For the best experience, open
https://m.newskannada.com
on your mobile browser.
Advertisement

ಕಿಡ್ನಾಪ್​ ಕೇಸ್ ನಲ್ಲಿ ಭವಾನಿ ರೇವಣ್ಣ ಹೆಸರು ಉಲ್ಲೇಖಿಸಿದ ಸಂತ್ರಸ್ತೆಯರು

ಅಶ್ಲೀಲ ವಿಡಿಯೋ ಹಾಗೂ ಕಿಡ್ನಾಪ್​ ಕೇಸ್​ಗೆ ಸಂಬಂಧಿಸಿದಂತೆ ಸಂತ್ರಸ್ತೆಯರು ಎಸ್​​ಐಟಿ ಬಳಿ  ಭವಾನಿ ರೇವಣ್ಣರ ಹೆಸರನ್ನು ಉಲ್ಲೇಖ ಮಾಡಿದ್ದಾರೆ ಎನ್ನುವ ಅಂಶ ಬಯಲಿಗೆ ಬಂದಿದೆ.
03:57 PM May 06, 2024 IST | Ashika S
ಕಿಡ್ನಾಪ್​ ಕೇಸ್ ನಲ್ಲಿ ಭವಾನಿ ರೇವಣ್ಣ ಹೆಸರು ಉಲ್ಲೇಖಿಸಿದ ಸಂತ್ರಸ್ತೆಯರು

ಬೆಂಗಳೂರು: ಅಶ್ಲೀಲ ವಿಡಿಯೋ ಹಾಗೂ ಕಿಡ್ನಾಪ್​ ಕೇಸ್​ಗೆ ಸಂಬಂಧಿಸಿದಂತೆ ಸಂತ್ರಸ್ತೆಯರು ಎಸ್​​ಐಟಿ ಬಳಿ  ಭವಾನಿ ರೇವಣ್ಣರ ಹೆಸರನ್ನು ಉಲ್ಲೇಖ ಮಾಡಿದ್ದಾರೆ ಎನ್ನುವ ಅಂಶ ಬಯಲಿಗೆ ಬಂದಿದೆ.

Advertisement

ಈಗ ಹೆಚ್​.ಡಿ ದೇವೇಗೌಡರ ಹಿರಿಯ ಸೊಸೆ ಭವಾನಿ ರೇವಣ್ಣಗೂ ಸಂಕಷ್ಟ ಕಾದಿದೆಯಾ ಎನ್ನುವ ಪ್ರಶ್ನೆ ಮೂಡಿದೆ.

ಸಂತ್ರಸ್ತೆಯರು 2 ಕೇಸ್​ನಲ್ಲಿ ಭವಾನಿ ಹೆಸರನ್ನು ಉಲ್ಲೇಖಿಸಿದ್ದಾರೆ. ಎರಡು ಕೇಸ್​ಗೆ ಸಂಬಂಧಿಸಿದಂತೆ ಭವಾನಿಯವರು ಕರೆದರು ಎಂದು ಹೇಳಿ ಕಿಡ್ನಾಪ್ ಆರೋಪವಿದೆ.

Advertisement

ಹೀಗಾಗಿ ಕಿಡ್ನಾಪ್ ಕೇಸ್​ನಲ್ಲಿ ಭವಾನಿಗೆ ಕಾನೂನು ಸಂಕಷ್ಟ ಸಾಧ್ಯತೆ ಇರಬಹುದು. ಈ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ತೀವ್ರ ತನಿಖೆ ನಡೆಸ್ತಿದ್ದಾರೆ. ಈಗಾಗಲೇ ಕೇಸ್​ ಸಂಬಂಧ ಭವಾನಿ ಅವರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಒಂದು ಲೈಂಗಿಕ ಕಿರುಕುಳ ಆರೋಪ ಮತ್ತೊಂದು ಕಿಡ್ನಾಪ್ ಕೇಸ್​ಗೆ ಸಂಬಂಧಿಸಿದಂತೆ ಶಾಸಕ ಹೆಚ್​.ಡಿ ರೇವಣ್ಣ ಮತ್ತು ಮಗ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಾಲು ಸಾಲು ಆರೋಪಗಳು ಮಾಡಲಾಗಿದೆ.

ಇದರಿಂದ ಮಗನ ಕೇಸ್​ನಿಂದ ತಾಯಿಗೆ ಸಂಕಷ್ಟ ಎದುರಾಗುತ್ತಾ ಎಂದು ಕಾದು ನೋಡಬೇಕಿದೆ.

Advertisement
Tags :
Advertisement