For the best experience, open
https://m.newskannada.com
on your mobile browser.
Advertisement

ಅಮೆರಿಕದ ಕಾರ್ನಿಂಗ್​ನಿಂದ ಭಾರತದಲ್ಲಿ ಗೊರಿಲ್ಲಾ ಗ್ಲಾಸ್ ಫ್ಯಾಕ್ಟರಿ

ಆ್ಯಪಲ್ ಕಂಪನಿಯ ಐಫೋನ್​ಗಳಿಗೆ ಗೊರಿಲ್ಲಾ ಗ್ಲಾಸ್ ಸರಬರಾಜು ಮಾಡುವ ಅಮೆರಿಕದ ಕಾರ್ನಿಂಗ್ ಸಂಸ್ಥೆ ಭಾರತದಲ್ಲಿ ಪ್ರತ್ಯೇಕ ಘಟಕ ಸ್ಥಾಪಿಸುತ್ತಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ ತಮಿಳುನಾಡಿನಲ್ಲಿ ಕಾರ್ನಿಂಗ್​ನಿಂದ ಗೊರಿಲ್ಲಾ ಗ್ಲಾಸ್ ಉತ್ಪಾದನೆ ಘಟಕ ಸ್ಥಾಪನೆ ಆಗುವ ಸಾಧ್ಯತೆ ಇದೆ.
01:57 PM Dec 12, 2023 IST | Ashitha S
ಅಮೆರಿಕದ ಕಾರ್ನಿಂಗ್​ನಿಂದ ಭಾರತದಲ್ಲಿ ಗೊರಿಲ್ಲಾ ಗ್ಲಾಸ್ ಫ್ಯಾಕ್ಟರಿ

ಚೆನ್ನೈ: ಆ್ಯಪಲ್ ಕಂಪನಿಯ ಐಫೋನ್​ಗಳಿಗೆ ಗೊರಿಲ್ಲಾ ಗ್ಲಾಸ್ ಸರಬರಾಜು ಮಾಡುವ ಅಮೆರಿಕದ ಕಾರ್ನಿಂಗ್ ಸಂಸ್ಥೆ ಭಾರತದಲ್ಲಿ ಪ್ರತ್ಯೇಕ ಘಟಕ ಸ್ಥಾಪಿಸುತ್ತಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ ತಮಿಳುನಾಡಿನಲ್ಲಿ ಕಾರ್ನಿಂಗ್​ನಿಂದ ಗೊರಿಲ್ಲಾ ಗ್ಲಾಸ್ ಉತ್ಪಾದನೆ ಘಟಕ ಸ್ಥಾಪನೆ ಆಗುವ ಸಾಧ್ಯತೆ ಇದೆ.

Advertisement

ಶ್ರೀಪೆರುಂಬುದೂರಿನ ಬಳಿ ಇರುವ ಪಿಳ್ಳೈಪ್ಪಾಕ್ಕಂನಲ್ಲಿ 1,000 ಕೋಟಿ ರೂ ಬಂಡವಾಳದೊಂದಿಗೆ ಫ್ಯಾಕ್ಟರಿ ಆರಂಭವಾಗಲಿದ್ದು 300 ಮಂದಿಗೆ ಉದ್ಯೋಗಾವಕಾಶ ಇರಲಿದೆ ಎನ್ನಲಾಗುತ್ತಿದೆ.

ಕಾರ್ನಿಂಗ್ ಸಂಸ್ಥೆ ಭಾರತದ ಮಾರುಕಟ್ಟೆಗೆ ಅಡಿ ಇಡುತ್ತಿರುವುದು ಇದೇ ಮೊದಲು. ಕೆಲ ತಿಂಗಳ ಹಿಂದೆ ಕಾರ್ನಿಂಗ್​ನಿಂದ ತಮ್ಮಲ್ಲಿ ಹೂಡಿಕೆ ಆಗಲಿದೆ ಎಂದು ತೆಲಂಗಾಣ ಸರ್ಕಾರ ಹೇಳಿಕೊಂಡಿತ್ತು. ಎರಡು ತಿಂಗಳ ಹಿಂದೆ ಬಿಸಿನೆಸ್ ಸ್ಟಾಂಡರ್ಡ್​ನಲ್ಲಿ ಬಂದ ವರದಿ ಪ್ರಕಾರ, ಭಾರತದ ಆಪ್ಟೀಮಸ್ ಇನ್​ಫ್ರಾಕಾಮ್ ಮತ್ತು ಅಮೆರಿಕದ ಕಾರ್ನಿಂಗ್ ಸಂಸ್ಥೆಗಳು ಜೊತೆಯಾಗಿ ಉಚ್ಚ ಗುಣಮಟ್ಟದ ಸ್ಮಾರ್ಟ್​ಫೋನ್ ಕವರ್ ಗ್ಲಾಸ್ ಫ್ಯಾಕ್ಟರಿಯನ್ನು ಆರಂಭಿಸಬಹುದು. 2024ರ ಅಂತ್ಯದೊಳಗೆ ಈ ಘಟಕಗಳು ಕಾರ್ಯಾಚರಿಸಬಹದು ಎಂದಿತ್ತು.

Advertisement

ಆದರೆ, ಆ್ಯಪಲ್​ನ ಐಫೋನ್ ಅಸೆಂಬ್ಲಿಂಗ್ ಮಾಡುವ ಫಾಕ್ಸ್​ಕಾನ್ ಮತ್ತು ಪೆಗಾಟ್ರಾನ್​ನ ಘಟಕಗಳು ತಮಿಳುನಾಡಿನಲ್ಲಿಯೇ ಇರುವುದರಿಂದ ತೆಲಂಗಾಣ ಬದಲು ತಮಿಳುನಾಡಿನಲ್ಲಿ ಗೋರಿಲ್ಲ ಗ್ಲಾಸ್ ಉತ್ಪಾದನಾ ಘಟಕ ಆರಂಭಿಸಲು ಕಾರ್ನಿಂಗ್ ನಿರ್ಧರಿಸಿದೆ ಎಂದು ಇಂದು ಪತ್ರಿಕೆಯಲ್ಲಿ ಬಂದ ವರದಿಯಲ್ಲಿ ಹೇಳಲಾಗಿದೆ.

Advertisement
Tags :
Advertisement