For the best experience, open
https://m.newskannada.com
on your mobile browser.
Advertisement

'ವೀರ ಸಿಂಧೂರ ಲಕ್ಷ್ಮಣ' ಸಿನಿಮಾದಲ್ಲಿ ಮತ್ತೆ ಒಂದಾದ ತರುಣ್​ ಸುಧೀರ್​, ದರ್ಶನ್​

ನಟ ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರ ಹುಟ್ಟುಹಬ್ಬದ ಖುಷಿಯಲ್ಲಿ ಹೊಸ ಸಿನಿಮಾ ಅನೌನ್ಸ್​ ಆಗಿದೆ. ಖ್ಯಾತ ನಿರ್ದೇಶಕ ತರುಣ್​ ಸುಧೀರ್​  ಮತ್ತು ದರ್ಶನ್​ ಅವರ ಕಾಂಬಿನೇಷನ್​ನಲ್ಲಿ 'ವೀರ ಸಿಂಧೂರ ಲಕ್ಷ್ಮಣ' ಸಿನಿಮಾ ಮೂಡಿಬರಲಿದೆ.
11:23 AM Feb 16, 2024 IST | Ashika S
 ವೀರ ಸಿಂಧೂರ ಲಕ್ಷ್ಮಣ  ಸಿನಿಮಾದಲ್ಲಿ ಮತ್ತೆ ಒಂದಾದ ತರುಣ್​ ಸುಧೀರ್​  ದರ್ಶನ್​

ಬೆಂಗಳೂರು: ನಟ ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರ ಹುಟ್ಟುಹಬ್ಬದ ಖುಷಿಯಲ್ಲಿ ಹೊಸ ಸಿನಿಮಾ ಅನೌನ್ಸ್​ ಆಗಿದೆ. ಖ್ಯಾತ ನಿರ್ದೇಶಕ ತರುಣ್​ ಸುಧೀರ್​  ಮತ್ತು ದರ್ಶನ್​ ಅವರ ಕಾಂಬಿನೇಷನ್​ನಲ್ಲಿ 'ವೀರ ಸಿಂಧೂರ ಲಕ್ಷ್ಮಣ' ಸಿನಿಮಾ ಮೂಡಿಬರಲಿದೆ.

Advertisement

ಇದರಲ್ಲಿ ಐತಿಹಾಸಿಕ ಕಥಾಹಂದರ ಇರಲಿದೆ. ಈ ಮೊದಲು ಸಂಗೊಳ್ಳಿ ರಾಯಣ್ಣನಾಗಿ ಅಬ್ಬರಿಸಿದ್ದ ದರ್ಶನ್ ಅವರು ಈಗ ಸಿಂಧೂರ ಲಕ್ಷ್ಮಣನ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ.

ಈ ಸಿನಿಮಾವನ್ನು ಶೈಲಜಾ ನಾಗ್​ ಮತ್ತು ಬಿ. ಸುರೇಶ ಅವರು ನಿರ್ಮಾಣ ಮಾಡಲಿದ್ದಾರೆ. ದರ್ಶನ್​  ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ.

Advertisement

‘ರಾಬರ್ಟ್​’ ಮತ್ತು ‘ಕಾಟೇರ’ ಸಿನಿಮಾಗಳಲ್ಲಿ ತರುಣ್​ ಸುಧೀರ್​ ಮತ್ತು ದರ್ಶನ್​ ಅವರ ಕಾಂಬಿನೇಷನ್​ ಜನಮೆಚ್ಚುಗೆ ಗಳಿಸಿತು. ಈಗ ಅವರು ಮೂರನೇ ಬಾರಿಗೆ ಕೈ ಜೋಡಿಸುತ್ತಿರುವುದರಿಂದ ಹೈಪ್​ ಹೆಚ್ಚಾಗಲಿದೆ.

‘ಸದ್ಯಕ್ಕೆ ಸ್ಕ್ರಿಪ್ಟ್​ ಕೆಲಸಗಳು ನಡೆಯುತ್ತಿವೆ. ದೊಡ್ಡ ಬಜೆಟ್​ನಲ್ಲಿ ಈ ಸಿನಿಮಾ ಮೂಡಿಬರಲಿದೆ’ ಎಂದು ನಿರ್ಮಾಪಕಿ ಶೈಲಜಾ ನಾಗ್​ ಅವರು ಹೇಳಿದ್ದಾರೆ.

Advertisement
Tags :
Advertisement