For the best experience, open
https://m.newskannada.com
on your mobile browser.
Advertisement

ಮಹಿಳೆಯರಿಗೆ ಉಜ್ವಲ ಯೋಜನೆ ಗ್ಯಾಸ್ ಬದಲಾಗಿ ಪ್ರಜ್ವಲ ಯೋಜನೆ : ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಲ್ಲಿ ಮಹಿಳೆಯರಿಗೆ ಉಜ್ವಲ ಯೋಜನೆ ಗ್ಯಾಸ್ ಬದಲಾಗಿದೆ ಪ್ರಜ್ವಲ ಯೋಜನೆ ಸಿಕ್ಕಿದೆ ಎಂದು ಪ್ರಜ್ವಲ ರೇವಣ್ಣ ಪ್ರಕರಣವನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪ್ರಚಾರ ಭಾಷಣದಲ್ಲಿ ಟೀಕಿಸಿದ್ದಾರೆ.
08:32 AM May 02, 2024 IST | Chaitra Kulal
ಮಹಿಳೆಯರಿಗೆ ಉಜ್ವಲ ಯೋಜನೆ ಗ್ಯಾಸ್ ಬದಲಾಗಿ ಪ್ರಜ್ವಲ ಯೋಜನೆ   ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್

ಕಾರವಾರ: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಲ್ಲಿ ಮಹಿಳೆಯರಿಗೆ ಉಜ್ವಲ ಯೋಜನೆ ಗ್ಯಾಸ್ ಬದಲಾಗಿದೆ ಪ್ರಜ್ವಲ ಯೋಜನೆ ಸಿಕ್ಕಿದೆ ಎಂದು ಪ್ರಜ್ವಲ ರೇವಣ್ಣ ಪ್ರಕರಣವನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪ್ರಚಾರ ಭಾಷಣದಲ್ಲಿ ಟೀಕಿಸಿದ್ದಾರೆ.

Advertisement

ಕಾರವಾರದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಂಜಲಿ, ಪ್ರಜ್ವಲ್​ ರೇವಣ್ಣ ಪ್ರಕರಣದ ಸಂಬಂಧಿಸಿದಂತೆ ಎಸ್​ಐಟಿ ತನಿಖೆ ನಡೆಸುತ್ತಿದೆ. ಅತ್ತ ಪ್ರಕರಣ ಬೆಳಕಿಗೆ ಬಂದ ಬಳಿಕ ಮೊದಲ ಟ್ವೀಟ್​ ಮಾಡಿದ ಪ್ರಜ್ವಲ್​ ರೇವಣ್ಣ ಸತ್ಯ ಆದಷ್ಟು ಬೇಗ ಹೊರ ಬರಲಿದೆ ಎಂದಿದ್ದಾರೆ.

ಹೊಳೆನರಸೀಪುರದಲ್ಲಿ ಕೇಸ್ ದಾಖಲಾದ 4 ದಿನದ ಬಳಿಕ ಪ್ರಜ್ವಲ್ ರೇವಣ್ಣ ಅವರು ತಮ್ಮ ವಿರುದ್ಧದ ಆರೋಪದ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಕಾನೂನು ತಜ್ಞರ ಜೊತೆ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದಾರೆ.

Advertisement

ಕಳೆದ ಮೂರ್ನಾಲ್ಕು ದಿನಗಳಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಸಾಕಷ್ಟು ಗಂಭೀರ ಆರೋಪಗಳು ಕೇಳಿ ಬಂದಿದೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಜರ್ಮನಿಗೆ ಹೋಗಿದ್ದ ಪ್ರಜ್ವಲ್ ರೇವಣ್ಣ ಅವರು ಆರೋಪಗಳನ್ನು ಎದುರಿಸಲು ನಾನು ರೆಡಿ ಎಂಬ ಸಂದೇಶ ನೀಡಿದ್ದಾರೆ.

ಜರ್ಮಿನಿಯಲ್ಲಿ ಇರುವ ಪ್ರಜ್ವಲ್‌ ರೇವಣ್ಣ, ವಿದೇಶಕ್ಕೆ ತೆರಳುವ ಮುನ್ನವೇ ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ಲುಫ್ತಾನ್ಸಾ ವಿಮಾನದಲ್ಲಿ ರಿಟರ್ನ್‌ ಟಿಕೆಟ್‌ ಬುಕ್‌ ಮಾಡಿದ್ದರು. ಮೇ 3ರಂದು ಮಧ್ಯಾಹ್ನ 1:30ಕ್ಕೆ ಫ್ರಾಂಕ್‌ಫರ್ಟ್‌ನಿಂದ ವಿಮಾನ ಹೊರಡಲಿದ್ದು, ರಾತ್ರಿ 1ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಲಿದೆ.

ಇಮಿಗ್ರೇಷನ್ ಕ್ಲಿಯರೇನ್ಸ್​ಗೆ ರಿಟರ್ನ್ ಟಿಕೆಟ್ ಕಡ್ಡಾಯ ಹಿನ್ನೆಲೆ 3 ಕ್ಕೆ ಟಿಕೆಟ್ ಬುಕ್ಕಿಂಗ್ ಆಗಿತ್ತು. ಆದರೆ ಮೇ 03 ರಂದು ವಾಪಸ್ ಬರ್ತಾರಾ ಅಲ್ಲೆ ಉಳಿದುಕೊಳ್ತಾರಾ ಅನ್ನೋದೇ ಇನ್ನೂ ಅನುಮಾನವಾಗಿದೆ.

ಮೇ 3 ರಂದು ಬುಕ್ ಆಗಿರುವ ಟಿಕೆಟ್ ಮೇಲೆ ಎಸ್ಐಟಿ ತಂಡ ಕಣ್ಣಿಟ್ಟಿದೆ. ಇನ್ನು ದೇವೇಗೌಡರೇ ಪ್ಲಾನ್ ಮಾಡಿ ಪ್ರಜ್ವಲ್​ನ್ನ ವಿದೇಶಕ್ಕೆ ಕಳಿಸಿದ್ದಾರೆ ಅಂತ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ವೀಸಾ ಕೊಡೋರು ಯಾರು? ಪಾಸ್​ ಕೊಡೋರು ಯಾರು? ಬಿಜೆಪಿಯವರೇ ತಾನೆ ಅಂತ ಪ್ರಶ್ನಿಸಿದ್ದಾರೆ.

Advertisement
Tags :
Advertisement