For the best experience, open
https://m.newskannada.com
on your mobile browser.
Advertisement

ಸಿರಪ್ ಸೇವಿಸಿ 68 ಮಕ್ಕಳ ಸಾವು ಪ್ರಕರಣ: 23 ಮಂದಿಗೆ ಜೈಲು ಶಿಕ್ಷೆ

ಭಾರತದ ಮರಿಯನ್ ಬಯೋಟೆಕ್ ತಯಾರಿಸಿದ ಕಲುಷಿತ ಕೆಮ್ಮಿನ ಸಿರಪ್ನಿಂದ 68 ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಉಜ್ಬೇಕಿಸ್ತಾನದ ನ್ಯಾಯಾಲಯವು ಆರು ತಿಂಗಳ ಸುದೀರ್ಘ ವಿಚಾರಣೆಯ ನಂತರ ಸೋಮವಾರ 23 ಮಂದಿಗೆ ಜೈಲು ಶಿಕ್ಷೆ ವಿಧಿಸಿದೆ.
10:51 AM Feb 27, 2024 IST | Ashitha S
ಸಿರಪ್ ಸೇವಿಸಿ 68 ಮಕ್ಕಳ ಸಾವು ಪ್ರಕರಣ  23 ಮಂದಿಗೆ ಜೈಲು ಶಿಕ್ಷೆ

ತಾಷ್ಕೆಂಟ್: ಭಾರತದ ಮರಿಯನ್ ಬಯೋಟೆಕ್ ತಯಾರಿಸಿದ ಕಲುಷಿತ ಕೆಮ್ಮಿನ ಸಿರಪ್ನಿಂದ 68 ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಉಜ್ಬೇಕಿಸ್ತಾನದ ನ್ಯಾಯಾಲಯವು ಆರು ತಿಂಗಳ ಸುದೀರ್ಘ ವಿಚಾರಣೆಯ ನಂತರ ಸೋಮವಾರ 23 ಮಂದಿಗೆ ಜೈಲು ಶಿಕ್ಷೆ ವಿಧಿಸಿದೆ.

Advertisement

ಮಧ್ಯ ಏಷ್ಯಾದ ರಾಷ್ಟ್ರವು ಈ ಹಿಂದೆ ಔಷಧಿಗಳಿಗೆ ಸಂಬಂಧಿಸಿದ 65 ಸಾವುಗಳನ್ನ ವರದಿ ಮಾಡಿತ್ತು.

ಇನ್ನು ಕಳೆದ ತಿಂಗಳು ತಾಷ್ಕೆಂಟ್ ನಗರದ ನ್ಯಾಯಾಲಯದ ಪ್ರಾಸಿಕ್ಯೂಟರ್ಗಳು ಸಾವಿನ ಸಂಖ್ಯೆಯನ್ನ ನವೀಕರಿಸಿದರು ಮತ್ತು ವಿಚಾರಣೆಯ ಸಮಯದಲ್ಲಿ ಇನ್ನೂ ಇಬ್ಬರ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ಹೇಳಿದರು.

Advertisement

ಒಬ್ಬ ಭಾರತೀಯ ಪ್ರಜೆ ಸೇರಿದಂತೆ ಪ್ರತಿವಾದಿಗಳು ಎರಡರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ತೆರಿಗೆ ವಂಚನೆ, ಕಳಪೆ ಗುಣಮಟ್ಟದ ಅಥವಾ ನಕಲಿ ಔಷಧಿಗಳ ಮಾರಾಟ, ಕಚೇರಿ ದುರುಪಯೋಗ, ನಿರ್ಲಕ್ಷ್ಯ, ಫೋರ್ಜರಿ ಮತ್ತು ಲಂಚದ ಆರೋಪಗಳಲ್ಲಿ ಅವರು ತಪ್ಪಿತಸ್ಥರು ಎಂದು ಕಂಡುಬಂದಿದೆ.

Advertisement
Tags :
Advertisement