ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ: ಕಲ್ಲಡ್ಕ ವಿರುದ್ಧ ಉಳ್ಳಾಲ ಠಾಣೆಗೆ ದೂರು

ಹೆಣ್ಮಕ್ಕಳಿಗೆ ನ್ಯಾಯ ಸಿಗಬೇಕಾದರೆ ಕಲ್ಲಡ್ಕ ಪ್ರಭಾಕರ್ ಭಟ್ ಬಂಧನ ಆಗಲೇಬೇಕು. ಆದರೆ ಯಾವುದೇ ಸರಕಾರ ಬಂದರೂ ಅವರ ಬಂಧನ ಆಗುವುದು ಅನುಮಾನ ಎಂದು ಉಳ್ಳಾಲ‌ ದರ್ಗಾದ ಮಾಜಿ ಅಧ್ಯಕ್ಷ ಅಬ್ದುಲ್‌ ರಶೀದ್‌ ತಿಳಿಸಿದರು.
03:35 PM Dec 27, 2023 IST | Gayathri SG

ಉಳ್ಳಾಲ: ಹೆಣ್ಮಕ್ಕಳಿಗೆ ನ್ಯಾಯ ಸಿಗಬೇಕಾದರೆ ಕಲ್ಲಡ್ಕ ಪ್ರಭಾಕರ್ ಭಟ್ ಬಂಧನ ಆಗಲೇಬೇಕು. ಆದರೆ ಯಾವುದೇ ಸರಕಾರ ಬಂದರೂ ಅವರ ಬಂಧನ ಆಗುವುದು ಅನುಮಾನ ಎಂದು ಉಳ್ಳಾಲ‌ ದರ್ಗಾದ ಮಾಜಿ ಅಧ್ಯಕ್ಷ ಅಬ್ದುಲ್‌ ರಶೀದ್‌ ತಿಳಿಸಿದರು.

Advertisement

ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಉಳ್ಳಾಲ‌ ಪೌರ ಸಮನ್ವಯ ಸಮಿತಿ ಮಂಗಳವಾರ ಉಳ್ಳಾಲ‌ ಠಾಣೆಗೆ ದೂರು ನೀಡಿದೆ. ಈ ಸಂದರ್ಭ ಮಾತನಾಡಿದ ಅಬ್ದುಲ್ ರಶೀದ್, ನಾವು ಪ್ರತಿಭಟನೆ ಮಾಡಿ ಅಶಾಂತಿಗೆ ಕಾರಣರಾಗುವುದಿಲ್ಲ. ಯಾವುದೇ ಪ್ರಕರಣ ಶಾಂತಿ, ಸೌಹಾರ್ದಯುತ ಮಾತುಕತೆ ಮೂಲಕ ಬಗೆಹರಿಯಬೇಕೆಂದು ಬಯಸುವವರು. ಕಲ್ಲಡ್ಕ ಹೇಳಿಕೆ ನಮಗೆ ಅತ್ಯಂತ ಹೆಚ್ಚು ನೋವು ತಂದ ಕಾರಣ ಮನವಿ ನೀಡುತ್ತಿದ್ದೇವೆ ಎಂದು ತಿಳಿಸಿದರು. ಉಳ್ಳಾಲ ನಗರ ಸಭೆ ಮಾಜಿ ಉಪಾಧ್ಯಕ್ಷ ಯು.ಪಿ ಅಯೂಬ್‌ ಮಂಚಿಲ ಮಾತನಾಡಿ ಪ್ರಭಾಕರ ಭಟ್‌ ಹೇಳಿಕೆ ಮುಸಲ್ಮಾನರು ಮಾತ್ರವಲ್ಲ ಎಲ್ಲ ಧರ್ಮದವರಿಗೆ ನೋವಾಗಿದೆ ಎಂದರು.

ಈ ಸಂದರ್ಭ ಯೂಸೂಫ್‌ ಉಳ್ಳಾಲ್‌, ಅಬ್ಬಾಸ್‌ ಕೋಟೇ ಪುರ, ಅಯೂಬ್‌ ಮಂಚಿಲ, ಮಹಮ್ಮದ್‌ ತ್ವಾಹಾ, ಹಮೀದ್‌ ಕೋಡಿ ಮೊದಲಾದವರಿದ್ದರು.

Advertisement

Advertisement
Tags :
LatestNewsNewsKannadaಉಳ್ಳಾಲ
Advertisement
Next Article