For the best experience, open
https://m.newskannada.com
on your mobile browser.
Advertisement

ಮೋಹಕ ತಾರೆ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ

ಮೋಹಕ ತಾರೆ ರಮ್ಯಾ 8 ವರ್ಷಗಳ ನಂತರ ಮತ್ತೆ ಬಣ್ಣದ ಲೋಕಕ್ಕೆ ಬರುತ್ತಾರೆ ಎಂದು ಹೇಳಲಾಗುತ್ತಿತ್ತು. ಉತ್ತರಕಾಂಡ ಸಿನಿಮಾದಲ್ಲಿ ಡಾಲಿ ಧನಂಜಯ್​ಗೆ ಜೋಡಿಯಾಗಿ ಮೋಹಕ ತಾರೆ ಕಾಣಿಸಿಕೊಂಡು ಸ್ಯಾಂಡಲ್​ವುಡ್​ನಲ್ಲಿ ಹಂಗಮಾ ಸೃಷ್ಟಿ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ನಟಿಸುವುದಿಲ್ಲ ಎನ್ನುವ ಸುದ್ದಿ ಹೊರ ಬಿದ್ದಿದ್ದು ಈ ಬಗ್ಗೆ ಸ್ವತಃ ರಮ್ಯಾ ಮಾಹಿತಿ ಹಂಚಿಕೊಂಡಿದ್ದಾರೆ.
05:40 PM Mar 26, 2024 IST | Ashitha S
ಮೋಹಕ ತಾರೆ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ

ಬೆಂಗಳೂರು: ಮೋಹಕ ತಾರೆ ರಮ್ಯಾ 8 ವರ್ಷಗಳ ನಂತರ ಮತ್ತೆ ಬಣ್ಣದ ಲೋಕಕ್ಕೆ ಬರುತ್ತಾರೆ ಎಂದು ಹೇಳಲಾಗುತ್ತಿತ್ತು. ʼಉತ್ತರಕಾಂಡʼ ಸಿನಿಮಾದಲ್ಲಿ ಡಾಲಿ ಧನಂಜಯ್​ಗೆ ಜೋಡಿಯಾಗಿ ಮೋಹಕ ತಾರೆ ಕಾಣಿಸಿಕೊಂಡು ಸ್ಯಾಂಡಲ್​ವುಡ್​ನಲ್ಲಿ ಹಂಗಮಾ ಸೃಷ್ಟಿ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ನಟಿಸುವುದಿಲ್ಲ ಎನ್ನುವ ಸುದ್ದಿ ಹೊರ ಬಿದ್ದಿದ್ದು ಈ ಬಗ್ಗೆ ಸ್ವತಃ ರಮ್ಯಾ ಮಾಹಿತಿ ಹಂಚಿಕೊಂಡಿದ್ದಾರೆ.

Advertisement

ರಮ್ಯಾ ಅವರು ಈ ಬಗ್ಗೆ ತಮ್ಮ ಅಧಿಕೃತ ಇನ್​ಸ್ಟಾದ ಸ್ಟೇಟಸ್​ನಲ್ಲಿ "ಉತ್ತರಕಾಂಡ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ" ಎಂದು ಹೇಳಿಕೊಂಡಿದ್ದಾರೆ. "ಡೇಟ್ಸ್​ ಇಲ್ಲದ ಕಾರಣದಿಂದ ನಾನು ಉತ್ತರಾಖಂಡ ಸಿನಿಮಾದ ಕೆಲಸದಿಂದ ಹೊರ ಬಂದಿದ್ದೇನೆ. ಸಿನಿಮಾ ತಂಡಕ್ಕೆ ಶುಭ ಹಾರೈಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಉತ್ತರಕಾಂಡ ಸಿನಿಮಾದಲ್ಲಿ ಡಾಲಿ ನಟಿಸುತ್ತಿದ್ದು ಇದಕ್ಕೆ ಕೆಆರ್​ಜಿ ನಿರ್ಮಾಣ ಸಂಸ್ಥೆ ಬಂಡವಾಳ ಹೂಡುತ್ತಿದೆ. ಅಲ್ಲದೇ ಪ್ರಮುಖ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್​ ಕೂಡ ಅಭಿನಯ ಮಾಡುತ್ತಿದ್ದಾರೆ. ಆದರೆ ರಮ್ಯಾ ಅವರು ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಇದಕ್ಕಾಗಿ ರಮ್ಯಾ ಕೂಡ ಸಾಕಷ್ಟು ತಯಾರಿ ನಡೆಸಿದ್ದರು. ಬಹಳ ವರ್ಷಗಳ ನಂತರ ಸ್ಯಾಂಡಲ್​ವುಡ್​ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಈಗ ರಮ್ಯಾ ಅವರೇ ನಾನು ನಟಿಸುತ್ತಿಲ್ಲ ಎಂದು ಹೇಳಿದ್ದಾರೆ.  ಇದು ಮೋಹಕತಾರೆಯ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ.

Advertisement

Advertisement
Tags :
Advertisement