ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಅನೋಖಾ 2k24

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಇಂದು (ಮಾ. 21) ಸಂಖ್ಯಾಶಾಸ್ತ್ರ ವಿಭಾಗದ ಸಾಂಖ್ಯ ಅಸೋಸಿಯೇಷನ್ ವತಿಯಿಂದ ‘ಅನೋಖಾ -2024’ ಅಂತರ್-ತರಗತಿ ಫೆಸ್ಟ್‌ ನಡೆಯಿತು.
02:56 PM Mar 21, 2024 IST | Ashika S

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಇಂದು (ಮಾ. 21) ಸಂಖ್ಯಾಶಾಸ್ತ್ರ ವಿಭಾಗದ ಸಾಂಖ್ಯ ಅಸೋಸಿಯೇಷನ್ ವತಿಯಿಂದ ‘ಅನೋಖಾ -2024’ ಅಂತರ್-ತರಗತಿ ಫೆಸ್ಟ್‌ ನಡೆಯಿತು.

Advertisement

ಕಾಲೇಜಿನ ಉಪಪ್ರಾಂಶುಪಾಲ ‌ಪ್ರೊ. ಎಸ್.ಎನ್. ಕಾಕತ್ಕರ್ ಉದ್ಘಾಟನೆ ನೆರವೇರಿಸಿದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, “ಅನೋಖ ಎಂದರೆ ಸೃಜನಶೀಲತೆ ಎಂದರ್ಥ. ವಿದ್ಯಾರ್ಥಿಯು ಜೀವನದಲ್ಲಿ ಚುರುಕಾಗಿರಬೇಕು ಮತ್ತು ವಿಶೇಷ ಗುರಿಗಳನ್ನು ಸಾಧಿಸಲು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಪ್ರತಿಭೆಗಳನ್ನು ಪ್ರದರ್ಶಿಸುವ ಅವಕಾಶವನ್ನು ಒದಗಿಸುವಲ್ಲಿ ಈ ರೀತಿಯ ಕಾರ್ಯಕ್ರಮಗಳು ನಿರ್ಣಾಯಕ ಪಾತ್ರ ವಹಿಸುತ್ತವೆ” ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿ, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ, "ವಿದ್ಯಾರ್ಥಿಜೀವನವನ್ನು ಸುವರ್ಣ ಜೀವನವೆಂದು ಪರಿಗಣಿಸಿ ನಿಮ್ಮ ಸಮಯವನ್ನು ಆನಂದಿಸಿ. ಪ್ರತಿದಿನ ನೀವು ಸ್ಪರ್ಧಾತ್ಮಕ ಜಗತ್ತಿಗೆ ಹೊಂದಿಕೊಳ್ಳುವ ಹೊಸ ವಿಷಯಗಳನ್ನು ಕಲಿಯಿರಿ” ಎಂದು ಸಲಹೆ ನೀಡಿದರು.

Advertisement

ಅತಿಥಿಗಳಿಗೆ ವಿಭಾಗದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಒಟ್ಟು ಎಂಟು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

ವಿಜ್ಞಾನ ನಿಕಾಯದ ಡೀನ್‌, ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ.ಸವಿತಾ ಕುಮಾರಿ, ಸಹಾಯಕ ಪ್ರಾಧ್ಯಾಪಕಿ ಮಂಜುಳಾ ಮತ್ತು ವಿದ್ಯಾರ್ಥಿ ಸಂಯೋಜಕರಾದ ಸಂಜಯ್ ಡಿ.ಕೆ. ಹಾಗೂ ನಾಗಶ್ರೀ ಆರ್. ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ದಿಶಾ ಸ್ವಾಗತಿಸಿ, ಗಾನಶ್ರೀ ವಂದಿಸಿ, ಅನನ್ಯ ಕಾರ್ಯಕ್ರಮ ನಿರೂಪಿಸಿದರು.

Advertisement
Tags :
LatetsNewsNewsKarnatakaSDM COLLEGEUJIRE
Advertisement
Next Article