ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಗಾಜಾದಲ್ಲಿ ಪತ್ರಕರ್ತರ ಸಾವು: ವಿಶ್ವಸಂಸ್ಥೆ ಕಳವಳ

ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಅಲ್ ಜಜೀರಾ ವರದಿಗಾರರು ಮೃತಪಟ್ಟಿದ್ದು ಗಾಜಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
08:23 PM Jan 10, 2024 IST | Ashika S

ಜಿನೀವಾ: ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಅಲ್ ಜಜೀರಾ ವರದಿಗಾರರು ಮೃತಪಟ್ಟಿದ್ದು ಗಾಜಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

Advertisement

ತನ್ನ ಇಬ್ಬರು ಪ್ಯಾಲೆಸ್ತೀನ್ ಪತ್ರಕರ್ತರನ್ನು ದಕ್ಷಿಣದ ನಗರ ರಫಾದಲ್ಲಿ ಹತ್ಯೆ ಮಾಡಲಾಗಿದೆ. ಇದು ಇಸ್ರೇಲಿ "ಉದ್ದೇಶಿತ ಹತ್ಯೆ" ಎಂದು ಅಲ್ ಜಜೀರಾ ಹೇಳಿಕೊಂಡಿದೆ.

ಗಾಜಾದಲ್ಲಿ ಮಾಧ್ಯಮ ವರದಿಗಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವ ಬಗ್ಗೆ ತುಂಬಾ ಕಳವಳವಿದೆ ಎಂದು ವಿಶ್ವಸಂಸ್ಥೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. ಕಾರಿನ ಮೇಲೆ ನಡೆದ IDF ದಾಳಿಯಲ್ಲಿ ಹಮ್ಜಾ ವೇಲ್ ದಹದೌಹ್ ಮತ್ತು ಮುಸ್ತಫಾ ಅಬು ತುರಿಯಾ ಮೃತಪಟ್ಟಿದ್ದು ಇದೇ ರೀತಿ ಮೃತಪಟ್ಟಿರುವ ಪತ್ರಕರ್ತರ ಹತ್ಯೆಗಳನ್ನು ಸಂಪೂರ್ಣ ಸ್ವತಂತ್ರವಾಗಿ ತನಿಖೆ ಮಾಡಬೇಕು.

Advertisement

ಅಂತರರಾಷ್ಟ್ರೀಯ ಕಾನೂನಿನ ಕಟ್ಟುನಿಟ್ಟಾದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಉಲ್ಲಂಘನೆಗಳನ್ನು ಕಾನೂನು ಕ್ರಮ ಜರುಗಿಸಬೇಕು ಎಂದು ಅದು ಹೇಳಿದೆ.

Advertisement
Tags :
LatestNewsNewsKannadaಅಲ್ ಜಜೀರಾಇಸ್ರೇಲ್‌ಗಾಂಜಾವರದಿಗಾರವಿಶ್ವಸಂಸ್ಥೆ
Advertisement
Next Article