For the best experience, open
https://m.newskannada.com
on your mobile browser.
Advertisement

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಪಡೆದ ಊರ್ವಶಿ ರೌಟೇಲಾ

ಲೋಕಸಭೆ ಚುನಾವಣೆ ಸಮೀಪಿಸಿದೆ. ಈ ಸಂದರ್ಭದಲ್ಲಿ ನಟಿ ಊರ್ವಶಿ ರೌಟೇಲಾ ಮಹತ್ವದ ಘೋಷಣೆ ಮಾಡಿದ್ದಾರೆ. ‘ಟಿಕೆಟ್ ಸಿಕ್ಕಿದೆ’ ಎಂದು ಊರ್ವಶಿ ಹೇಳಿದ್ದಾರೆ. ಆದರೆ ತಮಗೆ ಯಾವ ಕ್ಷೇತ್ರದಿಂದ, ಯಾವ ಪಕ್ಷದಿಂದ ಈ ಟಿಕೆಟ್ ಸಿಕ್ಕಿದೆ ಎಂಬ ಬಗ್ಗೆ ಅವರು ಏನನ್ನೂ ವಿವರಿಸಿಲ್ಲ.
01:22 PM Mar 22, 2024 IST | Ashitha S
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಪಡೆದ ಊರ್ವಶಿ ರೌಟೇಲಾ

ದೆಹಲಿ: ಲೋಕಸಭೆ ಚುನಾವಣೆ ಸಮೀಪಿಸಿದೆ. ಈ ಸಂದರ್ಭದಲ್ಲಿ ನಟಿ ಊರ್ವಶಿ ರೌಟೇಲಾ ಮಹತ್ವದ ಘೋಷಣೆ ಮಾಡಿದ್ದಾರೆ. ‘ಟಿಕೆಟ್ ಸಿಕ್ಕಿದೆ’ ಎಂದು ಊರ್ವಶಿ ಹೇಳಿದ್ದಾರೆ. ಆದರೆ ತಮಗೆ ಯಾವ ಕ್ಷೇತ್ರದಿಂದ, ಯಾವ ಪಕ್ಷದಿಂದ ಈ ಟಿಕೆಟ್ ಸಿಕ್ಕಿದೆ ಎಂಬ ಬಗ್ಗೆ ಅವರು ಏನನ್ನೂ ವಿವರಿಸಿಲ್ಲ.

Advertisement

ಇದರ ಜೊತೆ ತಾವು ಚುನಾವಣೆಗೆ ಸ್ಪರ್ಧಿಸುತ್ತೇನೋ ಅಥವಾ ಇಲ್ಲವೋ ಎಂಬುದನ್ನು ಅವರು ಖಚಿತಪಡಿಸಿಲ್ಲ. ಊರ್ವಶಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚುನಾವಣಾ ಟಿಕೆಟ್ ಬಗ್ಗೆ ಮಾತನಾಡಿರುವ ಅವರು, ‘ನನಗೆ ಟಿಕೆಟ್ ಸಿಕ್ಕಿದೆ. ಆದರೆ ನಾನು ಸ್ಪರ್ಧಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಬೇಕಿದೆ. ನಾನು ಸ್ಪರ್ಧಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್‌ನಲ್ಲಿ ಹೇಳಿ’ ಎಂದು ಅವರು ಈ ವಿಡಿಯೋದಲ್ಲಿ ಕೋರಿದ್ದಾರೆ.

https://www.instagram.com/reel/C4yTvqBS978/?utm_source=ig_embed&ig_rid=5a99dda0-9002-447c-a5db-88dbd2e798d8

Advertisement

Advertisement
Tags :
Advertisement