For the best experience, open
https://m.newskannada.com
on your mobile browser.
Advertisement

‘ಉಕ್ರೇನ್’ ಯುದ್ಧ ಭೂಮಿಯಲ್ಲಿ ಭಾರತೀಯ ಬಲಿ !

ಉದ್ಯೋಗ ಅರಸಿ ರಷ್ಯಾಕ್ಕೆ ತೆರಳಿದ್ದ ಭಾರತದ ಯುವಕರನ್ನು ಬಲವಂತವಾಗಿ ಯುದ್ಧಕ್ಕೆ ಬಳಸಿಕೊಳ್ಳುತ್ತಿರೋ ಆರೋಪ ಕೇಳಿ ಬರ್ತಿರೋ ನಡುವೆ ದುರಂತವೊಂದು ಸಂಭವಿಸಿಬಿಟ್ಟಿದೆ. ರಷ್ಯಾ ಪರವಾಗಿ ಯುದ್ಧದಲ್ಲಿ ಹೋರಾಡುತ್ತಿದ್ದ ಹೈದರಾಬಾದ್​​ನ ಯುವಕ ಸಾವನ್ನಪ್ಪಿದ್ದಾನೆ.
09:09 AM Mar 07, 2024 IST | Ashitha S
‘ಉಕ್ರೇನ್’ ಯುದ್ಧ ಭೂಮಿಯಲ್ಲಿ ಭಾರತೀಯ ಬಲಿ

ನವದೆಹಲಿ: ಉದ್ಯೋಗ ಅರಸಿ ರಷ್ಯಾಕ್ಕೆ ತೆರಳಿದ್ದ ಭಾರತದ ಯುವಕರನ್ನು ಬಲವಂತವಾಗಿ ಯುದ್ಧಕ್ಕೆ ಬಳಸಿಕೊಳ್ಳುತ್ತಿರೋ ಆರೋಪ ಕೇಳಿ ಬರ್ತಿರೋ ನಡುವೆ ದುರಂತವೊಂದು ಸಂಭವಿಸಿಬಿಟ್ಟಿದೆ. ರಷ್ಯಾ ಪರವಾಗಿ ಯುದ್ಧದಲ್ಲಿ ಹೋರಾಡುತ್ತಿದ್ದ ಹೈದರಾಬಾದ್​​ನ ಯುವಕ ಸಾವನ್ನಪ್ಪಿದ್ದಾನೆ.

Advertisement

ಉದ್ಯೋಗ ಅರಸಿ ರಷ್ಯಾಕ್ಕೆ ಬರುವ ಯುವಕರನ್ನೇ ಟಾರ್ಗೆಟ್​​ ಮಾಡುವ ರಷ್ಯಾದ ವ್ಯಾಗ್ನರ್​​​​ ಪಡೆ, ಅಸಾಯಕ ಯುವಕರಿಗೆ ಉದ್ಯೋಗ ಆಮಿಷ ತೋರಿಸಿ ಯುದ್ಧಕ್ಕೆ ಬಲವಂತವಾಗಿ ಬಳಸಿಕೊಳ್ಳುತ್ತಿದೆ. ಹೀಗೆ ರಷ್ಯಾಕ್ಕೆ ತೆರಳಿದ್ದ ಹೈದ್ರಾಬಾದ್​​ ಮೂಲದ ಮೊಹಮ್ಮದ್​​​​ ಅಸ್ಫಾನ್ ವಂಚನೆ ಜಾಲಕ್ಕೆ ಸಿಲುಕಿ ರಷ್ಯಾ ಪರವಾಗಿ ಉಕ್ರೇನ್​ ವಿರುದ್ಧ ಹೋರಾಡುವಾಗ ಸಾವನ್ನಪ್ಪಿದ್ದಾನೆ.

ರಷ್ಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿದ ದುಬೈನ ವ್ಯಕ್ತಿಯೊಬ್ಬ ತಿಂಗಳಿಗೆ 1 ರಿಂದ 2 ಲಕ್ಷ ರೂ ಸಂಬಳ ಕೊಡಿಸುವುದಾಗಿ ವಂಚನೆ, ವಂಚನೆ ಜಾಲಕ್ಕೆ ಸಿಲುಕಿದ ಅಸ್ಫಾನ್​​​ ಮಾಸ್ಕೋಗೆ ತೆರಳಿದ್ದಾನೆ.

Advertisement

ಅಲ್ಲಿ ತರಬೇತಿ ಶಿಬಿರಕ್ಕೆ ಸೇರಿಸಿ ಯುದ್ಧಕ್ಕೆ ಬಳಸಿಕೊಂಡಿದ್ದಾರೆ. ಅಲ್ಲದೇ ಕರ್ನಾಟಕ, ಪಂಜಾಬ್​​​ ಸೇರಿದಂತೆ ಉದ್ಯೋಗ ವಂಚನೆ ಜಾಲಕ್ಕೆ ಸಿಲುಕಿ ರಷ್ಯಾಕ್ಕೆ ತೆರಳಿರುವ ಭಾರತೀಯ ಯುವಕರನ್ನು ರಷ್ಯಾ ಸೇನೆ ತನ್ನ ಸ್ವಾರ್ಥಕ್ಕಾಗಿ ಬಳಿಸಿಕೊಳ್ಳುತ್ತಿದ್ದು, ಈ ಪ್ರಕರಣ ಹೈದ್ರಾಬಾದ್​​ನ ಸಂಸದ ಅಸಾವುದ್ದೀನ್​​ ಓವೈಸಿ ಮುಖಾಂತರ ಬೆಳಕಿಗೆ ಬಂದಿದೆ. ಈ ಘಟನೆ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರನ್​​ಧೀರ್​ ಜೈಸ್ವಾಲ್​​ ಕಳೆದ ವಾರ ಮಾತನಾಡಿ, ಯುವಕರನ್ನು ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.

Advertisement
Tags :
Advertisement