For the best experience, open
https://m.newskannada.com
on your mobile browser.
Advertisement

ಇನ್ಮುಂದೆ ನನ್ನನ್ನು ಕಿಂಗ್ ಕೊಹ್ಲಿ ಎಂದು ಕರೆಯಬೇಡಿ ಎಂದಿದ್ದೇಕೆ ವಿರಾಟ್?

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿನ್ನೆ (ಮಾ. 19) ರಂದು ನಡೆದ ಆರ್​ಸಿಬಿ ತಂಡದ ಅನ್​ಬಾಕ್ಸ್ ಕಾರ್ಯಕ್ರಮದಲ್ಲಿ ಕಿಂಗ್ ಕೊಹ್ಲಿ ಮಿಂಚಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕಾಣಿಸಿಕೊಂಡ ದ್ಯಾನಿಶ್ ಸೇಠ್ ವಿರಾಟ್ ಕೊಹ್ಲಿಯನ್ನು ಕಿಂಗ್ ಎಂದು ಸಂಬೋಧಿಸಿದರು. ಈ ವೇಳೆ ಆ ರೀತಿಯಾಗಿ ಕರೆಯಬೇಡಿ ಎಂದ ಕೊಹ್ಲಿ, ಆ ಥರ ಕರೆಯುವುದರಿಂದ ನನಗೆ ಮುಜುಗರವಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ಯಾರು ಸಹ ಕಿಂಗ್ ಎಂದು ಕರೆಯಬೇಡಿ ಎಂದು ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
09:04 AM Mar 20, 2024 IST | Gayathri SG
ಇನ್ಮುಂದೆ ನನ್ನನ್ನು ಕಿಂಗ್ ಕೊಹ್ಲಿ ಎಂದು ಕರೆಯಬೇಡಿ ಎಂದಿದ್ದೇಕೆ ವಿರಾಟ್

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿನ್ನೆ (ಮಾ. 19) ರಂದು ನಡೆದ ಆರ್​ಸಿಬಿ ತಂಡದ ಅನ್​ಬಾಕ್ಸ್ ಕಾರ್ಯಕ್ರಮದಲ್ಲಿ ಕಿಂಗ್ ಕೊಹ್ಲಿ ಮಿಂಚಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕಾಣಿಸಿಕೊಂಡ ದ್ಯಾನಿಶ್ ಸೇಠ್ ವಿರಾಟ್ ಕೊಹ್ಲಿಯನ್ನು ಕಿಂಗ್ ಎಂದು ಸಂಬೋಧಿಸಿದರು. ಈ ವೇಳೆ ಆ ರೀತಿಯಾಗಿ ಕರೆಯಬೇಡಿ ಎಂದ ಕೊಹ್ಲಿ, ಆ ಥರ ಕರೆಯುವುದರಿಂದ ನನಗೆ ಮುಜುಗರವಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ಯಾರು ಸಹ ಕಿಂಗ್ ಎಂದು ಕರೆಯಬೇಡಿ ಎಂದು ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Advertisement

ಆದರೆ ವಿರಾಟ್ ಕೊಹ್ಲಿಯ ಈ ಮನವಿಗೆ ಅಭಿಮಾನಿಗಳು ನೋ ಎಂದಿದ್ದಾರೆ. ಕಿಂಗ್ ಕೊಹ್ಲಿಯ ಘೋಷಣೆಯೊಂದಿಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತೆ ಉತ್ತರ ನೀಡಿದ್ದರು. ಏಕೆಂದರೆ ವಿರಾಟ್ ಕೊಹ್ಲಿಯನ್ನು ಈಗಾಗಲೇ ಅಭಿಮಾನಿಗಳು ಕ್ರಿಕೆಟ್​ನ ಕಿಂಗ್ ಎಂದು ಪರಿಗಣಿಸಿದ್ದಾರೆ.

Advertisement
Advertisement
Tags :
Advertisement