ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಗಾಳಿಯಿಂದ ನೀರು ತಯಾರಿಸುವ ಉರವು ಲ್ಯಾಬ್ಸ್ ಸಂಸ್ಥೆ : ಹೇಗೆ ? ಇಲ್ಲಿದೆ ಮಾಹಿತಿ

ಒಂದೆಡೆ ಬಿಸಿಲಿನ ಧಗೆ ಇನ್ನೊಂದೆಡೆ ನೀರಿನ ಕೊರತೆ ಇದರಿಂದ ಜನತೆ ಬೇಸತ್ತು ಹೋಗಿದ್ದಾರೆ. ನೀರಿನ ಸಮಸ್ಯೆಯನ್ನು ಇಡೀ ಪ್ರಪಂಚವೇ ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಗಾಳಿಯಿಂದ ನೀರು ತಯಾರಿಸುವ ತಂತ್ರಜ್ಞಾನ ಸದ್ದಿಲ್ಲದೇ ಆರಂಭವಾಗಿದೆ. ಈಗಾಗಲೇ ಇದನ್ನು ಕೆಲವು ಹೋಟೇಲ್‌ ಗಳಲ್ಲಿವು ಬಳಸುತ್ತಾರೆ.ಉರವು ಲ್ಯಾಬ್ಸ್​ನ ಸಹ-ಸಂಸ್ಥಾಪಕ ಸ್ವಪ್ನಿಲ್ ಶ್ರೀವಾಸ್ತವ್ ಅವರು ಈ ಬಗ್ಗೆ ನ್ಯೂಸ್18 ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ.
02:29 PM Apr 09, 2024 IST | Nisarga K
ಗಾಳಿಯಿಂದ ನೀರು ತಯಾರಿಸುವ ಉರವು ಲ್ಯಾಬ್ಸ್ ಸಂಸ್ಥೆ : ಹೇಗೆ ? ಇಲ್ಲಿದೆ ಮಾಹಿತಿ

ಬೆಂಗಳೂರು:  ಒಂದೆಡೆ ಬಿಸಿಲಿನ ಧಗೆ ಇನ್ನೊಂದೆಡೆ ನೀರಿನ ಕೊರತೆ ಇದರಿಂದ ಜನತೆ ಬೇಸತ್ತು ಹೋಗಿದ್ದಾರೆ. ನೀರಿನ ಸಮಸ್ಯೆಯನ್ನು ಇಡೀ ಪ್ರಪಂಚವೇ ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಗಾಳಿಯಿಂದ ನೀರು ತಯಾರಿಸುವ ತಂತ್ರಜ್ಞಾನ ಸದ್ದಿಲ್ಲದೇ ಆರಂಭವಾಗಿದೆ. ಈಗಾಗಲೇ ಇದನ್ನು ಕೆಲವು ಹೋಟೇಲ್‌ ಗಳಲ್ಲಿವು ಬಳಸುತ್ತಾರೆ.ಉರವು ಲ್ಯಾಬ್ಸ್​ನ ಸಹ-ಸಂಸ್ಥಾಪಕ ಸ್ವಪ್ನಿಲ್ ಶ್ರೀವಾಸ್ತವ್ ಅವರು ಈ ಬಗ್ಗೆ ನ್ಯೂಸ್18 ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ.

Advertisement

ಕ್ಯಾಲ್ಷಿಯಂ ಆಕ್ಸೈಡ್, ಕ್ಯಾಲ್ಷಿಯಮ್ ಕ್ಲೋರೈಡ್ ಇತ್ಯಾದಿ ತೇವ ಹೀರುವ ವಸ್ತುಗಳ ಗುಣಗಳನ್ನು ಆಧರಿಸಿ ಗಾಳಿಯಿಂದ ನೀರು ತೆಗೆಯುವ ತಂತ್ರಜ್ಞಾನವನ್ನು ಉರವು ಅಭಿವೃದ್ಧಿಪಡಿಸಿದೆ. ಈ ವಸ್ತುಗಳ ಮೂಲಕ ಗಾಳಿಯಲ್ಲಿರುವ ತೇವಾಂಶವನ್ನು ಹೀರಿಕೊಳ್ಳಲಾಗುತ್ತದೆ. ಬಳಿಕ ಅದನ್ನು ಬಿಸಿ ಮಾಡಿ ಆವಿ ಹೊರಬರಿಸಲಾಗುತ್ತದೆ. ನಿಯಂತ್ರಿತ ರೀತಿಯಲ್ಲಿ ಬಿಸಿ ಮಾಡುವುದು ಮತ್ತು ತಣ್ಣಗಾಗಿಸುವುದು ಈ ಪ್ರಕ್ರಿಯೆಗಳ ಮೂಲಕ ಈ ಆವಿಯನ್ನು ಕುಡಿಯುವ ನೀರಾಗಿ ಪರಿವರ್ತಿಸಲಾಗುತ್ತದೆ ಎಂದು ಉರವು ಲ್ಯಾಬ್ಸ್ ಸಿಇಒ ಹೇಳಿದ್ದಾರೆ

ಬೆಂಗಳೂರಿನಲ್ಲಿ ಒಂದು ತಯಾರಕಾ ಘಟಕವನ್ನು ಉರವು ಲ್ಯಾಬ್ಸ್ ಹೊಂದಿದೆ. ಕಳೆದ ಒಂದು ವರ್ಷದಿಂದಲೂ ನೀರಿನ ತಯಾರಿಕೆ ಮಾಡುತ್ತಿದೆ.ಹಾಗೂ ವಿಷೇಶವಾಗಿ ಇಲ್ಲಿ ಪ್ಲಾಸ್ಟಿಕ್‌ ಬಾಟಲ್‌ ಬದಲು ಗಾಜಿನ ಬಾಟಲ್‌ ಬಳಸಲಾಗುತ್ತಿದೆ.

Advertisement

ಈ ಸಂಸ್ಥೆ ಕಳೆದ 8 ತಿಂಗಳಲ್ಲಿ 3.5 ಲಕ್ಷ ಬಾಟಲ್ ನೀರನ್ನು ಮಾರಾಟ ಮಾಡಿದೆ. ತಮ್ಮ ಉತ್ಪನ್ನದ ಬಗ್ಗೆ ವಿಶ್ವಾಸ ಇರುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಸಿಇಒ ಸ್ವಪ್ನಿಲ್ ಶ್ರೀವಾಸ್ತವ ಹೇಳುತ್ತಾರೆ.

Advertisement
Tags :
airbengaluruFACTORYlabLatestNewsmakingNewsKarnatakaWATER
Advertisement
Next Article