ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹೌತಿ ಬಂಡುಕೋರರ ಮೇಲೆ ಅಮೆರಿಕ, ಇಂಗ್ಲೆಂಡ್ ಸ್ಟ್ರೈಕ್

ಇರಾನ್ ಬೆಂಬಲಿತ ಹೌತಿ ಬಂಡುಕೋರರ ಮೇಲೆ ಅಮೆರಿಕ ಮತ್ತು ಬ್ರಿಟನ್​ ಜಂಟಿಯಾಗಿ ದಾಳಿ ಮಾಡಿ ಎಚ್ಚರಿಕೆ ನೀಡಿವೆ. ಕಳೆದ ವರ್ಷ ಡಿಸೆಂಬರ್​ ನಲ್ಲಿ ಹೌತಿಗಳು ಕೆಂಪು ಸಮುದ್ರದ ಮೇಲೆ ಅಂತಾರಾಷ್ಟ್ರೀಯ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ನಂತರ ಅಮೆರಿಕ ಮತ್ತು ಲಂಡನ್ ಸ್ಟ್ರೈಕ್ ಮಾಡಿವೆ.
10:03 AM Jan 12, 2024 IST | Ashitha S

ವಾಷಿಂಗ್ಟನ್: ಇರಾನ್ ಬೆಂಬಲಿತ ಹೌತಿ ಬಂಡುಕೋರರ ಮೇಲೆ ಅಮೆರಿಕ ಮತ್ತು ಬ್ರಿಟನ್​ ಜಂಟಿಯಾಗಿ ದಾಳಿ ಮಾಡಿ ಎಚ್ಚರಿಕೆ ನೀಡಿವೆ. ಕಳೆದ ವರ್ಷ ಡಿಸೆಂಬರ್​ ನಲ್ಲಿ ಹೌತಿಗಳು ಕೆಂಪು ಸಮುದ್ರದ ಮೇಲೆ ಅಂತಾರಾಷ್ಟ್ರೀಯ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ನಂತರ ಅಮೆರಿಕ ಮತ್ತು ಲಂಡನ್ ಸ್ಟ್ರೈಕ್ ಮಾಡಿವೆ.

Advertisement

ದಾಳಿ ಮಾಡಿರುವ ಬಗ್ಗೆ ಯೆಮೆನ್​​ ಸ್ಪಷ್ಟಪಡಿಸಿದೆ. ಇನ್ನು, ಅಮೆರಿಕ ಅಧ್ಯಕ್ಷ ಜೋ ಬೈಡನ್ ತಡವಾಗಿ ಹೇಳಿಕೆ ನೀಡಿದ್ದು, "ಅಗತ್ಯವಿದ್ದರೆ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯಲ್ಲ. ಯುನೈಟೆಡ್ ಸ್ಟೇಟ್ಸ್ ಹಾಗೂ ಪಾಲುದಾರರು ನಮ್ಮ ಸಿಬ್ಬಂದಿ ಮೇಲಿನ ದಾಳಿಯನ್ನು ಸಹಿಸೋದಿಲ್ಲ. ಕಡಲಿನ ನ್ಯಾವಿಗೇಷನ್ ಆಫ್ ಫ್ರೀಡಂ ಹಾಳು ಮಾಡಲು ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಬ್ರಿಟನ್‌ನ ರಕ್ಷಣಾ ಸಚಿವಾಲಯ ಕೂಡ ಹೇಳಿಕೆ ನೀಡಿದ್ದು, ಹೌತಿಗಳು ವ್ಯಾಪಾರಿ ಶಿಪ್ಪಿಂಗ್‌ಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅಟ್ಯಾಕ್ ಮಾಡಲಾಗಿದೆ ಎಂದಿದೆ.

ಹೌತಿಗಳು ಇಲ್ಲಿಯವರೆಗೆ 27 ಹಡಗುಗಳ ಮೇಲೆ ದಾಳಿ ಮಾಡಿದ್ದಾರೆ. ಯುರೋಪ್ ಮತ್ತು ಏಷ್ಯಾ ನಡುವಿನ ಪ್ರಮುಖ ಮಾರ್ಗದಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ವ್ಯವಹಾರಗಳಿಗೆ ಅಡ್ಡಿಪಡಿಸ್ತಿದ್ದಾರೆ. ಹೌತಿಗಳು ಇಲ್ಲಿಯವರೆಗೆ 27 ಹಡಗುಗಳ ಮೇಲೆ ದಾಳಿ ಮಾಡಿದ್ದಾರೆ. ಯುರೋಪ್ ಮತ್ತು ಏಷ್ಯಾ ನಡುವಿನ ಪ್ರಮುಖ ಮಾರ್ಗದಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ವ್ಯವಹಾರಗಳಿಗೆ ಅಡ್ಡಿಪಡಿಸ್ತಿದ್ದಾರೆ.

Advertisement

Advertisement
Tags :
indiaLatestNewsNewsKannadaಅಮೆರಿಕಇಂಗ್ಲೆಂಡ್ ಸ್ಟ್ರೈಕ್ನವದೆಹಲಿಹೌತಿ
Advertisement
Next Article