For the best experience, open
https://m.newskannada.com
on your mobile browser.
Advertisement

ಸಿನಿಮಾ ಪ್ರೇಮಿಗಳ ದಿನ: ಪಿವಿಆರ್-ಐನಾಕ್ಸ್​ನಲ್ಲಿ ಕೇವಲ 99 ರೂಪಾಯಿಗೆ ಸಿನಿಮಾ

ಸಿನಿಮಾ ಪ್ರೇಮಿಗಳ ದಿನದ ಪ್ರಯುಕ್ತ ಏಪ್ರಿಲ್ 19ರಂದು ಪಿವಿಆರ್-ಐನಾಕ್ಸ್  ಸೇರಿ ಅನೇಕ ಮಲ್ಟಿಪ್ಲೆಕ್ಸ್​ ಚೈನ್​ಗಳು ಕೇವಲ 99 ರೂಪಾಯಿಗೆ ಸಿನಿಮಾ ನೋಡುವ ಅವಕಾಶ ಕಲ್ಪಿಸಿವೆ.
08:14 AM Apr 18, 2024 IST | Ashika S
ಸಿನಿಮಾ ಪ್ರೇಮಿಗಳ ದಿನ  ಪಿವಿಆರ್ ಐನಾಕ್ಸ್​ನಲ್ಲಿ ಕೇವಲ 99 ರೂಪಾಯಿಗೆ ಸಿನಿಮಾ

ಬೆಂಗಳೂರು: ಸಿನಿಮಾ ಪ್ರೇಮಿಗಳ ದಿನದ ಪ್ರಯುಕ್ತ ಏಪ್ರಿಲ್ 19ರಂದು ಪಿವಿಆರ್-ಐನಾಕ್ಸ್  ಸೇರಿ ಅನೇಕ ಮಲ್ಟಿಪ್ಲೆಕ್ಸ್​ ಚೈನ್​ಗಳು ಕೇವಲ 99 ರೂಪಾಯಿಗೆ ಸಿನಿಮಾ ನೋಡುವ ಅವಕಾಶ ಕಲ್ಪಿಸಿವೆ.

Advertisement

ಏಪ್ರಿಲ್ 19ರಂದು ಹಿಂದಿಯಲ್ಲಿ ‘ಲವ್ ಸೆಕ್ಸ್ ಔರ್ ದೋಖಾ’ ಹಾಗೂ ‘ದೋ ಔರ್ ದೋ ಪ್ಯಾರ್’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾಗಳಿಗೆ ಬೆನಿಫಿಟ್ ಆಗಲಿದೆ.

ಈ ಮೊದಲು 2022ರ ಸೆಪ್ಟೆಂಬರ್​ನಲ್ಲಿ ‘ನ್ಯಾಷನಲ್ ಸಿನಿಮಾ ಡೇ’ ಪ್ರಯುಕ್ತ 75 ರೂಪಾಯಿ ಟಿಕೆಟ್ ಆಫರ್ ನೀಡಲಾಯಿತು. ಅದಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಆ ಬಳಿಕ ಈ ಪದ್ಧತಿ ಮುಂದುವರಿದಿದೆ.

Advertisement

ಸಧ್ಯಕ್ಕೆ  ಮಲಯಾಳಂನಲ್ಲಿ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ‘ಲವ್ ಸೆಕ್ಸ್ ಔರ್ ದೋಖಾ 2’ ರಿಲೀಸ್ ಆಗುತ್ತಿದೆ. ವಿದ್ಯಾ ಬಾಲನ್ ಹಾಗೂ ಪ್ರತಿಕ್ ಗಾಂಧಿ ನಟನೆಯ ‘ದೋ ಔರ್ ದೋ ಪ್ಯಾರ್’ ಕೂಡ ಬಿಡುಗಡೆ ಆಗಲಿದೆ.

ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ನೋಡೋದು ದುಬಾರಿ ಎಂಬುದು ಅನೇಕರ ಅಭಿಪ್ರಾಯ. ಹೀಗಾಗಿ, ಸಾಮಾನ್ಯರು ಎಲ್ಲಾ ಸಿನಿಮಾಗಳನ್ನು ಇಲ್ಲಿ ನೋಡೋಕೆ ಅಷ್ಟಾಗಿ ಆಸಕ್ತಿ ತೋರಿಸುವುದಿಲ್ಲ. ಈ ಕಾರಣದಿಂದಲೇ ಆಗಾಗ ಮಲ್ಟಿಪ್ಲೆಕ್ಸ್​ಗಳು ಆಫರ್ ನೀಡುತ್ತವೆ.

Advertisement
Tags :
Advertisement