ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನೂತನ ಸಂಸತ್ತಿನಲ್ಲಿ ಮೊದಲ ಬಜೆಟ್​: ರಾಷ್ಟ್ರಪತಿ ಭವನ ತಲುಪಿದ ವಿತ್ತ ಸಚಿವೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವರಾಗಿ ಸೀತಾರಾಮನ್‌ ಮಂಡಿಸಲಿರುವ 6ನೇ ಬಜೆಟ್ ಇದಾಗಿದೆ. ಹಾಗೆಯೇ ಪ್ರಧಾನಿ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್‌ ಕೂಡ ಇದಾಗಿರಲಿದೆ. ಬಜೆಟ್​ ಮಂಡನೆ ಬೆಳಗ್ಗೆ 11 ಗಂಟೆಗೆ ಶುರುವಾಗಲಿದೆ.
09:56 AM Feb 01, 2024 IST | Ashitha S

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವರಾಗಿ ಸೀತಾರಾಮನ್‌ ಮಂಡಿಸಲಿರುವ 6ನೇ ಬಜೆಟ್ ಇದಾಗಿದೆ. ಹಾಗೆಯೇ ಪ್ರಧಾನಿ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್‌ ಕೂಡ ಇದಾಗಿರಲಿದೆ. ಬಜೆಟ್​ ಮಂಡನೆ ಬೆಳಗ್ಗೆ 11 ಗಂಟೆಗೆ ಶುರುವಾಗಲಿದೆ.

Advertisement

ಇನ್ನು ನೂತನ ಸಂಸತ್ತಿನಲ್ಲಿ ಮೊದಲ ಬಜೆಟ್​ ಮಂಡನೆಯಾಗುತ್ತಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರಪತಿ ಭವನ ತಲುಪಿದ್ದಾರೆ.  ಹಾಗೆಯೇ ಮಧ್ಯಂತರ ಬಜೆಟ್​ ಪ್ರತಿಗಳು ಪಾರ್ಲಿಮೆಂಟ್​ ತಲುಪಿದೆ. ಬಜೆಟ್ ಮಂಡನೆಗೂ ಮುನ್ನ ಸಚಿವ ಸಂಪುಟ ಸಭೆ ನಡೆಯುತ್ತಿದೆ. ಸಭೆಯಲ್ಲಿ ಬಜೆಟ್‌ಗೆ ಸಂಪುಟದ ಒಪ್ಪಿಗೆ ಸಿಗಲಿದೆ. ಸಭೆಯಲ್ಲಿ ಪ್ರಧಾನಿ ಮೋದಿ  ಸೇರಿದಂತೆ ಪ್ರಮುಖರಿದ್ದಾರೆ.

ಬಜೆಟ್‌ಗೆ ಮೋದಿ ಸಂಪುಟದ ಒಪ್ಪಿಗೆ ಸಿಕ್ಕಿದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ ಮುರ್ಮು ಅವರು ನಿರ್ಮಲಾ ಸೀತಾರಾಮನ್​ಗೆ ಸಿಹಿ ತಿನ್ನಿಸಿದರು.

Advertisement

 

ಬಜೆಟ್​ ಮಂಡನೆ ಬೆಳಗ್ಗೆ 11 ಗಂಟೆಗೆ ಶುರುವಾಗಲಿದೆ. ನಿರ್ಮಲಾ ಸೀತಾರಾಮನ್ ಅವರ ಬಜೆಟ್​ ಭಾಷಣದ ನೇರ ಪ್ರಸಾರವನ್ನು ಡಿಡಿ ನ್ಯೂಸ್​ನಲ್ಲಿ ವೀಕ್ಷಿಸಬಹುದಾಗಿದೆ.

ಲೋಕಸಭೆ ಚುನಾವಣೆಯ ನಂತರ ಸರ್ಕಾರ ರಚನೆಯಾಗುವವರೆಗೆ ಮಧ್ಯಂತರ ಬಜೆಟ್  ಮಧ್ಯಂತರ ಅವಧಿಯ ಹಣಕಾಸಿನ ಅಗತ್ಯಗಳನ್ನು ನೋಡಿಕೊಳ್ಳುತ್ತದೆ. ಹೊಸ ಸರ್ಕಾರದಿಂದ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುವುದು.

Read More:

1.

ಕೇಂದ್ರ ಮಧ್ಯಂತರ ಬಜೆಟ್ ಮಂಡನೆ, ನಿರೀಕ್ಷೆಗಳೇನು?

2.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಬಜೆಟ್‌ನತ್ತ ಇಡೀ ದೇಶದ ಚಿತ್ತ

 

Advertisement
Tags :
GOVERNMENTindiaLatestNewsNewsKannadaNIRMALA SITHARAMANನವದೆಹಲಿನಿರ್ಮಲಾಪ್ರಧಾನಿ ನರೇಂದ್ರ ಮೋದಿ
Advertisement
Next Article