For the best experience, open
https://m.newskannada.com
on your mobile browser.
Advertisement

ಶಾಲಾ ತರಗತಿಗಳಲ್ಲಿ ಮೊಬೈಲ್‌ ಬಳಕೆಗೆ ಬ್ರೇಕ್‌: ಪ್ರಧಾನಿಯಿಂದ ಹೊಸ ರೂಲ್ಸ್‌

ಬ್ರಿಟನ್‌ ಪ್ರಧಾನಿ ರಿಶಿ ಸುನಕ್‌ ಮಕ್ಕಳ ಒಳ್ಳೆ ಭವಿಷ್ಯ ಉದ್ದೇಶದಿಂದ ಇದೀಗ ಶಾಲಾ ತರಗತಿಗಳಿಗೆ ಮೊಬೈಲ್‌ ಬಳಕೆಯನ್ನ ಸಂಪೂರ್ಣವಾಗಿ ನೀಷೇಧಿಸಲು ನಿರ್ಧರಿಸಿ ಇದೇ ಫೆಬ್ರವರಿ 19ರಂದು ಅನ್ವಯಿಸುವುದಾಗಿ ವೀಡಿಯೊ ಮೂಲಕ ಸಂದೇಶವನ್ನು ಹಂಚಿಕೊಂಡಿದ್ದಾರೆ.
06:03 PM Feb 21, 2024 IST | Ashitha S
ಶಾಲಾ ತರಗತಿಗಳಲ್ಲಿ ಮೊಬೈಲ್‌ ಬಳಕೆಗೆ ಬ್ರೇಕ್‌   ಪ್ರಧಾನಿಯಿಂದ ಹೊಸ ರೂಲ್ಸ್‌

ಬ್ರಿಟನ್:‌ ಬ್ರಿಟನ್‌ ಪ್ರಧಾನಿ ರಿಶಿ ಸುನಕ್‌ ಮಕ್ಕಳ ಒಳ್ಳೆ ಭವಿಷ್ಯ ಉದ್ದೇಶದಿಂದ ಇದೀಗ ಶಾಲಾ ತರಗತಿಗಳಿಗೆ ಮೊಬೈಲ್‌ ಬಳಕೆಯನ್ನ ಸಂಪೂರ್ಣವಾಗಿ ನೀಷೇಧಿಸಲು ನಿರ್ಧರಿಸಿ ಇದೇ ಫೆಬ್ರವರಿ 19ರಂದು ಅನ್ವಯಿಸುವುದಾಗಿ ವೀಡಿಯೊ ಮೂಲಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

Advertisement

ಈಗಂತು ಊಟ ಬಿಟ್ಟರು ಮೊಬೈಲ್‌ನ್ನು ಒಂದು ಕ್ಷಣ ಬಿಟ್ಟಿರಲು ಅಂಜುತ್ತಾರೆ. ಜನರ ಜೊತೆಗಿಂತ ಮೊಬೈಲ್‌ ಜೊತೆ ಸಂಪರ್ಕ ಹೆಚ್ಚಾಗಿದೆ. ಸಣ್ಣಮಕ್ಕಳಿಂದ ವೃದ್ದಾಪ್ಯದವರೆಗು ಮೊಬೈಲ್‌ ಬಳಕೆಮಾಡುತ್ತಾರೆ. ಎಲ್ಲೆಂದರಲ್ಲಿ ಗಂಟೆಗಟ್ಟಲೆ ಮೊಬೈಲ್‌ ಒಳಗೆ ಮುಳುಗಿರುತ್ತಾರೆ. ವಿದ್ಯಾರ್ಥಿಗಳು ಕೂಡ ಮೊಬೈಲ್‌ ದಾಸರಾಗಿದ್ದಾರೆ.

ಹೀಗಾಗಿ ಓದಿನ ಕಡೆ ಗಮನ ಕಡಿಮೆ ಆಗುತ್ತಿದೆ ಹೀಗಾಗಿ ಮೊಬೈಲ್‌ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ಈ ಕಾರಣ ಬ್ರಿಟನ್‌ ಪ್ರಧಾನಿಯಾಗಿರುವ ಭಾರತ ಮೂಲದ ರಿಶಿ ಸುನಕ್ ಒಂದು ಪ್ರಭಾವಾತ್ಮಕ‌ ನಿರ್ಧಾರ ಕೈಗೊಂಡಿದ್ದಾರೆ. ಶಾಲಾ ತರಗತಿಗಳನ್ನು ಮೊಬೈಲ್‌ ಮುಕ್ತ ಮಾಡುವುದರ ಮೂಲಕ ಶಾಂತಿ ಸ್ಥಾಪಿಸಲು ಮೊಬೈಲ್‌ ನಿಷೇದ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಪ್ರಧಾನಿ ರಿಶಿ ಟ್ವಿಟ್ಟರ್‌ ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.

Advertisement

ಇಂಗ್ಲೇಂಡ್‌ನಾದ್ಯಾಂತ ಶಾಲೆಗಳಲ್ಲಿ ವಿರಾಮ ಸಮಯ ಸೇರಿ ಮೊಬೈಲ್‌ ಬಳಕೆ ನಿಷೇದಿಸುವುದಾಗಿ ಹಾಗೂ ಫೆಬ್ರವರಿ 19 ಸೋಮವಾರದಂದು ಈ ಮಾರ್ಗದರ್ಶನ ಪ್ರಕಟಿಸಲಾಗಿದೆ. ಹಾಗೂ ಇದನ್ನು ಸ್ಥಿರವಾಗಿ ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ.

Advertisement
Tags :
Advertisement