ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಡಿ.10 ರಂದು ಭಾರತ- ಪಾಕ್ ನಡುವೆ ಕ್ರಿಕೆಟ್ ಕದನ

ಏಷ್ಯಾಕಪ್ ‌ ಮತ್ತು ಏಕದಿನ ವಿಶ್ವಕಪ್ ನಂತರ, ಕ್ರಿಕೆಟ್ ಅಭಿಮಾನಿಗಳು ಈಗ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಕದನವನ್ನು ಕಣ್ತುಂಬಿಕೊಳ್ಳಲಿದ್ದಾರೆ.
09:39 AM Dec 06, 2023 IST | Ashitha S

ದುಬೈ: ಏಷ್ಯಾಕಪ್ ‌ ಮತ್ತು ಏಕದಿನ ವಿಶ್ವಕಪ್ ನಂತರ, ಕ್ರಿಕೆಟ್ ಅಭಿಮಾನಿಗಳು ಈಗ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಕದನವನ್ನು ಕಣ್ತುಂಬಿಕೊಳ್ಳಲಿದ್ದಾರೆ.

Advertisement

ಉಭಯ ತಂಡಗಳ ಕ್ರಿಕೆಟ್ ಕದನ ಡಿಸೆಂಬರ್ 10 ರಂದು ನಡೆಯಲ್ಲಿದೆ. ವಾಸ್ತವವಾಗಿ 19 ವರ್ಷದೊಳಗಿನವರ ಏಷ್ಯಾಕಪ್ ಡಿಸೆಂಬರ್ 8 ರಿಂದ ಪ್ರಾರಂಭವಾಗಲಿದ್ದು, ಅಂತಿಮ ಪಂದ್ಯ ಡಿಸೆಂಬರ್ 17 ರಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಇನ್ನು ಈ ಟೂರ್ನಿಯ ಮೊದಲ ಪಂದ್ಯ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಲಿದ್ದು, ಐಸಿಸಿ ಅಕಾಡೆಮಿ ಓವಲ್-1 ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಆ ಬಳಿಕ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಡಿಸೆಂಬರ್ 10 ರಂದು, ಐಸಿಸಿ ಅಕಾಡೆಮಿ ಓವಲ್-1ರಲ್ಲಿ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ.

Advertisement

ಅಂಡರ್ 19 ಏಷ್ಯಾಕಪ್ ಪಂದ್ಯಾವಳಿಯ ಎಲ್ಲಾ ಪಂದ್ಯಗಳನ್ನು ನೇರ ಪ್ರಸಾರ ಮಾಡಲಾಗುವುದಿಲ್ಲ. ಆದರೆ ಈ ಪಂದ್ಯಗಳನ್ನು ಎಸಿಸಿಯ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ.

19 ವರ್ಷದೊಳಗಿನವರ ಏಷ್ಯಾಕಪ್‌ಗೆ ಭಾರತ ತಂಡ: ಉದಯ್ ಸಹರನ್ (ನಾಯಕ), ಸೌಮ್ಯ ಕುಮಾರ್ ಪಾಂಡೆ (ಉಪನಾಯಕ), ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಅರವೇಲಿ ಅವನೀಶ್ ರಾವ್ (ವಿಕೆಟ್ ಕೀಪರ್), ಮುರುಗನ್ ಅಭಿಷೇಕ್, ಇನೇಶ್ ಮಹಾಜನ್ (ವಿಕೆಟ್ ಕೀಪರ್) ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ ಮತ್ತು ನಮನ್ ತಿವಾರಿ.

ಪಾಕಿಸ್ತಾನ ತಂಡ: ಸಾದ್ ಬೇಗ್ (ನಾಯಕ ಮತ್ತು ವಿಕೆಟ್ ಕೀಪರ್), ಅರಾಫತ್ ಮಿನ್ಹಾಸ್ (ಉಪನಾಯಕ), ಅಹ್ಮದ್ ಹುಸೇನ್, ಅಲಿ ಅಸ್ಫಂಡ್, ಅಮೀರ್ ಹಸನ್, ಅಜನ್ ಅವೈಸ್, ಖುಬೈಬ್ ಖಲೀಲ್, ನಜಾಬ್ ಖಾನ್, ನವೀದ್ ಅಹ್ಮದ್ ಖಾನ್, ಮೊಹಮ್ಮದ್ ರಿಯಾಜುಲ್ಲಾ, ಮೊಹಮ್ಮದ್ ತೈಬ್ ಆರಿಫ್, ಮೊಹಮ್ಮದ್ ಝೀಶನ್ , ಶಮೀಲ್ ಹುಸೇನ್ ಮತ್ತು ಉಬೈದ್ ಶಾ.

 

Advertisement
Tags :
IND vs PAKindiaLatestNewsNewsKannadaದುಬೈನವದೆಹಲಿಭಾರತ- ಪಾಕ್‌
Advertisement
Next Article