For the best experience, open
https://m.newskannada.com
on your mobile browser.
Advertisement

ಅಮ್ಮನ ನೋವಿನಲ್ಲೇ ಕುಸಿದು ಬಿದ್ದ ವಿನೋದ್ ರಾಜ್‌

ಕನ್ನಡ ಚಲನಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ವಿಧಿವಶರಾಗಿದ್ದಾರೆ. ನೆಲಮಂಗಲದ ತೋಟದ ಮನೆಯಲ್ಲಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದ ಲೀಲಾವತಿ ಅವರನ್ನ ಆಸ್ಪತ್ರೆಗೆ ಸಾಗಿಸಲಾಯಿತು. ಖಾಸಗಿ ಆಸ್ಪತ್ರೆಯಲ್ಲಿ ಲೀಲಾವತಿ ಅವರು ನಿಧನರಾಗಿದ್ದಾರೆ.
06:41 PM Dec 08, 2023 IST | Ashitha S
ಅಮ್ಮನ ನೋವಿನಲ್ಲೇ ಕುಸಿದು ಬಿದ್ದ ವಿನೋದ್ ರಾಜ್‌

ಬೆಂಗಳೂರು: ಕನ್ನಡ ಚಲನಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ವಿಧಿವಶರಾಗಿದ್ದಾರೆ. ನೆಲಮಂಗಲದ ತೋಟದ ಮನೆಯಲ್ಲಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದ ಲೀಲಾವತಿ ಅವರನ್ನ ಆಸ್ಪತ್ರೆಗೆ ಸಾಗಿಸಲಾಯಿತು. ಖಾಸಗಿ ಆಸ್ಪತ್ರೆಯಲ್ಲಿ ಲೀಲಾವತಿ ಅವರು ನಿಧನರಾಗಿದ್ದಾರೆ.

Advertisement

ಅಮ್ಮನನ್ನು ಆಸ್ಪತ್ರೆಗೆ ಸಾಗಿಸುವಾಗ ನಟ ವಿನೋದ್ ರಾಜ್ ಅವರು ಕುಸಿದು ಬಿದ್ದಿದ್ದಾರೆ. ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ವಿನೋದ್ ರಾಜ್ ಅಸ್ವಸ್ಥರಾದ ಅಮ್ಮನ ಕಂಡು ಗಾಬರಿಯಾಗಿದ್ದರು. ಆ್ಯಂಬುಲೆನ್ಸ್‌ನಿಂದ ಆಸ್ಪತ್ರೆಗೆ ಸಾಗಿಸುವಾಗ ವಿನೋದ್ ರಾಜ್ ಅಮ್ಮನ ನೋವಿನಲ್ಲೇ ನೆಲಕ್ಕೆ ಕುಸಿದು ಬಿದ್ದರು. ತಕ್ಷಣವೇ ಅಕ್ಕ-ಪಕ್ಕದಲ್ಲಿದ್ದವರು ವಿನೋದ್ ರಾಜ್ ಅವರ ಸಹಾಯದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಕನ್ನಡದ ಹಿರಿಯ ನಟಿ ಲೀಲಾವತಿ ಅವರು 86ನೇ ವಯಸ್ಸಿಗೆ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ತಿಂಗಳಿಂದ ಲೀಲಾವತಿ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಇತ್ತೀಚೆಗೆ ಮಗನ ಮೂಲಕ ಲೀಲಾವತಿ ಅಮ್ಮನವರು ತಮ್ಮ ಕನಸಿನಂತೆ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ ಮಾಡಿದ್ದರು.

Advertisement

Advertisement
Tags :
Advertisement