For the best experience, open
https://m.newskannada.com
on your mobile browser.
Advertisement

ಗಂಡು ಮಗುವಿಗೆ ಜನ್ಮ ಕೊಟ್ಟ ಕೊಹ್ಲಿ-ಅನುಷ್ಕಾ ದಂಪತಿ

ಟೀಮ್‌ ಇಂಡಿಯಾದ ಮಾಜಿ ಕ್ಯಾಪ್ಟನ್​​ ವಿರಾಟ್‌ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 4 ದಿನಗಳ ಹಿಂದೆ ಫೆಬ್ರವರಿ 15ನೇ ತಾರೀಕು ಲಂಡನ್ನಿನ ಪ್ರತಿಷ್ಠತ ಆಸ್ಪತ್ರೆಯಲ್ಲೇ ಅನುಷ್ಕಾ ಶರ್ಮಾ ಗಂಡು ಮಗುವಿಗೆ ತಾಯಿ ಆಗಿದ್ದಾರೆ ಎಂದು ತಿಳಿದು ಬಂದಿದೆ.
10:01 PM Feb 20, 2024 IST | Gayathri SG
ಗಂಡು ಮಗುವಿಗೆ ಜನ್ಮ ಕೊಟ್ಟ ಕೊಹ್ಲಿ ಅನುಷ್ಕಾ ದಂಪತಿ

ಟೀಮ್‌ ಇಂಡಿಯಾದ ಮಾಜಿ ಕ್ಯಾಪ್ಟನ್​​ ವಿರಾಟ್‌ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 4 ದಿನಗಳ ಹಿಂದೆ ಫೆಬ್ರವರಿ 15ನೇ ತಾರೀಕು ಲಂಡನ್ನಿನ ಪ್ರತಿಷ್ಠತ ಆಸ್ಪತ್ರೆಯಲ್ಲೇ ಅನುಷ್ಕಾ ಶರ್ಮಾ ಗಂಡು ಮಗುವಿಗೆ ತಾಯಿ ಆಗಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಇನ್ನು, ತಂದೆಯಾಗುತ್ತಿದ್ದಂತೆ ಕೊಹ್ಲಿ ಇನ್‌ಸ್ಟಾ ಸೇರಿದಂತೆ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಭಾವನಾತ್ಮಕ ಸಂದೇಶ ಬರೆದಿದ್ದಾರೆ. ವಿರಾಟ್‌ ಕೊಹ್ಲಿ ಸಂತಸದ ಕ್ಷಣಕ್ಕೆ ಟೀಮ್‌ ಇಂಡಿಯಾ ಸಹ ಆಟಗಾರರು ಶುಭ ಹಾರೈಸಿದ್ದಾರೆ. ಇನ್ನೂ ಕೊಹ್ಲಿ ಮಗನಿಗೆ ಅಕಾಯ್​ ಎಂದು ನಾಮಕರಣ ಮಾಡಲಾಗಿದೆ.

ನಮಗೆ ಮುದ್ದಾದ ಗಂಡು ಮಗು ಜನಿಸಿದೆ ಎಂಬ ಸುದ್ದಿ ನಿಮ್ಮೊಟ್ಟಿಗೆ ಹಂಚಿಕೊಳ್ಳಲು ಖುಷಿ ಆಗುತ್ತಿದೆ. ನಮ್ಮ ಮುದ್ದಿನ ಮಗಳು ವಮಿಕಾಗೆ ಅಕಾಯ್​​ ತಮ್ಮನಾಗಿ ಬಂದಿದ್ದಾನೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆ ಮತ್ತು ಪ್ರಾರ್ಥನೆಗೆ ಧನ್ಯವಾದಗಳು. ತಾಯಿ ಅನುಷ್ಕಾ ಹಾಗೂ ಮಗು ಆರೋಗ್ಯದಿಂದ ಇದ್ದಾರೆ. ಈ ಸಲವೂ ನಮ್ಮ ಖಾಸಗಿತನವನ್ನು ಗೌರವಿಸುತ್ತೀರಿ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Advertisement

Advertisement
Tags :
Advertisement