For the best experience, open
https://m.newskannada.com
on your mobile browser.
Advertisement

ಭಾರತದಲ್ಲೇ ಅತೀ ದೊಡ್ಡ ಪಾರ್ಕ್​ ಕಟ್ಟಲು ಮುಂದಾದ ಅನಂತ್ ಅಂಬಾನಿ: ಯಾರಿಗಾಗಿ ಗೊತ್ತ ?

ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮಗ, ರಿಲಯನ್ಸ್‌ ಇಂಡಸ್ಟ್ರೀಸ್‌ ನಿರ್ದೇಶಕ ಅನಂತ್ ಅಂಬಾನಿ ಅತಿ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ರಿಲಯನ್ಸ್ ಫೌಂಡೇಷನ್ ವತಿಯಿಂದ 600 ಎಕರೆಯಲ್ಲಿ ಪ್ರಾಣಿಗಳ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರವನ್ನ ಆರಂಭಿಸುತ್ತಿದ್ದಾರೆ. ಇದು ಭಾರತದಲ್ಲೇ ಮೊಟ್ಟ ಮೊದಲ ಪ್ರಯತ್ನವಾಗಿದ್ದು, ಇದಕ್ಕೆ ‘ವಂತರ’ ಎಂದು ಹೆಸರಿಡಲಾಗಿದೆ. ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.
10:07 PM Feb 26, 2024 IST | Ashitha S
ಭಾರತದಲ್ಲೇ ಅತೀ ದೊಡ್ಡ ಪಾರ್ಕ್​ ಕಟ್ಟಲು ಮುಂದಾದ ಅನಂತ್ ಅಂಬಾನಿ  ಯಾರಿಗಾಗಿ ಗೊತ್ತ

ನವದೆಹಲಿ: ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮಗ, ರಿಲಯನ್ಸ್‌ ಇಂಡಸ್ಟ್ರೀಸ್‌ ನಿರ್ದೇಶಕ ಅನಂತ್ ಅಂಬಾನಿ ಅತಿ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ರಿಲಯನ್ಸ್ ಫೌಂಡೇಷನ್ ವತಿಯಿಂದ 600 ಎಕರೆಯಲ್ಲಿ ಪ್ರಾಣಿಗಳ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರವನ್ನ ಆರಂಭಿಸುತ್ತಿದ್ದಾರೆ. ಇದು ಭಾರತದಲ್ಲೇ ಮೊಟ್ಟ ಮೊದಲ ಪ್ರಯತ್ನವಾಗಿದ್ದು, ಇದಕ್ಕೆ ‘ವಂತರ’ ಎಂದು ಹೆಸರಿಡಲಾಗಿದೆ. ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.

Advertisement

ಇದೇ ಜುಲೈ 12ರಂದು ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರ ಮದುವೆ ನಿಶ್ಚಯವಾಗಿದೆ. ಈ ಮಧ್ಯೆ ತಮ್ಮ ಕನಸಿನ ಯೋಜನೆ ವಂತರದ ಕುರಿತು ಅನಂತ್ ಅಂಬಾನಿ ಅವರು ಖುದ್ದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ವಂತರ ಅನ್ನೋದೇ ಒಂದು ವಿಶಿಷ್ಠವಾದ ಪರಿಕಲ್ಪನೆ. ಇದನ್ನ Star of the Forest ಎಂದು ಅನಂತ್ ಅಂಬಾನಿ ಬಣ್ಣಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ಗಾಯಗೊಂಡ ಪ್ರಾಣಿಗಳನ್ನ ಕರೆತಂದು ಸೂಕ್ತ ಚಿಕಿತ್ಸೆ ನೀಡುವುದು. ಅದನ್ನ ಸಂರಕ್ಷಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ. ಅಂದ್ರೆ ಪ್ರಾಣಿಗಳಿಗಾಗಿಯೇ ವಿಶೇಷ ಪುನರ್ವಸತಿ ಕೇಂದ್ರ ಇದಾಗಲಿದೆ.

Advertisement

ವಂತರ ಅನಂತ್ ಅಂಬಾನಿ ಅವರು ಚಿಕ್ಕ ವಯಸ್ಸಿನಿಂದಲೂ ಕಂಡಿರೋ ದೊಡ್ಡ ಕನಸಾಗಿದ್ದು, ಭಾರತ ಸೇರಿದಂತೆ ಜಗತ್ತಿನಲ್ಲೇ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಪೋಷಿಸುವ ಉದ್ದೇಶ ಹೊಂದಲಾಗಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ಇದನ್ನ ನಿರ್ಮಾಣ ಮಾಡಲಾಗುತ್ತಿದ್ದು, ರಿಲಯನ್ಸ್ ಇಂಡಸ್ಟ್ರೀಸ್‌ ಸುಮಾರು 3 ಸಾವಿರ ಎಕರೆವರೆಗೂ ವಿಸ್ತರಿಸುವ ಗುರಿ ಹೊಂದಲಾಗಿದೆ.

ಜಾಮ್‌ನಗರದಲ್ಲಿ ನಿರ್ಮಾಣವಾಗುತ್ತಿರುವ ವಂತರ ಕಾಡಿನಲ್ಲಿ 200 ಆನೆಗಳು, ಸಾವಿರಾರು ಪ್ರಾಣಿಗಳಿಗೆ ಆಶ್ರಯ ನೀಡಲಾಗುತ್ತಿದೆ. ಹುಲಿ, ಚಿರತೆ, ಸಿಂಹ, ಮೊಸಳೆ, ಹಾವು ಅಷ್ಟೇ ಅಲ್ಲ ಅಪಾಯದಲ್ಲಿರುವ ಸರೀಸೃಪ ಮತ್ತು ಪಕ್ಷಿಗಳನ್ನು ಸಂರಕ್ಷಿಸಲಾಗುತ್ತದೆ. ಭಾರತದ 150ಕ್ಕೂ ಸರ್ಕಾರದ ಅಭಯಾರಣ್ಯದೊಂದಿಗೆ ಸಂಪರ್ಕವನ್ನು ಹೊಂದಿರುತ್ತದೆ.

ಪ್ರಾಣಿಗಳಿಗಾಗಿಯೇ ಇದರಲ್ಲಿ ವಿಶೇಷ ಪಶುವೈದ್ಯಕೀಯ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಆಸ್ಪತ್ರೆಯಲ್ಲಿ MRI & CT ಸ್ಕ್ಯಾನ್ ಮಷಿನ್ಸ್‌, ಎಂಡೋಸ್ಕೋಪಿಕ್ ರೊಬೊಟಿಕ್ ಶಸ್ತ್ರಚಿಕಿತ್ಸೆ, 6 ಶಸ್ತ್ರಚಿಕಿತ್ಸಾ ಕೇಂದ್ರಗಳ ಸೌಲಭ್ಯವೂ ಇರಲಿದೆ. ಈ ಝೂಲಾಜಿಕಲ್ ಪಾರ್ಕ್‌ ಅನ್ನು ಸಾರ್ವಜನಿಕರ ಮುಕ್ತ ಪ್ರವೇಶಕ್ಕೂ ಅವಕಾಶ ನೀಡಲಾಗುತ್ತಿದೆ ಎಂದಿದ್ದಾರೆ.

Advertisement
Tags :
Advertisement