For the best experience, open
https://m.newskannada.com
on your mobile browser.
Advertisement

ಇಂದು ರೀ ರಿಲೀಸ್ ಆದ ಉಪ್ಪಿಯ ‘‘A’’ ಸಿನಿಮಾ; ಸ್ವಾಗತಿಸಿದ ಫ್ಯಾನ್ಸ್

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ ಪ್ರಸನ್ನ ಥಿಯೇಟರ್​ನಲ್ಲಿ ಬಿಡುಗಡೆಗೊಂಡಿದೆ.
10:08 AM May 17, 2024 IST | Ashitha S
ಇಂದು ರೀ ರಿಲೀಸ್ ಆದ ಉಪ್ಪಿಯ ‘‘a’’ ಸಿನಿಮಾ  ಸ್ವಾಗತಿಸಿದ ಫ್ಯಾನ್ಸ್

‌ಬೆಂಗಳೂರು: ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ ಪ್ರಸನ್ನ ಥಿಯೇಟರ್​ನಲ್ಲಿ ಬಿಡುಗಡೆಗೊಂಡಿದೆ.

Advertisement

́ʼAʼ ಸಿನಿಮಾದಲ್ಲಿ ಉಪೇಂದ್ರ ಅವರು ನಿರ್ದೇಶನದೊಂದಿಗೆ ನಾಯಕನಾಗೂ ನಟಿಸಿದ್ದರು. ಇವರಿಗೆ ನಾಯಕಿಯಾಗಿ ಚಾಂದಿನಿ ಅಭಿನಯಿಸಿದ್ದರು. ಇಂದು ́ʼAʼ ಸಿನಿಮಾ ಮತ್ತೆ ರೀ ರಿಲೀಸ್​​ ಆಗಿದೆ. 25 ವರ್ಷಗಳ ಬಳಿಕ ಮತ್ತೆ ಥಿಯೇಟರ್​ಗೆ ಬಂದಿದೆ. ಫ್ಯಾನ್ಸ್‌ ಇದನ್ನು ಭರ್ಜರಿಯಾಗಿಯೇ ಸ್ವಾಗತಿಸಿದ್ದಾರೆ.

1998ರಲ್ಲಿ ‘ಎ’ ಸಿನಿಮಾ ರಿಲೀಸ್ ಆಗಿತ್ತು. ಇದೀಗ 2024ರಲ್ಲಿ ಮತ್ತೆ ದೊಡ್ಡ ಪರದೆ ಮೇಲೆ ಕಾಣಿಸಿದೆ. ಅಭಿಮಾನಿಗಳಂತೂ ಉಪ್ಪಿಯ ಹಳೆಯ ಸಿನಿಮಾವನ್ನು ಮತ್ತೆ ನೋಡುವ ಖುಷಿಯಲ್ಲಿದ್ದಾರೆ.

Advertisement

ಇನ್ನು ಈ ಚಿತ್ರದ ಕುರಿತು ಮಾತನಾಡಿರುವ ನಾಯಕಿ ಚಾಂದಿನಿ ಅವರು, “A” ಸಿನಿಮಾದಲ್ಲಿ ಹೇಗಿದ್ದರೋ, ಈಗಲು ಹಾಗೆ ಇದ್ದಾರೆ. ಅದಕ್ಕೆ ಅವರು ನೀಡುವ ಕಾರಣ, ನನ್ನ ಜೀವನವನ್ನೇ ಬದಲಿಸಿದಂತಹ ಸಿನಿಮಾ ಅದು. ಅದರಿಂದ ನನಗೆ ಸಿಕ್ಕ ಕನ್ನಡ ಜನರ ಪ್ರೀತಿ ಹಾಗು ಆ ಸಿನಿಮಾದ ಅ ಒಂದು ಫೇಮಸ್ ಡೈಲಾಗ್ “GOD IS GREAT” ಅನ್ನುವ ಹಾಗೆ, ಈ ಎರೆಡರ ಆಶೀರ್ವಾದದಿಂದ ನಾನು ಇವತ್ತಿಗೂ “A” ಚಾಂದಿನಿ ರೀತಿಯಲ್ಲೆ ಇದ್ದೀನಿ. ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ “A”. ಪ್ರಬುದ್ಧ ನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಬಗ್ಗೆ ವರ್ಣಿಸಲು ಪದಗಳೇ ಇಲ್ಲ‌.

ಅಂದಿಗೂ ಇಂದಿಗೂ ನನ್ನ ಮೆಚ್ಚಿನ ನಿರ್ದೇಶಕ ಉಪೇಂದ್ರ ಅವರು. ಗುರುಕಿರಣ್ ಅವರ ಸಂಗೀತದಲ್ಲಿ ಮೂಡಿಬಂದಿರುವ “A” ಚಿತ್ರದ ಹಾಡುಗಳು ಈಗಲೂ ಜನಪ್ರಿಯ. ಕನ್ನಡಿಗರು “A” ಚಿತ್ರದಿಂದ ಇಲ್ಲಿಯವರೆಗೂ ನನಗೆ ತೋರುತ್ತಿರುವ ಪ್ರೀತಿಗೆ ಚಿರ ಋಣಿ. ಇಂತಹ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದಿದ್ದಾರೆ.

Advertisement
Tags :
Advertisement