಾಮದ ಬಳಿ ನಡೆದಿದೆ.
10:41 PM Jan 07, 2024 IST | Ashika S
ದ್ವಿಚಕ್ರ ವಾಹನಗಳಿಗೆ ಕಾರು ಡಿಕ್ಕಿ  ಇಬ್ಬರು ವಿದ್ಯಾರ್ಥಿಗಳು ಸಾವು

ತುರುವೇಕೆರೆ: ಎರಡು ದ್ವಿಚಕ್ರ ವಾಹನಗಳಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಸಮೀಪದ ಭಾನುವಾರಸಂತೆ ಗ್ರಾಮದ ಬಳಿ ನಡೆದಿದೆ.

Advertisement

ತಿಪಟೂರಿನ ಕಾಲೇಜೊಂದರಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳು ಶಾಲೆಗೆ ಚಕ್ಕರ್ ಹಾಕಿ ಸಮೀಪದ ಆದಿಚುಂಚನಗಿರಿಗೆ ಬಂದಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿ ತಿಪಟೂರಿನ ಕಡೆ ತೆರಳುತ್ತಿದ್ದ ವೇಳೆ ತಿಪಟೂರಿನಿಂದ ಮೈಸೂರಿನ ಕಡೆ ಸಾಗುತ್ತಿದ್ದ ಕಾರು ಎರಡೂ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಸ್ಥಳದಲ್ಲೇ ಸುನಿಲ್ (೨೧) ಎಂಬ ವಿದ್ಯಾರ್ಥಿ ಮೃತ ಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯರಾದ ಕಾವ್ಯಾ, ಧರಣಿ, ಪಲ್ಲವಿ ಹಾಗೂ ವಿದ್ಯಾರ್ಥಿ ನರಸಿಂಹಮೂರ್ತಿಯನ್ನು ಕೂಡಲೇ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ಚಿಕಿತ್ಸೆಗೆ ಸ್ಪಂದಿಸದೇ ಕಾವ್ಯಾ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾಳೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

Advertisement

ಅಪಘಾತವಾದ ಕೂಡಲೇ ಕಾಲಿನಲ್ಲಿದ್ದವರು ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ. ನರಸಿಂಹ ಮೂರ್ತಿಯ ಕಾಲು ತುಂಡಾಗಿದ್ದರೆ, ಧರಣಿ ಎಂಬ ವಿದ್ಯಾರ್ಥಿನಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆಂದು ಹೇಳಲಾಗಿದೆ.

ಪಲ್ಲವಿಗೂ ಹೆಚ್ಚಿನ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆಂದು ಹೇಳಲಾಗಿದೆ. ಸ್ಥಳಕ್ಕೆ ಎಸೈ ಸಂಗಪ್ಪ ಮೇಟಿ ಭೇಟಿ ನೀಡಿದ್ದರು. ತುರುವೇಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Tags :
Advertisement