For the best experience, open
https://m.newskannada.com
on your mobile browser.
Advertisement

ಭಾರತ ಮೂಲದ 3 ಕಂಪನಿಗಳು ಸೇರಿದಂತೆ 12ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅಮೆರಿಕ ನಿರ್ಬಂಧ

ಇರಾನ್ ಜೊತೆ ವಹಿವಾಟು ಹೊಂದಿರುವ ಆರೋಪದ ಮೇರೆಗೆ ಭಾರತ ಮೂಲದ 3 ಕಂಪನಿಗಳು ಸೇರಿದಂತೆ 12ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅಮೆರಿಕ ನಿರ್ಬಂಧ ಹೇರಿದೆ.
11:47 AM Apr 27, 2024 IST | Ashitha S
ಭಾರತ ಮೂಲದ 3 ಕಂಪನಿಗಳು ಸೇರಿದಂತೆ 12ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅಮೆರಿಕ ನಿರ್ಬಂಧ

ವಾಷಿಂಗ್ಟನ್: ಇರಾನ್ ಜೊತೆ ವಹಿವಾಟು ಹೊಂದಿರುವ ಆರೋಪದ ಮೇರೆಗೆ ಭಾರತ ಮೂಲದ 3 ಕಂಪನಿಗಳು ಸೇರಿದಂತೆ 12ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅಮೆರಿಕ ನಿರ್ಬಂಧ ಹೇರಿದೆ.

Advertisement

ಇರಾನಿಯನ್‌ ಸೇನೆ ಜೊತೆ ಅಕ್ರಮ ವ್ಯಾಪಾರ ವಹಿವಾಟು ಹೊಂದಿರುವ 12ಕ್ಕೂ ಅಧಿಕ ಕಂಪನಿಗಳು, ಹಡುಗುಗಳು ಮತ್ತು ಉದ್ಯಮಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದ್ದು, ಇದರಲ್ಲಿ ಭಾರತ ಮೂರು ಕಂಪನಿಗಳು ಸೇರಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಷ್ಯಾ-ಉಕ್ರೇನ್‌ ಯುದ್ಧ ಸಂದರ್ಭದಲ್ಲಿ ಈ ಕಂಪನಿಗಳು, ಹಡಗುಗಳು ಮತ್ತು ವ್ಯಕ್ತಿಗಳು ಇರಾನ್‌ನ ಮಾನವ ರಹಿತ ವೈಮಾನಿಕ ವಾಹನ- ಡ್ರೋನ್‌ ಗಳನ್ನು ರಷ್ಯಾಗೆ ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದು ಅಮೆರಿಕದ ಆರೋಪಿಸಿದೆ.

Advertisement

ಇರಾನ್‌ನ ಸಾಗರೋತ್ತರ ವ್ಯಾಪಾರ ವಹಿವಾಟು ನೋಡಿಕೊಳ್ಳುತ್ತಿರುವ ಕಂಪನಿಗಳಲ್ಲಿ ಸಹರಾ ಥಂಡರ್‌ ಪ್ರಮುಖವಾಗಿದ್ದು, ಈ ಕಂಪನಿಗೆ ಭಾರತೀಯ ಮೂಲದ ಮೂರು ಕಂಪನಿಗಳು ಸಹಾಯ ನೀಡುತ್ತಿವೆ. ಹೀಗಾಗಿ ಭಾರತೀಯ ಮೂಲದ ಜೆನ್‌ ಶಿಪ್ಪಿಂಗ್‌, ಪೋರ್ಟ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ಮತ್ತು ಸೀ ಆರ್ಟ್‌ ಶಿಪ್‌ ಮ್ಯಾನೇಜ್‌ಮೆಂಟ್‌(OPC) ಪ್ರೈವೆಟ್‌ ಲಿಮಿಟೆಡ್‌ಗೆ ಅಮೆರಿಕ ನಿರ್ಬಂಧ ವಿಧಿಸಿದೆ.

Advertisement
Tags :
Advertisement