For the best experience, open
https://m.newskannada.com
on your mobile browser.
Advertisement

ಬಿ.ವೈ ರಾಘವೇಂದ್ರ ಪರ ಮತಯಾಚನೆ ನಡೆಸಿದ ವೇದವ್ಯಾಸ್ ಕಾಮತ್

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರದಲ್ಲಿ ನಡೆದ ಬಿಜೆಪಿಯ ಬೃಹತ್ ರೋಡ್ ಶೋ ನಲ್ಲಿ ಮಂಗಳೂರು ನಗರ ದಕ್ಷಿಣದ ಶಾಸಕರಾದ ವೇದವ್ಯಾಸ್ ಕಾಮತ್ ರವರು ಭಾಗವಹಿಸಿದರು.
09:28 PM May 04, 2024 IST | Ashika S
ಬಿ ವೈ ರಾಘವೇಂದ್ರ ಪರ ಮತಯಾಚನೆ ನಡೆಸಿದ ವೇದವ್ಯಾಸ್ ಕಾಮತ್

ಬೈಂದೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರದಲ್ಲಿ ನಡೆದ ಬಿಜೆಪಿಯ ಬೃಹತ್ ರೋಡ್ ಶೋ ನಲ್ಲಿ ಮಂಗಳೂರು ನಗರ ದಕ್ಷಿಣದ ಶಾಸಕರಾದ ವೇದವ್ಯಾಸ್ ಕಾಮತ್ ರವರು ಭಾಗವಹಿಸಿದರು.

Advertisement

ಸಿದ್ದಾಪುರ ಹೈಸ್ಕೂಲಿನಿಂದ ಆರಂಭವಾದ ಬೃಹತ್ ರೋಡ್ ಶೋ ಹಾಗೂ ಸರ್ಕಲ್ ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ  ಬಿ.ವೈ ರಾಘವೇಂದ್ರ ರವರ ಪರ ಮತಯಾಚನೆ ನಡೆಸಿದ ಅವರು, ಇಲ್ಲಿ ನೆರೆದಿರುವ ಕಾರ್ಯಕರ್ತರ ಉತ್ಸಾಹ ನೋಡಿದರೆ ಈ ಬಾರಿಯೂ ಬಿಜೆಪಿ ಇಲ್ಲಿ ಸ್ಪಷ್ಟ ಮುನ್ನಡೆ ಸಾಧಿಸಿ ಪ್ರಚಂಡ ವಿಜಯಕ್ಕೆ ಮುನ್ನುಡಿ ಬರೆಯುವುದು ಶತಃಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕರುಗಳಾದ ಯಶ್ಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ಕಿರಣ್ ಕೂಡ್ಗಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕಿಶೋರ್ ಕುಮಾರ್, ದ ಕ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಅರುಣ್ ಕುಮಾರ್ ಪುತ್ತಿಲ ಸಹಿತ ಅನೇಕ ಪ್ರಮುಖರು ಉಪಸ್ಥಿತರಿದ್ದರು.

Advertisement

Advertisement
Tags :
Advertisement