ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿಜಯೇಂದ್ರ- ಯತ್ನಾಳ್ ಜಟಾಪಟಿ: ದೆಹಲಿಗೆ ಹೋಗಿ ಬಂದ ನಂತರ ಎಲ್ಲವೂ ಸರಿಯಾಗುತ್ತದೆ

ಬಸನಗೌಡ ಪಾಟೀಲ್ ಯತ್ನಾಳ್ ಮಾತಿನ ಮೂಲಕ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ದೆಹಲಿಗೆ ಹೋಗಿ ಚರ್ಚೆ ಮಾಡುತ್ತೇನೆ ಎಂದಿದ್ದಾರೆ. ಅವರು ದೆಹಲಿಗೆ ಹೋಗಿ ಬಂದ ನಂತರ ಎಲ್ಲವೂ ಸರಿಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
06:57 AM Dec 10, 2023 IST | Ashika S

ಉಡುಪಿ: ಬಸನಗೌಡ ಪಾಟೀಲ್ ಯತ್ನಾಳ್ ಮಾತಿನ ಮೂಲಕ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ದೆಹಲಿಗೆ ಹೋಗಿ ಚರ್ಚೆ ಮಾಡುತ್ತೇನೆ ಎಂದಿದ್ದಾರೆ. ಅವರು ದೆಹಲಿಗೆ ಹೋಗಿ ಬಂದ ನಂತರ ಎಲ್ಲವೂ ಸರಿಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಯತ್ನಾಳ್ ಅಸಮಾಧಾನ ವಿಚಾರಕ್ಕೆ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಬಿಜೆಪಿಯ ಒಳ್ಳೆಯ ಮುಖಂಡರಲ್ಲಿ ಒಬ್ಬರು. ಸ್ವಾಭಾವಿಕವಾಗಿಯೇ ಕೆಲವೊಂದು ಮಾತುಗಳನ್ನು ಆಡಿದ್ದಾರೆ. ಎಲ್ಲಾ ಗೊಂದಲಗಳು ಪರಿಹಾರವಾಗುತ್ತದೆ ತೊಂದರೆ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಎಲ್ಲಾ ಸಮಸ್ಯೆಗಳ್ನು ಪರಿಹರಿಸುತ್ತೇವೆ. ಪರಿಹಾರಕ್ಕಾಗಿ ಒಟ್ಟಿಗೆ ಕೆಲಸ ಮಾಡುತ್ತೇವೆ. ನಮಗಿಂತ ದೊಡ್ಡವರು ಸೂಕ್ತ ಕಾಲದಲ್ಲಿ ತೀರ್ಮಾನ ಮಾಡುತ್ತಾರೆ. ಶಿಸ್ತು ಕ್ರಮಕ್ಕಿಂತ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಭಾವನೆ ವಿಜಯೇಂದ್ರ ಅವರಲ್ಲಿದೆ ಎಂದರು.

ಮೌಲ್ವಿ ಹಾಶ್ಮಿ ವಿರುದ್ದ ಯತ್ನಾಳ್ ಆರೋಪ ವಿಚಾರಕ್ಕೆ ಉತ್ತರಿಸಿದ ಅವರು, ಯತ್ನಾಳ್ ಒಂದಿಷ್ಟು ಆರೋಪಗಳನ್ನು ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರು ಒಂದಿಷ್ಟು ಹೇಳಿಕೆ ಕೊಟ್ಟಿದ್ದಾರೆ. ವಾಸ್ತವಿಕ ಸತ್ಯ ಏನು? ತಿಳಿಯಬೇಕು. ಯತ್ನಾಳ್ ಅವರ ಪ್ರತಿಕ್ರಿಯೆ ನೋಡಿ ನಾವು ಏನಾದರೂ ಹೇಳಬಹುದು ಎಂದು ಹೇಳಿದರು.

Advertisement

ವಿಷಯಗಳು ಜಾಸ್ತಿಯಾದಾಗ ಕಲಾಪದಲ್ಲಿ ಒಮ್ಮೊಮ್ಮೆ ಗಡಿಬಿಡಿ ಆಗುತ್ತೆ. ನಮ್ಮಲ್ಲಿ ಒಮ್ಮತ ಇದೆ ವಿಷಯದ ಒತ್ತಡ ಜಾಸ್ತಿ ಇದೆ ಅಷ್ಟೇ ಎಂದರು.

ಡಿಕೆಶಿ ಖರ್ಗೆ ಪರಮೇಶ್ವರ್ ಮಾತ್ರವಲ್ಲ ನಮ್ಮ ಪಕ್ಷ ಮತ್ತು ಜೆಡಿಎಸ್ ನವರು ಖಾಸಗಿ ಶಾಲೆಗಳನ್ನು ನಡೆಸುತ್ತಾರೆ. ಖಾಸಗಿ ಶಾಲೆಗಳಲ್ಲಿ ಎನ್ ಇಪಿ ಇದೆ. ಆದರೆ ಬಡವರು ಕಲಿಯುವ ಸರ್ಕಾರಿ ಶಾಲೆಗಳಲ್ಲಿ ಎನ್ ಇಪಿ ಬೇಡ ಎನ್ನುತ್ತಿದ್ದಾರೆ. ಅಲೆಮಾರಿಗಳು ಬಡವರ ಮಕ್ಕಳು ಹೋಗುವ ಶಾಲೆಗಳಲ್ಲಿ ಇದರಿಂದ ಅನ್ಯಾಯವಾಗುತ್ತದೆ. 48000 ಸರ್ಕಾರಿ ಶಾಲೆಗಳಿವೆ. ಬಡವರ ಮಕ್ಕಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಬೇಡ ಎಂದರೆ ಏನು ಅರ್ಥ? ಎಂದು ಪ್ರಶ್ನಿಸಿದರು.

Advertisement
Tags :
LatetsNewsNewsKannadaಕೋಟ ಶ್ರೀನಿವಾಸ ಪೂಜಾರಿಚರ್ಚೆದೆಹಲಿಬಸನಗೌಡ ಪಾಟೀಲ್ ಯತ್ನಾಳ್ಭಾವನೆವಿಧಾನ ಪರಿಷತ್‌
Advertisement
Next Article