ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

8 ಮಂದಿಯನ್ನು ಹೊತ್ತಿದ್ದ ಅಮೆರಿಕದ ಮಿಲಿಟರಿ ವಿಮಾನ ಪತನ

ಯುಎಸ್ ಮಿಲಿಟರಿಗೆ ಸೇರಿದ ವಿ-22 ಓಸ್ಪ್ರೇ ವಿಮಾನವು ಜಪಾನ್‌ನ ಯಕುಶಿಮಾ ದ್ವೀಪದ ಬಳಿ ಬುಧವಾರ ಸಮುದ್ರಕ್ಕೆ ಅಪ್ಪಳಿಸಿದೆ. ವಿಮಾನದಲ್ಲಿ 8 ಜನರು ಇದ್ದರು ಎಂಬ ಮಾಹಿತಿ ದೊರೆತಿದೆ. ವಿಮಾನದಲ್ಲಿ ಇದ್ದವರೆಲ್ಲ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
04:14 PM Nov 29, 2023 IST | Ashika S

ವಾಷಿಂಗ್ಟನ್‌: ಯುಎಸ್ ಮಿಲಿಟರಿಗೆ ಸೇರಿದ ವಿ-22 ಓಸ್ಪ್ರೇ ವಿಮಾನವು ಜಪಾನ್‌ನ ಯಕುಶಿಮಾ ದ್ವೀಪದ ಬಳಿ ಬುಧವಾರ ಸಮುದ್ರಕ್ಕೆ ಅಪ್ಪಳಿಸಿದೆ. ವಿಮಾನದಲ್ಲಿ 8 ಜನರು ಇದ್ದರು ಎಂಬ ಮಾಹಿತಿ ದೊರೆತಿದೆ. ವಿಮಾನದಲ್ಲಿ ಇದ್ದವರೆಲ್ಲ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Advertisement

ಬುಧವಾರ ಮಧ್ಯಾಹ್ನ 2.40 ಕ್ಕೆ ರಾಡಾರ್ ರಾಡಾರ್‌ನಿಂದ ವಿಮಾನ ಕಣ್ಮರೆಯಾದ ನಂತರ (ಸ್ಥಳೀಯ ಕಾಲಮಾನ) 2.47 ಕ್ಕೆ ಘಟನೆ ಸಂಭವಿಸಿದೆ. ಯುಎಸ್ ಮಿಲಿಟರಿ ವಿಮಾನವು ಸಮುದ್ರಕ್ಕೆ ಬಿದ್ದಾಗ ಅದರ ಎಡ ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಸ್ಥಳೀಯರು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿನ ಯುಎಸ್ ಪಡೆಗಳ ವಕ್ತಾರರು ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಜಪಾನ್‌ನಲ್ಲಿ ಓಸ್ಪ್ರೇ ನಿಯೋಜನೆಯು ವಿವಾದಾಸ್ಪದವಾಗಿದೆ, ಹೈಬ್ರಿಡ್ ವಿಮಾನವು ಅಪಘಾತಗಳಿಗೆ ಗುರಿಯಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಆದರೆ ವಿಮಾನ ಸುರಕ್ಷಿತವಾಗಿದೆ ಎಂದು ಯುಎಸ್ ಮಿಲಿಟರಿ ಮತ್ತು ಜಪಾನ್ ಹೇಳುತ್ತವೆ.

Advertisement

ಇದೇ ರೀತಿಯ ಘಟನೆಯಲ್ಲಿ, ಓಸ್ಪ್ರೇ ವಿಮಾನ ಆಗಸ್ಟ್‌ನಲ್ಲಿ ಮಿಲಿಟರಿ ವ್ಯಾಯಾಮದ ಸಮಯದಲ್ಲಿ ಉತ್ತರ ಆಸ್ಟ್ರೇಲಿಯಾದ ಕರಾವಳಿಯಲ್ಲಿ ಅಪ್ಪಳಿಸಿ ಅಮೆರಿಕ ನೌಕಾಪಡೆ ಮೂವರು ಸಾವಿಗೀಡಾಗಿದ್ದರು.

Advertisement
Tags :
LatestNewsNewsKannadaನಾಪತ್ತೆಯಕುಶಿಮಾ ದ್ವೀಪಯುಎಸ್ ಮಿಲಿಟರಿವಿಮಾನ
Advertisement
Next Article