For the best experience, open
https://m.newskannada.com
on your mobile browser.
Advertisement

ದಕ್ಷಿಣ ಕೆರೊಲಿನಾ ಡೆಮಾಕ್ರಟಿಕ್ ಪ್ರೈಮರಿಯಲ್ಲಿ ಜೋ ಬೈಡನ್‌ ಗೆಲುವು

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮೊಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಆಯ್ಕೆಯಾಗಿ ದಕ್ಷಿಣ ಕೆರೋಲಿನಾ ರಾಜ್ಯದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಜೋ ಬೈಡನ್‌ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳಾದ ಮಿನ್ನೇಸೋಟ ರೆಪ್ ಡೀನ್ ಫಿಲಿಪ್ಸ್ ಮತ್ತು ಲೇಖಕಿ ಮರಿಯಾನ್ನೆ ವಿಲಿಯಮ್ಸ್‌ ಅವರನ್ನು ಸೋಲಿಸಿದ್ದಾರೆ.
12:22 PM Feb 04, 2024 IST | Ashitha S
ದಕ್ಷಿಣ ಕೆರೊಲಿನಾ ಡೆಮಾಕ್ರಟಿಕ್ ಪ್ರೈಮರಿಯಲ್ಲಿ ಜೋ ಬೈಡನ್‌ ಗೆಲುವು

ಕ್ಷಿಣ ಕೆರೋಲಿನಾ: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮೊಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಆಯ್ಕೆಯಾಗಿ ದಕ್ಷಿಣ ಕೆರೋಲಿನಾ ರಾಜ್ಯದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಜೋ ಬೈಡನ್‌ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳಾದ ಮಿನ್ನೇಸೋಟ ರೆಪ್ ಡೀನ್ ಫಿಲಿಪ್ಸ್ ಮತ್ತು ಲೇಖಕಿ ಮರಿಯಾನ್ನೆ ವಿಲಿಯಮ್ಸ್‌ ಅವರನ್ನು ಸೋಲಿಸಿದ್ದಾರೆ.

Advertisement

ಆ ಮೂಲಕ ಪಕ್ಷದ ಅಭ್ಯರ್ಥಿಯಾಗುವಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

'2020ರಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸುವ ಮೂಲಕ ರಾಜಕೀಯ ವಿದ್ವಾಂಸರ ಲೆಕ್ಕಚಾರಗಳನ್ನು ದಕ್ಷಿಣ ಕೆರೋಲಿನಾದ ಮತದಾರರು ಬುಡಮೇಲು ಮಾಡಿದ್ದರು. ಇದೀಗ 2024ರಲ್ಲಿಯೂ ನಮ್ಮ ಮೇಲೆ ಭರವಸೆ ಇಟ್ಟಿದ್ದಾರೆ' ಎಂದು ಚುನಾವಣಾ ಫಲಿತಾಂಶದ ಬಳಿಕ ಬೈಡನ್ ಹೇಳಿದ್ದಾರೆ. ಜ.23ರಂದು ರಿಪಬ್ಲಿಕ್‌ನ್‌ ಪಕ್ಷದ ಅಭ್ಯರ್ಥಿ ಆಯ್ಕೆಯಾಗಿ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಪ್ರತಿಸ್ಪರ್ಧಿ ನಿಕ್ಕಿ ಹ್ಯಾಲೆ ಅವರನ್ನು ಸೋಲಿಸಿ ಮುನ್ನಡೆ ಕಾಯ್ದುಕೊಂಡಿದ್ದರು.

Advertisement

Advertisement
Tags :
Advertisement