ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಉಜ್ಬೇಕಿಸ್ತಾನ್ ಮಹಿಳೆಯ ಕೊಲೆ ಪ್ರಕರಣ: ಇಬ್ಬರ ಬಂಧನ

ಪ್ರವಾಸಿ ವೀಸಾದ ಮೇಲೆ ನಾಲ್ಕು ದಿನಗಳ ಕಾಲ ಬೆಂಗಳೂರಿಗೆ ಬಂದಿದ್ದ 27 ವರ್ಷದ ಉಜ್ಬೇಕಿಸ್ತಾನದ ಜರೀನಾ ಜೆಪರೋವಾ ಮಹಿಳೆಯ ಕೊಲೆ ಪ್ರಕರಣವನ್ನು ಭೇದಿಸಿರುವ ಶೇಷಾದ್ರಿಪುರಂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
02:43 PM Mar 16, 2024 IST | Ashika S

ಬೆಂಗಳೂರು: ಪ್ರವಾಸಿ ವೀಸಾದ ಮೇಲೆ ನಾಲ್ಕು ದಿನಗಳ ಕಾಲ ಬೆಂಗಳೂರಿಗೆ ಬಂದಿದ್ದ 27 ವರ್ಷದ ಉಜ್ಬೇಕಿಸ್ತಾನದ ಜರೀನಾ ಜೆಪರೋವಾ ಮಹಿಳೆಯ ಕೊಲೆ ಪ್ರಕರಣವನ್ನು ಭೇದಿಸಿರುವ ಶೇಷಾದ್ರಿಪುರಂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಆರೋಪಿಗಳನ್ನು ಅಸ್ಸಾಂ ಮೂಲದ ಅಮೃತ್ (22) ಮತ್ತು ರಾಬರ್ಟ್ ಪಿ (26) ಎಂದು ಗುರುತಿಸಲಾಗಿದೆ. ಇಬ್ಬರೂ ಸ್ಯಾಂಕಿ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿಗಳಾಗಿದ್ದರು

ಜರೀನಾ ಜೆಪರೋವಾ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಹೋಟೆಲ್‌ನ ಎರಡನೇ ಮಹಡಿಯ ಕೊಠಡಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

Advertisement

ಚೆಕ್-ಔಟ್ ಸಮಯದ ನಂತರವೂ ಮಹಿಳೆ ಹೊರಗೆ ಬರದ ಕಾರಣ, ಹೋಟೆಲ್ ಸಿಬ್ಬಂದಿಗಳು ಫೋನ್ ಮಾಡಿದರೆ, ದೂರವಾಣಿ ಕರೆಗೆ ಪ್ರತಿಕ್ರಿಯಿಸದ ಕಾರಣ ಕೊಠಡಿ ತೆರಳಿದ್ದಾರೆ. ಮಹಿಳೆ ಬಾಗಿಲು ತೆರೆಯದ ಕಾರಣ ಮಾಸ್ಟರ್ ಕೀ ಬಳಸಿ ಬಾಗಿಲು ತೆರೆದಿದ್ದಾರೆ. ಈ ವೇಳೆ ಜರೀನಾ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಜರೀನಾ ಕೋಣೆಗೆ ಸ್ವಚ್ಛತೆಗೆ ಆರೋಪಿಗಳು ತೆರಳಿದ್ದರು. ಆ ವೇಳೆ ಊಟದ ಬಿಲ್ ಪಾವತಿಸುವಾಗ ಆಕೆಯ ಪರ್ಸ ನಲ್ಲಿ ಹಣ ತುಂಬಿರುವುದು ಆರೋಪಿಗಳ ಕಣ್ಣಿಗೆ ಬಂದ್ದಿದೆ. ಆಗ ಜರೀನಾ ಬಳಿ ತುಂಬಾ ಹಣವಿದೆ ಎಂದು ದುರಾಸೆಯಿಂದ ಅಮೃತ್ ಹಾಗೂ ರಾಬರ್ಟ್ ಹತ್ಯೆಗೆ ನಿರ್ಧರಿಸಿದ್ದರು.

Advertisement
Tags :
bengaluruLatetsNewsMURDERNewsKarnataka
Advertisement
Next Article