For the best experience, open
https://m.newskannada.com
on your mobile browser.
Advertisement

ಟೇಕಾಫ್ ಆಗುವ ವೇಳೆಯೇ ಕಳಚಿ ಬಿತ್ತು ವಿಮಾನದ ಚಕ್ರ: ವಿಡಿಯೋ ವೈರಲ್​

ವಿಮಾನವೊಂದು ಪ್ರಯಾಣಿಕರನ್ನು ಹೊತ್ತು ಟೇಕಾಫ್ ಆಗಿತ್ತು. ಪ್ರಯಾಣಿಕರು ವಿಮಾನ ಟೇಕಾಫ್ ಆಗುವಾಗ ಕಾಣುವ ಹೊರಗಿನ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ವಿಮಾನದ ಹಿಂದಿನ ಚಕ್ರ ಕಳಚಿ ಬಿದ್ದಿರುವ ಘಟನೆ ಮೊಬೈಲ್​ನಲ್ಲಿ ಸೆರೆಯಾಗಿದೆ.
05:03 PM Mar 08, 2024 IST | Ashitha S
ಟೇಕಾಫ್ ಆಗುವ ವೇಳೆಯೇ ಕಳಚಿ ಬಿತ್ತು ವಿಮಾನದ ಚಕ್ರ  ವಿಡಿಯೋ ವೈರಲ್​

ಸ್ಯಾನ್ ಫ್ರಾನ್ಸಿಸ್ಕೊ:  ವಿಮಾನವೊಂದು ಪ್ರಯಾಣಿಕರನ್ನು ಹೊತ್ತು ಟೇಕಾಫ್ ಆಗಿತ್ತು. ಪ್ರಯಾಣಿಕರು ವಿಮಾನ ಟೇಕಾಫ್ ಆಗುವಾಗ ಕಾಣುವ ಹೊರಗಿನ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ವಿಮಾನದ ಹಿಂದಿನ ಚಕ್ರ ಕಳಚಿ ಬಿದ್ದಿರುವ ಘಟನೆ ಮೊಬೈಲ್​ನಲ್ಲಿ ಸೆರೆಯಾಗಿದೆ.

Advertisement

ಯುನೈಟೆಡ್ ಏರ್‌ಲೈನ್ಸ್‌ನ ಬೋಯಿಂಗ್ 777 ವಿಮಾನವು ಭಾರಿ ಅಪಘಾತಕ್ಕೀಡಾಗಿದೆ. ಜಪಾನ್‌ಗೆ ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್ ಜೆಟ್‌ಲೈನರ್ ಸ್ಯಾನ್ ಫ್ರಾನ್ಸಿಸ್ಕೋದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಹಿಂಭಾಗದ ಲ್ಯಾಂಡಿಂಗ್ ಗೇರ್‌ನಲ್ಲಿ ಟೈರ್ ಸ್ಫೋಟ ಸಂಭವಿಸಿ ಟೈರ್ ಹಾರಿ ಕಳಚಿ ನೆಲಕ್ಕೆ ಬಿದ್ದಿದೆ.

ವಿಮಾನದಲ್ಲಿ ಅನುಭವಿ ಪೈಲಟ್‌ಗಳು ಇದ್ದಿದ್ದರಿಂದ ಯಾವುದೇ ಅನಾಹುತ ಸಂಭವಿಸಿರಲಿಲ್ಲ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಟೈರ್ ಹಾರಿಹೋಗಿರುವುದನ್ನು ಅರಿತ ಪೈಲಟ್‌ ವಿಮಾನವನ್ನು ಸುರಕ್ಷಿತವಾಗಿ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದರು. ಆತಂಕದಲ್ಲಿದ್ದ ಪ್ರಮಾಣಿಕರು ನಿಟ್ಟುಸಿರುಬಿಟ್ಟಿದ್ದಾರೆ. ಈ ಬೋಯಿಂಗ್​ ವಿಮಾನದಲ್ಲಿ 235 ಪ್ರಯಾಣಿಕರು ಮತ್ತು 14 ಸಿಬ್ಬಂದಿ ಪ್ರಯಾಣ ಮಾಡುತ್ತಿದ್ದರು.

Advertisement

ವಿಮಾನವು ಹಾರಾಡುವ ವೇಳೆ ಹಾರಿಹೋದ ಟೈರ್ ನೇರವಾಗಿ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಕಾರಿನ ಮೇಲೆ ಬಿದ್ದಿದೆ. ಕಾರಿನ ಮಧ್ಯ ಮತ್ತು ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಆದರೆ, ವಿಮಾನದಿಂದ ಟೈರ್ ಬೀಳುವ ವೇಳೆ ಕಾರು ಜಖಂಗೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Advertisement
Tags :
Advertisement