For the best experience, open
https://m.newskannada.com
on your mobile browser.
Advertisement

ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿ ಇತಿಹಾಸ ಬರೆದ ವರುಣ್

ಭಾರತೀಯ ಮೂಲದ ಆಸ್ಟ್ರೇಲಿಯನ್‌ ಸೆನೆಟರ್‌ ಒಬ್ಬರು 'ಇತಿಹಾಸದಲ್ಲೇ ಮೊದಲ ಬಾರಿಗೆ ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ' ಸ್ವೀಕರಿಸಿ ಇತಿಹಾಸ ಸೃಷ್ಟಿಸಿದ್ದಾರೆ.
11:27 AM Feb 07, 2024 IST | Ashitha S
ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿ ಇತಿಹಾಸ ಬರೆದ ವರುಣ್

ಸಿಡ್ನಿ: ಭಾರತೀಯ ಮೂಲದ ಆಸ್ಟ್ರೇಲಿಯನ್‌ ಸೆನೆಟರ್‌ ಒಬ್ಬರು "ಇತಿಹಾಸದಲ್ಲೇ ಮೊದಲ ಬಾರಿಗೆ ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ" ಸ್ವೀಕರಿಸಿ ಇತಿಹಾಸ ಸೃಷ್ಟಿಸಿದ್ದಾರೆ.

Advertisement

ಭಾರತೀಯ ಮೂಲದ ಬ್ಯಾರಿಸ್ಟರ್‌ ವರುಣ್‌ ಘೋಷ್‌ ಅವರು ಮಂಗಳವಾರ ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಭಗವದ್ಗೀತೆಯ ಮೇಲೆ ಕೈಯಿಟ್ಟು ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. ಹೀಗೆ ಮಾಡಿದ ಮೊದಲ ಭಾರತ ಸಂಜಾತ ಸದಸ್ಯರಾಗಿದ್ದಾರೆ.

ಪಶ್ಚಿಮ ಆಸ್ಟ್ರೇಲಿಯಾದಿಂದ ಬಂದಿರುವ ವರುಣ್‌, ಫೆಡರಲ್ ಸಂಸತ್ತಿನ ಸೆನೆಟ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಾರೆ. ಲೆಜಿಸ್ಲೇಟಿವ್ ಅಸೆಂಬ್ಲಿ ಮತ್ತು ಲೆಜಿಸ್ಲೇಟಿವ್ ಕೌನ್ಸಿಲ್ ಎರಡರಿಂದಲೂ ಬೆಂಬಲವನ್ನು ಪಡೆದ ನಂತರ ಘೋಷ್ ಅವರನ್ನು ಸೆನೆಟರ್ ಆಗಿ ನೇಮಿಸಲಾಯಿತು.

Advertisement

ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ವರುಣ್‌ಗೆ ಶುಭ ಹಾರೈಸಿದ್ದಾರೆ. “ಪಶ್ಚಿಮ ಆಸ್ಟ್ರೇಲಿಯಾದ ನಮ್ಮ ಹೊಸ ಸೆನೆಟರ್ ವರುಣ್‌ ಘೋಷ್ ಅವರಿಗೆ ಸ್ವಾಗತ. ತಂಡದಲ್ಲಿ ನಿಮ್ಮನ್ನು ಹೊಂದಲು ಸಂತೋಷವಾಗಿದೆ” ಎಂದು ಅವರು Xನಲ್ಲಿ ಪೋಸ್ಟ್ ಮಾಡಿದ್ದಾರೆ.

ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅವರು ಘೋಷ್ ಅವರನ್ನು ಲೇಬರ್ ಸೆನೆಟ್ ತಂಡಕ್ಕೆ ಸ್ವಾಗತಿಸಿದರು. “ಪಶ್ಚಿಮ ಆಸ್ಟ್ರೇಲಿಯಾದ ನಮ್ಮ ಹೊಸ ಸೆನೆಟರ್ ವರುಣ್‌ ಘೋಷ್ ಅವರಿಗೆ ಸುಸ್ವಾಗತ. ಸೆನೆಟರ್‌ ಘೋಷ್ ಅವರು ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಆಸ್ಟ್ರೇಲಿಯಾದ ಸೆನೆಟರ್ ಆಗಿದ್ದಾರೆ. ನಾನು ಆಗಾಗ್ಗೆ ಹೇಳುತ್ತಿದ್ದೆ, ನೀವು ಯಾವುದಾದರೂ ವಿಷಯದಲ್ಲಿ ಮೊದಲಿಗರಾದಾಗ, ನೀವು ಕೊನೆಯವರೂ ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸೆನೆಟರ್‌ ಘೋಷ್ ಅವರ ಸಮುದಾಯಕ್ಕೆ ಮತ್ತು ಪಶ್ಚಿಮ ಆಸ್ಟ್ರೇಲಿಯನ್ನರಿಗೆ ಬಲವಾದ ಧ್ವನಿಯಾಗುತ್ತಾರೆ” ಎಂದು ಅವರು ಹೇಳಿದ್ದಾರೆ.

Advertisement
Tags :
Advertisement