For the best experience, open
https://m.newskannada.com
on your mobile browser.
Advertisement

"ಚೆಲ್ಲದಿರಿ ಅನ್ನ ಬಡವರಿಗದೇ ಚಿನ್ನ"; ಸ್ವಿಗ್ಗಿಯ ವೈರಲ್‌ ಪೋಸ್ಟ್​​​

ಅಗತ್ಯಕ್ಕಿಂತ ಹೆಚ್ಚು ಅನ್ನವನ್ನು ತೆಗೆದುಕೊಂಡು ನಂತರ ಅದನ್ನು ಬಿಸಾಡಬೇಡಿ, ಅನ್ನ ದೇವರಿಗೆ ಸಮಾನ ಎಂದು ಹೇಳಿದ್ರೂ ಕೂಡಾ, ಈ ಮಾತುಗಳಿಗೆ ಕ್ಯಾರೇ ಅನ್ನದೆ ಹಲವರು ಪ್ರತಿನಿತ್ಯ ತಿನ್ನೋ ಅನ್ನವನ್ನೇ ಎಸೆಯುತ್ತಿದ್ದಾರೆ. ಹೀಗೆ ಊಟ ಬಿಸಾಡುವವರಿಗೆ ತಿಳಿ ಹೇಳಲು ಸ್ವಿಗಿ ಒಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸ್ವಿಗ್ಗಿಯ ಈ ಉತ್ತಮ ನಡೆಯನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ.
01:16 PM May 05, 2024 IST | Ashitha S
 ಚೆಲ್ಲದಿರಿ ಅನ್ನ ಬಡವರಿಗದೇ ಚಿನ್ನ   ಸ್ವಿಗ್ಗಿಯ ವೈರಲ್‌ ಪೋಸ್ಟ್​​​

ಬೆಂಗಳೂರು: ಅಗತ್ಯಕ್ಕಿಂತ ಹೆಚ್ಚು ಅನ್ನವನ್ನು ತೆಗೆದುಕೊಂಡು ನಂತರ ಅದನ್ನು ಬಿಸಾಡಬೇಡಿ, ಅನ್ನ ದೇವರಿಗೆ ಸಮಾನ ಎಂದು ಹೇಳಿದ್ರೂ ಕೂಡಾ, ಈ ಮಾತುಗಳಿಗೆ ಕ್ಯಾರೇ ಅನ್ನದೆ ಹಲವರು ಪ್ರತಿನಿತ್ಯ ತಿನ್ನೋ ಅನ್ನವನ್ನೇ ಎಸೆಯುತ್ತಿದ್ದಾರೆ. ಹೀಗೆ ಊಟ ಬಿಸಾಡುವವರಿಗೆ ತಿಳಿ ಹೇಳಲು ಸ್ವಿಗಿ ಒಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸ್ವಿಗ್ಗಿಯ ಈ ಉತ್ತಮ ನಡೆಯನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ.

Advertisement

ಈ ಕುರಿತ ಪೋಸ್ಟ್‌ಪೋಸ್ಟ್‌ ಒಂದನ್ನು ಇಸ್ಮಾಯಿಲ್‌ ಪಟೇಲ್‌(@Ismail Patel) ಎಂಬವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಸ್ವಿಗ್ಗಿ ಊಟದ ಪೊಟ್ಟಣದ ಮೇಲಿನ ಅರ್ಥ ಪೂರ್ಣ ಸಾಲು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ಪೋಸ್ಟ್‌ ಅಲ್ಲಿ ಸ್ವಿಗ್ಗಿ ತಾನು ಗ್ರಾಹಕರಿಗೆ ನೀಡುವಂತಹ ಆಹಾರ ಪೊಟ್ಟಣದ ಮೇಲೆ “ಚೆಲ್ಲದಿರಿ ಅನ್ನ ಬಡವರಿಗದೇ ಚಿನ್ನ” ಎಂಬ ಅರ್ಥಗರ್ಭಿತ ವಾಕ್ಯವನ್ನು ಬರೆದಿರುವಂತಹ ದೃಶ್ಯವನ್ನು ಕಾಣಬಹುದು.

ಅನೇಕರು ಮುತ್ತಿನಂತಹ ಮಾತುಗಳು ಎಂದು ಹೇಳುವ ಮೂಲಕ ಸ್ವಿಗ್ಗಿಯ ಈ ನಡೆಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

Advertisement

New Project (1)

Advertisement
Tags :
Advertisement