For the best experience, open
https://m.newskannada.com
on your mobile browser.
Advertisement

ಪ್ರೇಮಿಗಳ ವಾರಕ್ಕೆ ಪಿವಿಆರ್​-ಐನಾಕ್ಸ್ ಕಡೆಯಿಂದ ಭರ್ಜರಿ ಗಿಫ್ಟ್‌

ಪ್ರೇಮಿಗಳ ದಿನವನ್ನು ಫೆಬ್ರವರಿ 14ರಂದು ಆಚರಿಸಲಾಗುತ್ತಿದೆ. ಅದಕ್ಕೂ ಮೊದಲು ಒಂದು ವಾರಗಳಿಂದಲೇ ಸಂಭ್ರಮಾಚರಣೆ ಆರಂಭ ಆಗಿರುತ್ತದೆ. ಈ ಸಂದರ್ಭದಲ್ಲಿ ಅನೇಕ ಲವ್​ಸ್ಟೋರಿ ಸಿನಿಮಾಗಳು ರಿಲೀಸ್ ಆಗುತ್ತವೆ. ಈಗ ಪಿವಿಆರ್​ ಐನಾಕ್ಸ್ ಕಡೆಯಿಂದ ಪ್ರೇಮಿಗಳ ದಿನಾಚರಣೆಗೆ ಸ್ಪೆಷಲ್ ಉಡುಗೊರೆ ಸಿಗುತ್ತಿದೆ. ಲವ್​ಸ್ಟೋರಿಗಳಿಗೆ ಫೇಮಸ್ ಆದ ಚಿತ್ರಗಳನ್ನು ಮತ್ತೆ ರಿಲೀಸ್ ಮಾಡಲು ಈ ಮಲ್ಟಿಪ್ಲೆಕ್ಸ್ ಚೈನ್ ಮುಂದಾಗಿದೆ. ಇಂದಿನಿಂದ (ಫೆ.9) ಆರಂಭಿಸಿ, ಫೆಬ್ರವರಿ 15ರವರೆಗೆ ಈ ಆಫರ್ ಇರಲಿದೆ.
09:21 AM Feb 09, 2024 IST | Ashitha S
ಪ್ರೇಮಿಗಳ ವಾರಕ್ಕೆ ಪಿವಿಆರ್​ ಐನಾಕ್ಸ್ ಕಡೆಯಿಂದ ಭರ್ಜರಿ ಗಿಫ್ಟ್‌

ಬೆಂಗಳೂರು: ಪ್ರೇಮಿಗಳ ದಿನವನ್ನು ಫೆಬ್ರವರಿ 14ರಂದು ಆಚರಿಸಲಾಗುತ್ತಿದೆ. ಅದಕ್ಕೂ ಮೊದಲು ಒಂದು ವಾರಗಳಿಂದಲೇ ಸಂಭ್ರಮಾಚರಣೆ ಆರಂಭ ಆಗಿರುತ್ತದೆ. ಈ ಸಂದರ್ಭದಲ್ಲಿ ಅನೇಕ ಲವ್​ಸ್ಟೋರಿ ಸಿನಿಮಾಗಳು ರಿಲೀಸ್ ಆಗುತ್ತವೆ. ಈಗ ಪಿವಿಆರ್​ ಐನಾಕ್ಸ್ ಕಡೆಯಿಂದ ಪ್ರೇಮಿಗಳ ದಿನಾಚರಣೆಗೆ ಸ್ಪೆಷಲ್ ಉಡುಗೊರೆ ಸಿಗುತ್ತಿದೆ. ಲವ್​ಸ್ಟೋರಿಗಳಿಗೆ ಫೇಮಸ್ ಆದ ಚಿತ್ರಗಳನ್ನು ಮತ್ತೆ ರಿಲೀಸ್ ಮಾಡಲು ಈ ಮಲ್ಟಿಪ್ಲೆಕ್ಸ್ ಚೈನ್ ಮುಂದಾಗಿದೆ. ಇಂದಿನಿಂದ (ಫೆ.9) ಆರಂಭಿಸಿ, ಫೆಬ್ರವರಿ 15ರವರೆಗೆ ಈ ಆಫರ್ ಇರಲಿದೆ.

Advertisement

ಪಿವಿಆರ್ ಐನಾಕ್ಸ್ ವ್ಯಾಲೆಂಟೈನ್ಸ್​ಡೇ ಆಚರಿಸಲು ಮುಂದಾಗಿದೆ. ಐಕಾನಿಕ್ ಸಿನಿಮಾಗಳು ಎನಿಸಿಕೊಂಡ ಹಿಂದಿಯ ‘ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆ‘, ‘ಯೇ ಜವಾನಿ ಹೇ ದಿವಾನಿ’, ‘ಜಬ್​ ವಿ ಮೆಟ್’, ‘ತು ಜೂಟಿ ಮೇ ಮಕ್ಕರ್’ ಹಾಲಿವುಡ್​ನ ‘ಟೈಟಾನಿಕ್’ ಸಿನಿಮಾಗಳು ರೀ ರಿಲೀಸ್ ಆಗುತ್ತಿವೆ. ಈ ವಿಚಾರ ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಬುಕ್ ಮೈ ಶೋನಲ್ಲಿ ಬುಕಿಂಗ್ ಓಪನ್ ಆಗಿದೆ.

ಬಾಲಿವುಡ್, ಹಾಲಿವುಡ್ ಹಾಗೂ ಸ್ಥಳೀಯ ಭಾಷೆಯ ಸಿನಿಮಾಗಳು ಈ ಸಾಲಿನಲ್ಲಿ ಇವೆ. ಬೆಂಗಳೂರು, ಹೈದರಾಬಾದ್, ಮುಂಬೈ ಸೇರಿ ಭಾರತದ ಪ್ರಮುಖ 70ಕ್ಕೂ ಹೆಚ್ಚು ನಗರಗಳಲ್ಲಿ ನೀವು ಈ ಚಿತ್ರಗಳನ್ನು ನೋಡಬಹುದು. ಒಂದು ವಾರಗಳ ಕಾಲ ಈ ಆಫರ್ ಇರಲಿದೆ.

Advertisement

ಕನ್ನಡದ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ ಹಾಗೂ ಬಿ’ ಸಿನಿಮಾಗಳು ಥಿಯೇಟರ್​ನಲ್ಲಿ ರೀ ರೀಲೀಸ್ ಆಗುತ್ತಿವೆ. ತೆಲುಗಿನಲ್ಲಿ ರಿಲೀಸ್ ಆದ ಐಕಾನಿಕ್ ಸಿನಿಮಾ ‘ಸೀತಾ ರಾಮಂ’ ಥಿಯೇಟರ್​ನಲ್ಲಿ ಮರು ಬಿಡುಗಡೆ ಆಗುತ್ತಿದೆ.ಈ ಚಿತ್ರಗಳಿಗೆ ಕೂಡ ಟಿಕೆಟ್ ಮೇಲೆ ಆಫರ್ ನೀಡಲಾಗಿದೆ. ಈ ಸಿನಿಮಾಗಳನ್ನು ನೀವು ಕೇವಲ 112 ರೂಪಾಯಿಗಳಿಗೆ ನೋಡಬಹುದು.

Advertisement
Tags :
Advertisement