For the best experience, open
https://m.newskannada.com
on your mobile browser.
Advertisement

ಮದುವೆ ವಿಚಾರ: ಕರ್ನಾಟಕದಲ್ಲಿ ಆತ್ಮಹತ್ಯೆಗೆ ಶರಣಾಗುವೆ ಎಂದ ನಟಿ ವಿಜಯಲಕ್ಷ್ಮಿ!

ನಟಿ ವಿಜಯಲಕ್ಷ್ಮಿ ಕೆಲ ವರ್ಷಗಳಿಂದಲೂ ವಿವಾದಗಳಿಂದಲೇ ಸದ್ದು ಮಾಡಿದ್ರು. ಕನ್ನಡ ಹಾಗೂ ತಮಿಳು, ತೆಲುಗಿನಲ್ಲಿ ಅನೇಕ ಸಿನಿಮಾಗಳನ್ನು ಮಾಡಿದ್ದ ವಿಜಯಲಕ್ಷ್ಮಿ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿಯಾಗಿದ್ದಾರೆ. ಇದೀಗ ನಟಿ ಹೊಸ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
10:29 PM Mar 06, 2024 IST | Ashitha S
ಮದುವೆ ವಿಚಾರ  ಕರ್ನಾಟಕದಲ್ಲಿ ಆತ್ಮಹತ್ಯೆಗೆ ಶರಣಾಗುವೆ ಎಂದ ನಟಿ ವಿಜಯಲಕ್ಷ್ಮಿ

ಬೆಂಗಳೂರು: ನಟಿ ವಿಜಯಲಕ್ಷ್ಮಿ ಕೆಲ ವರ್ಷಗಳಿಂದಲೂ ವಿವಾದಗಳಿಂದಲೇ ಸದ್ದು ಮಾಡಿದ್ರು. ಕನ್ನಡ ಹಾಗೂ ತಮಿಳು, ತೆಲುಗಿನಲ್ಲಿ ಅನೇಕ ಸಿನಿಮಾಗಳನ್ನು ಮಾಡಿದ್ದ ವಿಜಯಲಕ್ಷ್ಮಿ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿಯಾಗಿದ್ದಾರೆ. ಇದೀಗ ನಟಿ ಹೊಸ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

ನಾಮ್​ ತಮಿಳರ್​ ಪಾರ್ಟಿಯ ಸೀಮಾನ್​ ನನಗೆ ಮೋಸ ಮಾಡಿದ್ದಾರೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ಇದೇ ನನ್ನ ಕೊನೆಯ ವಿಡಿಯೋ ನಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಮೂಲಕ ಎಚ್ಚರಿಕೆ ನೀಡಿದ್ದಾರೆ.

ನನ್ನ ಸಹೋದರಿಗೆ ಉಂಟಾಗಿದ್ದ ಸಮಸ್ಯೆಯಿಂದಾಗಿ ನಾನು ಮೊದಲ ಬಾರಿಗೆ ಸೀಮಾನ್​ ಅವರನ್ನು ಭೇಟಿ ಮಾಡಿದೆ. ಆಗ ಸೀಮಾನ್​ ಗೆ ಮದುವೆ ಆಗಿರಲಿಲ್ಲ. ನನ್ನನ್ನು ಮದುವೆ ಆಗುವುದಾಗಿ ಹೇಳಿದ್ದ, ನನ್ನ ಜೊತೆ ಆತ ಮೂರು ವರ್ಷ ಇದ್ದ. ಅಷ್ಟೇ ಅಲ್ಲದೆ ನನ್ನನ್ನು ಗುಟ್ಟಾಗಿ ಮದುವೆ ಕೂಡ ಆಗಿದ್ದಾನೆ. ನನ್ನ ಬದುಕನ್ನೇ ಹಾಳು ಮಾಡಿಬಿಟ್ಟ. ಇದೀಗ ನನ್ನನ್ನು ಒಂಟಿ ಮಾಡಿದ್ದಾನೆ ಎಂದು ವಿಜಯಲಕ್ಷ್ಮಿ ತನ್ನ ಗೋಳು ತೋಡಿಕೊಂಡಿದ್ದಾರೆ.

Advertisement

ಇದು ನನ್ನ ಕೊನೆಯ ವಿಡಿಯೋ ಎಂದು ಹೇಳಿದ ನಟಿ ವಿಜಯಲಕ್ಷ್ಮಿ ಇನ್ನು ಎರಡು ದಿನದೊಳಗೆ ಕರ್ನಾಟಕದಲ್ಲೇ ನಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ದಾರೆ. ನಾನು ಕರ್ನಾಟಕದಲ್ಲಿ ಸಾಯಲು ಸಿದ್ಧಳಾಗಿದ್ದೇನೆ. ಇದಕ್ಕೆಲ್ಲ ಸೀಮಾನ್​ ಕಾರಣ ಎಂದು ವಿಜಯಲಕ್ಷ್ಮಿ ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ. ತಮಿಳುನಾಡಿಗೆ ಹಾಗೂ ಇಲ್ಲಿನ ಜನರಿಗೆ ಇದು ನನ್ನ ಕೊನೆಯ ವಿಡಿಯೋ ಎಂದು ನಟಿ ಹೇಳಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.

Advertisement
Tags :
Advertisement